ಉಪನ್ಯಾಸಕ ಕರಿಬಸಪ್ಪ ಹೆಚ್ ಟಿ ಯವರಿಗೆ ಡಾಕ್ಟರೇಟ್ ಪದವಿ

ಉಪನ್ಯಾಸಕ ಕರಿಬಸಪ್ಪ ಹೆಚ್ ಟಿ ಯವರಿಗೆ ಡಾಕ್ಟರೇಟ್ ಪದವಿ

ಕರಿಬಸಪ್ಪ. ಹೆಚ್. ಟಿ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಆನವಟ್ಟಿ, ಸೊರಬ ತಾ.ಇವರು ಡಾ. ಎಸ್ ಎಂ ಮುತ್ತಯ್ಯರವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ತತ್ವಪದ ಸಾಹಿತ್ಯದ ತಾತ್ವಿಕ ನೆಲೆಗಳು’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ
ಪಿಎಚ್. ಡಿ ಪದವಿ ಘೋಷಿಸಿದೆ. ಇವರ ಸಾಧನೆಗೆ ಬಂಧುಗಳು, ಪ್ರಾಚಾರ್ಯರು, ಸಹೋದ್ಯೋಗಿ ಮಿತ್ರರು, ಅಪಾರ ವಿದ್ಯಾರ್ಥಿ ಬಳಗ ಶುಭ ಹಾರೈಸಿದ್ದಾರೆ.