ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಇರುವ ಎರಡು ಕಣ್ಣುಗಳಲ್ಲಿ
ಒಂದರಲ್ಲಿ ಸತ್ಯವಿಡು
ಇನ್ನೊಂದರಲ್ಲಿ ಕನಸು…
2.
ಉಸಿರಿಗೆಂದೂ ಕೇಳಬೇಡ
ಉಳಿದ ಆಟವೆಷ್ಟೆಂದು?
ಸತ್ತ ಮನುಷ್ಯರನ್ನು ಕೇಳಿಬಿಡೊಮ್ಮೆ;
ಶವದ ಬಟ್ಟೆಯ ಸುಗಂಧ
ಹೇಗಿದೆಯೆಂದು?
3.
ಹೆಣ್ಣೆಂದಿಗೂ
ಸಾಮಾನ್ಯಳಲ್ಲ;
ಮಗಳಾದರೆ ಸಮೃದ್ಧಿಯೂ
ಹೆಂಡತಿಯಾದರೆ ಲಕ್ಷ್ಮಿಯೂ
ತಾಯಿಯಾದರೆ ಸ್ವರ್ಗವೂ…



