*ಮನೆಯಲ್ಲಿ 7.90 ಲಕ್ಷ ರೂ., ಮೌಲ್ಯದ ಚಿನ್ನಾಭರಣ ಕದ್ದಿದ್ದ ಮಹಿಳೆಯೂ ಸೇರಿ ನಾಲ್ವರ ಬಂಧನ* *ನಗರದ ಮನೆಯ ಕಳ್ಳರನ್ನು ಹಿಡಿಯುವ ರೋಚಕ ಕಾರ್ಯಾಚರಣೆ ಹೇಗಿತ್ತು?*

*ಮನೆಯಲ್ಲಿ 7.90 ಲಕ್ಷ ರೂ., ಮೌಲ್ಯದ ಚಿನ್ನಾಭರಣ ಕದ್ದಿದ್ದ ಮಹಿಳೆಯೂ ಸೇರಿ ನಾಲ್ವರ ಬಂಧನ*

*ನಗರದ ಮನೆಯ ಕಳ್ಳರನ್ನು ಹಿಡಿಯುವ ರೋಚಕ ಕಾರ್ಯಾಚರಣೆ ಹೇಗಿತ್ತು?*

ಹೊಸನಗರ ತಾಲ್ಲೂಕಿನ ನಗರ ದಲ್ಲಿನ ಮನೆಯೊಂದರ ಹಿಂಬಾಗಿಲ ಬೀಗ ಮುರಿದು 7.90 ಲಕ್ಷ ರೂ.,ಗಳ ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ಕದ್ದೊಯ್ದಿದ್ದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಕಳ್ಳರನ್ನು ಬಂಧಿಸಿರುವ ಪೊಲೀಸರು, ಕದ್ದ ಮಾಲನ್ನೂ ವಶಕ್ಕೆ ಪಡೆದಿದ್ದಾರೆ.

*ಏನಿದು ಘಟನೆ? ಪೊಲೀಸ್ ಇಲಾಖೆ ಏನು ಹೇಳುತ್ತದೆ?*

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ *ದಿನಾಂಕ:-27.12.2025 ರಂದು* ಶ್ರೀ ರಾಜೇಂದ್ರ ಶೆಟ್ಟಿ ಬಿನ್ ಸುಬ್ಬಯ್ಯ ಶೆಟ್ಟಿ, ವಾಸ ಗೌರಿಕೆರೆ, ನಿಟ್ಟೂರು, ನಾಗೋಡಿ ಗ್ರಾಮ,ಕಸಬಾ ಹೋಬಳಿ, ಹೊಸನಗರರವರ *ಮನೆಯಲ್ಲಿ ಯಾರೋ ಕಳ್ಳರು ಸದರಿಯವರ ಮನೆಯ ಮುಂಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಮೀಟಿ ತೆರೆದು ಮನೆಯಲ್ಲಿದ್ದ ಚಿನ್ನಾಭರಣಗಳು ಹಾಗೂ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು* ಕಳ್ಳತನ ಮಾಡಿದ ಕಳ್ಳರನ್ನು ಮತ್ತು ಕಳುವಾದ ಮಾಲನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆ *ಗುನ್ನೆ ನಂ 66/2025 ರಲ್ಲಿ ಕಲಂ 331(3), 331(4), 305(ಎ)ಬಿ.ಎನ್.ಎಸ್ -2023 ರೀತ್ಯಾ ಪ್ರಕರಣ* ದಾಖಲಿಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ *ಮಾನ್ಯ ನಿಖಿಲ್.ಬಿ ಐಪಿಎಸ್,* ಜಿಲ್ಲಾ. ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಜಿಲ್ಲೆ, ಮತ್ತು *ಶ್ರೀ ಕಾರಿಯಪ್ಪ ವಿ ಜಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ, ಜಿಲೆ. *ಶ್ರೀ ರಮೇಶ್ ಕುಮಾರ್,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ, ರವರ ಮಾರ್ಗದರ್ಶನದಲ್ಲಿ, *ಶ್ರೀ ಅರವಿಂದ ಎನ್ ಕಲಗುಜ್ಜಿ* ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪವಿಭಾಗ ಹಾಗೂ *ಶ್ರೀ ಎಂ.ಐ ಗೌಡಪ್ಪಗೌಡ್ರ* ಪೊಲೀಸ್ ವೃತ್ತ ನಿರೀಕ್ಷಕರು ಹೊಸನಗರ ವೃತ್ತರವರ ಮೇಲ್ವಿಚಾರಣೆಯಲ್ಲಿ *ಶ್ರೀ ಶಿವಾನಂದ ಕೋಳಿ ಪಿ.ಎಸ್.ಐ, ನಗರ ಪೊಲೀಸ್ ಠಾಣೆ,* ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ *ಶ್ರೀ ಕುಮಾರ್ ಟಿ ಎ.ಎಸ್.ಐ,ಶ್ರೀಶೇಖ್ ಅಮೀರ್ ಜಾನ್ ಎ.ಎಸ್.ಐ ಶ್ರೀ ಕಿರಣ್ ಕುಮಾರ್ ಡಿ.ವೈ ಸಿ.ಹೆಚ್.ಸಿ-442, ಶ್ರೀ ಗಿರಿಪ್ರಸಾದ್ ಡಿಸಿ ಸಿ.ಹೆಚ್.ಸಿ-265, ಶ್ರೀ ವಿಶ್ವನಾಥ್ ಡಿ ಸಿ.ಹೆಚ್.ಸಿ-427, ಶ್ರೀ ಪ್ರವೀಣ್ ಕುಮಾರ್ ಬಿಎಸ್.ಹೆಚ್,ಸಿ-428 ಶ್ರೀ ಶಿವಕುಮಾರ ನಾಯ್ಕ ಸಿ.ಹೆಚ್.ಸಿ-459 (ಹೊಸನಗರಠಾಣೆ) ಶ್ರೀ ರವಿಚಂದ್ರ ಸಿಪಿಸಿ-1221, ಶ್ರೀ ಸಚಿನ್ ಸಿಪಿಸಿ-1835,ಶ್ರೀ ಮಂಜುನಾಥ ಸಿಪಿಸಿ-1619,ಶ್ರೀ ಲಕ್ಷ್ಮಣ ಜಿ,ಹೆಚ್ ಸಿಪಿಸಿ-1918,ಶ್ರೀ ಅಕ್ಷಯ ಕೆ.ಅರ್ ಸಿಪಿಸಿ-1895,ಕುಮಾರಿ ಶಿಲ್ಪಾ ಎನ್ ಮಪಿಸಿ-1605,ಕುಮಾರಿ ಅನುಷಾ ಎಸ್ ಮಪಿಸಿ-1050 ಚಾಲಕರಾದ ಮಧುಸೂಧನ ಹಾಗೂ ಶಶಿಧರ ಎನ್ ಎ.ಪಿ.ಸಿ-255, ಹಾಗೂ ನಗರಠಾಣೆಯ ಸಿಬ್ಬಂದಿಗಳು ,ಜಿಲ್ಲಾ ಎ.ಎನ್.ಸಿ ಸಿಬ್ಬಂದಿಯವರಾದ ಗುರುರಾಜ್ ,ಇಂದ್ರೇಶ್ ಹಾಗೂ ಜಿಲ್ಲಾ ಬೆರಳಚ್ಚು ವಿಭಾಗ* ಶಿವಮೊಗ್ಗರವರ ತಾಂತ್ತಿಕ ಸಹಕಾರದೊಂದಿಗೆ ಕಳ್ಳತನ ಮಾಡಿದ ಕಳ್ಳರನ್ನು ಮತ್ತು ಕಳುವಾದ ಮಾಲನ್ನು ಪತ್ತೆ ಮಾಡಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕ:-18.02.2026 ರಂದು ಪ್ರಕರಣದ ಆರೋಪಿಗಳಾದ *ಎ1. ಮಹಮ್ಮದ್ ಇಮ್ರಾನ್ ಇಕ್ಕೇರಿ ಬಿನ್ ಅಬ್ದುಲ್ ಗಫಾರ್ ಇಕ್ಕೇರಿ 25 ವರ್ಷ, ಭಟ್ಕಳ ಉತ್ತರಕನ್ನಡ ಜಿಲ್ಲೆ. ಎ2. ಮಹಮ್ಮದ್ ಅಖೀಲ್ ಬಿನ್ ಮಹಮ್ಮದ್ ಜಾಫರ್ 24 ವರ್ಷ, ಶೇರ್ ಕುಳಿಕೊಂಡ ಭಟ್ಕಳ ಉತ್ತರಕನ್ನಡ ಜಿಲ್ಲೆ. ಎ3. ಅಮೀರ್ ಹಸನ್ ಬ್ಯಾರಿ ಬಿನ್ ಲೇಟ್ ಅಬ್ದುಲ್ ಬ್ಯಾರಿ 29 ವರ್ಷ, ಕೆಕೆ ಫಾರಂ ಗುಳಮಿ ಭಟ್ಕಳ ಉತ್ತರಕನ್ನಡ ಜಿಲ್ಲೆ ಮತ್ತು ಎ4. ಶ್ರೀಮತಿ ಬೇಬಿ ಹಾಜಿರ ಕೋಂ ಅಬ್ದುಲ್ ಗಫಾರ್ ಇಕ್ಕೇರಿ 55 ವರ್ಷ, ಚೌಥನಿ ಬ್ರಿಡ್ಸ್ ಮೀನು ಭಟ್ಕಳ ಉತ್ತರಕನ್ನಡ ಜಿಲ್ಲೆ.ಇವರುಗಳನ್ನು ದಸ್ತಗಿರಿ ಮಾಡಿ,* ಆರೋಪಿತರಿಂದ *30 ಗ್ರಾಂ ತೂಕದ ಬಂಗಾರದ ನೆಕ್ಲೇಸ್ ಅ.ಮೌಲ್ಯ 387000/- ರೂ , 06 ಗ್ರಾಂ ತೂಕದ ಬಂಗಾರದ ಬ್ರಾಸ್ ಲೇಟ್ ಅ.ಮೌಲ್ಯ 93000/- ರೂ ,50 ಗ್ರಾಂ ಬೆಳ್ಳಿಯ ವಸ್ತುಗಳು ಅ.ಮೌಲ್ಯ 5000/- ರೂ ,ಮೊಬೈಲ್ ಪೋನ್ ಅ.ಮೌಲ್ಯ 5000/- ರೂ ಹಾಗೂ ಕೃತ್ಯಕ್ಕೆ ಬಳಸಿದ ಟಾಟಾ ಇಟಿಯೋಸ್ ಕಾರು ಅಂದಾಜು ಮೌಲ್ಯ 300000/- ಎಲ್ಲಾ ಒಟ್ಟು 790000/- ರೂ ಮೌಲ್ಯದ ಸ್ವತ್ತುನ್ನು ಅಮಾನತ್ತು* ಪಡಿಸಿಕೊಳ್ಳಲಾಗಿರುತ್ತದೆ.

*ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ, ಜಿಲೆ.. ರವರು ಪ್ರಶಂಸಿಸಿ* ಅಭಿನಂದಿಸಿರುತ್ತಾರೆ.