Legislative session from March 3; What were the decisions taken in the cabinet meeting?*ಮಾರ್ಚ್ 3ರಿಂದ ವಿಧಾನಮಂಡಲ ಅಧಿವೇಶನ; ಸಂಪುಟ ಸಭೆಯಲ್ಲಿ ಏನೆಲ್ಲಾ ನಿರ್ಧಾರ ಆದವು?* विधानसभा सत्र 3 मार्च से; कैबिनेट बैठक में क्या निर्णय लिए गए?*
*Legislative session from March 3; What were the decisions taken in the cabinet meeting?*
The cabinet meeting has given ex-post facto approval to hold the legislative session of both houses from March 3. The legislative assembly and legislative council sessions will be held from March 3, Minister H.K. Patil said after the cabinet meeting at the Vidhana Soudha. Similarly, the order to distribute 5 kg rice instead of direct cash transfer under the Annabhagya scheme has been given ex-post facto approval. The cabinet has approved the order of the food department.
In addition, the cabinet has approved the upgrading of Banavar Gram Panchayat in Arsikere taluk of Hassan district to Town Panchayat.
Administrative approval has been given to demolish the old building of the city’s Morarji Desai Residential School in Chamarajpet, Bengaluru and construct a new building on the same site at an estimated cost of Rs. 25 crores. Administrative approval has been given for the construction of residential school complexes for 61 residential schools run by the Karnataka Residential Educational Institutions Association under the jurisdiction of the Social Welfare Department at a total estimated cost of Rs. 1292.50 crores.
Approval of five important bills:
Today’s Cabinet meeting approved 5 important bills.
1. Approval of the Karnataka Agricultural Produce Market Business (Regulation and Development) (Amendment) Bill – 2025
2. Karnataka Prohibition of Excessive Interest (Amendment) Bill – 2025
3. Karnataka Moneylenders (Amendment) Bill – 2025
4. Karnataka Moneylenders (Amendment) Bill, 2025
5. Karnataka Civil Service (Direct Recruitment) Rules (General) (Amendment) 2024 Five bills approved by the Cabinet
################
*ಮಾರ್ಚ್ 3ರಿಂದ ವಿಧಾನಮಂಡಲ ಅಧಿವೇಶನ; ಸಂಪುಟ ಸಭೆಯಲ್ಲಿ ಏನೆಲ್ಲಾ ನಿರ್ಧಾರ ಆದವು?*
ಮಾರ್ಚ್ 3ರಿಂದ ಉಭಯ ಸದನಗಳ ವಿಧಾನಮಂಡಲ ಅಧಿವೇಶನ ನಡೆಸುವುದಕ್ಕೆ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ. ಮಾರ್ಚ್ 3ರಿಂದ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಅಧಿವೇಶನಗಳು ನಡೆಯಲಿವೆ ಎಂದು ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ಹಾಗೇ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೇರ ನಗದು ವರ್ಗಾವಣೆ ಬದಲಾಗಿ 5 ಕೆಜಿ ಅಕ್ಕಿ ವಿತರಿಸಲು ನೀಡಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಆಹಾರ ಇಲಾಖೆಯ ಆದೇಶಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಇದರ ಜೊತೆಗೆ, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಕಟ್ಟಡವನ್ನು 25 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ನಿವೇಶನ ಲಭ್ಯವಿರುವ 61 ವಸತಿ ಶಾಲೆಗಳಿಗೆ ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣದ ಕಾಮಗಾರಿಯನ್ನು ಒಟ್ಟು 1292.50 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಐದು ಪ್ರಮುಖ ವಿಧೇಯಕಗಳ ಅನುಮೋದನೆ:
ಇಂದಿನ ಸಚಿವ ಸಂಪುಟ ಸಭೆಯಲ್ಲಿ 5 ಪ್ರಮುಖ ವಿಧೇಯಕಗಳಿಗೆ ಅನುಮೋದನೆ ನೀಡಲಾಗಿದೆ.
1. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ – 2025 ಕ್ಕೆ ಅನುಮೋದನೆ
2. ಕರ್ನಾಟಕ ಅಧಿಕ ಬಡ್ಡಿ ನಿಷೇಧ (ತಿದ್ದುಪಡಿ) ವಿಧೇಯಕ – 2025
3. ಕರ್ನಾಟಕ ಗಿರಿವಿದಾರರ (ತಿದ್ದುಪಡಿ) ವಿಧೇಯಕ – 2025
4. ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ, 2025
5. ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) ನಿಯಮಗಳು (ಸಾಮಾನ್ಯ) (ತಿದ್ದುಪಡಿ) 2024 ಐದು ವಿಧೇಯಕ ಕ್ಯಾಬಿನೆಟ್ ಅನುಮೋದನೆ.
#################
*विधानसभा सत्र 3 मार्च से; कैबिनेट बैठक में क्या निर्णय लिए गए?*
कैबिनेट की बैठक में 3 मार्च से विधानसभा के दोनों सदनों का सत्र आयोजित करने को पूर्वव्यापी मंजूरी दे दी गई है। विधान सौध में कैबिनेट बैठक के बाद मंत्री एच.के. ने कहा कि विधान सभा और विधान परिषद के सत्र 3 मार्च से आयोजित किए जाएंगे। पाटिल ने कहा। इसी प्रकार, अन्नभाग्य योजना के तहत प्रत्यक्ष नकद हस्तांतरण के बदले 5 किलो चावल वितरित करने के आदेश को भी मंजूरी दे दी गई है। कैबिनेट की बैठक में खाद्य विभाग के आदेश को मंजूरी दे दी गई है।
इसके अलावा, मंत्रिमंडल ने हासन जिले के अरसीकेरे तालुक में बनवारा ग्राम पंचायत को नगर पंचायत में उन्नत करने को मंजूरी दे दी है।
बेंगलुरू के चामराजपेट स्थित मोरारजी देसाई आवासीय विद्यालय की पुरानी इमारत को ध्वस्त कर उसी स्थान पर 25 करोड़ रुपये की अनुमानित लागत से नई इमारत बनाने के लिए प्रशासनिक मंजूरी दे दी गई है। कर्नाटक आवासीय शैक्षणिक संस्थान संघ के अधिकार क्षेत्र के अंतर्गत 61 आवासीय विद्यालयों के लिए आवासीय विद्यालय परिसरों के निर्माण के लिए प्रशासनिक स्वीकृति दी गई है, जिनके लिए स्थल उपलब्ध हैं, जिसकी कुल अनुमानित लागत 1292.50 करोड़ रुपये है।
पांच महत्वपूर्ण विधेयकों को मंजूरी:
आज की कैबिनेट बैठक में पांच महत्वपूर्ण विधेयकों को मंजूरी दी गई।
1. कर्नाटक कृषि उपज मंडी व्यवसाय (विनियमन और विकास) (संशोधन) विधेयक- 2025 को मंजूरी
2. कर्नाटक अत्यधिक ब्याज निषेध (संशोधन) विधेयक – 2025
3. कर्नाटक जमींदार (संशोधन) विधेयक – 2025
4. कर्नाटक मनी लॉन्ड्रर्स (संशोधन) विधेयक, 2025
5. कर्नाटक सिविल सेवा (सीधी भर्ती) नियम (सामान्य) (संशोधन) 2024 पांच विधेयक कैबिनेट ने मंजूर किए