*ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ ದೊಡ್ಡಪೇಟೆಯ ಪಿಎಸ್ ಐ ನಾರಾಯಣ ಮಧುಗಿರಿ* *ಏನಿದು ಪ್ರಕರಣ?*

*ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ ದೊಡ್ಡಪೇಟೆಯ ಪಿಎಸ್ ಐ ನಾರಾಯಣ ಮಧುಗಿರಿ*

*ಏನಿದು ಪ್ರಕರಣ?*

ಶಿವಮೊಗ್ಗದ ಇಲ್ಯಾಜ್ ನಗರ, ಫಾತಿಮಾ ರಸ್ತೆ, ಮೌಂಟ್ ಹೀರಾ ಶಾಲೆಯ ಬಳಿ, ತುಂಗಾಚಾನಲ್ ಸಮೀಪ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತರನ್ನು ಸವಾಯಿ ಪಾಳ್ಯದ ಮೊಹಮ್ಮದ್ ಹಮ್ಜದ್ ಅಜರುದ್ದೀನ್ @ ಅಜರ್ @ ಫುಕು(28) ಮತ್ತು ವಾದಿಯೇ ಹುದಾದ ವಸೀಂ ಅಕ್ರಂ @ ಸೈಲೆಂಟ್ @ ಗೋಗೋ ಎಂದು ಗುರುತಿಸಲಾಗಿದೆ.

*ಪೊಲೀಸ್ ಪ್ರಕಟಣೆಯಲ್ಲೇನಿದೆ?*

01-03-2026 ರಂದು ಸಂಜೆ 05.00 ಗಂಟೆಗೆ ದೊಡ್ಡಪೇಟೆ ಪೊಲೀಸ್ ಠಾಣಾ ಸರಹದ್ದಿನ *ಇಲಿಯಾಜ್ ನಗರ ಫಾತಿಮಾ ರಸ್ತೆ, ಮೌಂಟ್ ಹಿರಾ ಶಾಲೆಯ ಹತ್ತಿರ* ತುಂಗಾ ಚಾನಲ್ ಬಳಿ *02 ಜನ ಆರೋಪಿತರು ಸ್ಕೂಟಿಯನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ* ಮಾಡುತ್ತಿರುತ್ತಾರೆಂಬ ಮಾಹಿತಿ ಮೇರೆಗೆ *ಪಿಎಸ್ಐ ನಾರಾಯಣ ಮಧುಗಿರಿ* ರವರು ಠಾಣಾ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದಾರೆ.

*ಆರೋಪಿತರಿಂದ 1) 02 ಕೆಜಿ 66 ಗ್ರಾಂ ತೂಕದ ಒಣ ಗಾಂಜಾ, 2) ಕೆಎ 14 ಇಎಫ್ 1649 ಸ್ಕೂಟಿಯನ್ನು ಅಮಾನತ್ತುಪಡಿಸಿಕೊಂಡು ಠಾಣಾ ಗುನ್ನೆ ನಂ 83/2026 ಕಲಂ 8(C ) 20 (b) (II) B, NDPS ACT – 1985 ರೀತ್ಯ ಪ್ರಕರಣ ದಾಖಲಿಸಿ* ತನಿಖೆ ಕೈಗೊಂಡಿದೆ.

ಪ್ರಕರಣದ *ಎ1 ಆರೋಪಿಯಾದ ಮೊಹಮ್ಮದ್ ಹಮ್ಮದ್ ಅಜರುದ್ದೀನ್ @ ಅಜರ್ @ ಫುಕು ತಂದೆ ಮೊಹಮ್ಮದ್ ಹಮ್ಮದ್ ಷರೀಪ್ 28 ವರ್ಷ, ಮುಸ್ಲಿಂ ಜನಾಂಗ, ಬಟ್ಟೆ ವ್ಯಾಪಾರ,* ವಾಸ ಶಾದಾಬ್ ಶಾದಿ ಮಹಲ್ ಹತ್ತಿರ, ಸವಾಯಿಪಾಳ್ಯ ಮುಖ್ಯರಸ್ತೆ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

*ಎ2 ಆರೋಪಿ ವಸೀಂ ಅಕ್ರಂ @ ಸೈಲೆಂಟ್, @ ಗೋಗೋ ತಂದೆ ಮಹಮ್ಮದ್ ಫಯಾಜ್ 24 ವರ್ಷ, ಮುಸ್ಲಿಂ ಜನಾಂಗ,* ವಾಸ ವಾದಿಹುದಾ ಶಿವಮೊಗ್ಗ ಈತನು ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಸಿಬ್ಬಂದಿಯವರ ತಂಡ ರಚನೆ ಮಾಡಲಾಗಿದೆ.

ಎ1 ಆರೋಪಿತನ ಮೇಲೆ ಈ ಹಿಂದೆ ಕೆಳಕಂಡ ಪ್ರಕರಣಗಳು ದಾಖಲಾಗಿರುತ್ತವೆ.
1) ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್ 406/2021 ಕಲಂ 143, 147, 148, 323, 324 307 504 506 ರೆ/ವಿ 149 ಐಪಿಸಿ, 2)ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್ 147/2022 ಕಲಂ 399, 402 ಐಪಿಸಿ, 3)ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್419/2022 ಕಲಂ 324, 354, 448, 427, 505(1) ಐಪಿಸಿ ಮತ್ತು ಕಲಂ 02 ಕೆ.ಪಿ.ಡಿ.ಎಲ್.ಪಿ ಕಾಯಿದೆ, 4)ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್418/2022 ಕಲಂ 323, 307, 506 ರೆ.ವಿ 34 ಐಪಿಸಿ, 5)ದೊಡ್ಡಪೇಟೆ, ಪೊಲೀಸ್ ಠಾಣೆ, ಗುನ್ನೆ ನಂಬರ್282/2025 ಕಲಂ 189(2), 191(2), 191(3), 352, 308(2), 109(1), 118(1), 115(2), 351(2) ಸಹಿತ 190 ಬಿಎನ್ ಎಸ್ -2023, 6)ತುಂಗಾನಗರ, ಪೊಲೀಸ್ ಠಾಣೆ, ಗುನ್ನೆ ನಂಬರ್712/2022 ಕಲಂ 8(ಸಿ) 20( ಬಿ) ಎನ್ ಡಿಪಿಎಸ್ ಕಾಯಿದೆ.