*ಶಿವಮೊಗ್ಗದ ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ರವರಿಗೊಂದು ಬಹಿರಂಗ ಪತ್ರ…* *ನಿಮ್ಮಿಂದ ಬಡ ಫುಟ್ ಪಾತ್ ವ್ಯಾಪಾರಿಗಳಿಂದ ಆಗುತ್ತಿದ್ದ ಸಮಸ್ಯೆ ಬಗೆಹರಿಯುತ್ತಿದೆ!* *ಶ್ರೀಮಂತ, ಪ್ರಭಾವಿ ಜನರಿಂದ ಹರಡುತ್ತಿರುವ ಭೀಕರ ಟ್ರಾಫಿಕ್ ಕ್ಯಾನ್ಸರಿಗೆ ಮದ್ದು ನಿಮ್ಮ ಬಳಿಯಲ್ಲೇ ಇದೆಯೇ?! ಅಥವಾ…*

*ಶಿವಮೊಗ್ಗದ ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ರವರಿಗೊಂದು ಬಹಿರಂಗ ಪತ್ರ…*

*ನಿಮ್ಮಿಂದ ಬಡ ಫುಟ್ ಪಾತ್ ವ್ಯಾಪಾರಿಗಳಿಂದ ಆಗುತ್ತಿದ್ದ ಸಮಸ್ಯೆ ಬಗೆಹರಿಯುತ್ತಿದೆ!*

*ಶ್ರೀಮಂತ, ಪ್ರಭಾವಿ ಜನರಿಂದ ಹರಡುತ್ತಿರುವ ಭೀಕರ ಟ್ರಾಫಿಕ್ ಕ್ಯಾನ್ಸರಿಗೆ ಮದ್ದು ನಿಮ್ಮ ಬಳಿಯಲ್ಲೇ ಇದೆಯೇ?! ಅಥವಾ…*

ಶಿವಮೊಗ್ಗದ ಕೆಲ ಪತ್ರಕರ್ತರ ದೈನಂದಿನ ಸೂಪರ್ ಕಾಪ್ ಆಗಿರುವ ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ರವರೇ…

ಶಿವಮೊಗ್ಗದಲ್ಲಿ ಬಹಳ ಜನ ಅಧಿಕಾರಿಗಳಿಂದ ಆಗದ ಕೆಲಸಗಳನ್ನು ನೀವು ಓರ್ವ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಮಾಡುತ್ತಿದ್ದೀರಿ. ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಅನ್ನುವುದಕ್ಕಿಂತ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ಅದು ಸಣ್ಣ ಸಾಧನೆಯಲ್ಲ.

ನೀವು ಮಿಳಘಟ್ಟ ರಸ್ತೆಯಲ್ಲಿ, ಖಾಸಗಿ ಬಸ್ ನಿಲ್ದಾಣದ ಹತ್ತಿರದ ಹೂವಿನ ಮಾರುಕಟ್ಟೆ ಕಿರಿಕಿರಿ ಸರಿ ಮಾಡಿದ್ರಿ…

ಶಿವಪ್ಪ ನಾಯಕ ಚರ್ಚ್ ಎದುರಿನ ಹೂವಿನ ಮಾರುಕಟ್ಟೆಯ ಫುಟ್ ಪಾತಿನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ಎರಡೆರಡು ಬಾರಿ ತೆರವುಗೊಳಿಸಿದ್ರಿ…

ಕುವೆಂಪು ರಸ್ತೆ, ದುರ್ಗಿಗುಡಿಯ ಮುಖ್ಯರಸ್ತೆ, ಮೆಗ್ಗಾನ್ ಮುಂದಿನ ಅನಧಿಕೃತ ಡಬ್ಬಾ ಅಂಗಡಿಗಳೆಲ್ಲ ಸ್ವಚ್ಛಗೊಳಿಸಿದಿರಿ…

ಪ್ರತಿನಿತ್ಯ ನೀವು ಸುದ್ದಿಯಲ್ಲಿರ್ತೀರಿ‌‌..‌‌.ಅಥವಾ ಕೆಲ ಪತ್ರಕರ್ತರು ನಿಮ್ಮನ್ನು(ಕೆಲವೊಮ್ಮೆ ನಾನೂ ಸೇರಿದಂತೆ) ಸುದ್ದಿಯಲ್ಲಿ ಇಟ್ಟಿರ್ತಾರೆ. ನಿಮ್ಮ ಕೆಲಸಗಳ ಮೂಲಕ ನೀವು ಸುದ್ದಿ ಮಾಡ್ತಿದ್ದೀರಿ…

ಆದರೆ, ಇದೇ ಹೊತ್ತಲ್ಲಿ ಬಹಳ ವಿಮರ್ಶೆಗಳೂ ನಡೆಯುತ್ತಿವೆ ನಿಮ್ಮ ಬಗ್ಗೆ… ಫುಟ್ ಪಾತಲ್ಲಿರೋರ ಬಗ್ಗೆ ಏನೋ ನೀವು ಸಕ್ಸಸ್ ಆಗ್ತಿದೀರಿ. ಆದರೆ, ಶ್ರೀಮಂತರು, ಪ್ರಭಾವಿಗಳು, ಹಣವಂತರಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ನೀವು ಬಗೆಹರಿಸಲು ಹಿಂದೆಮುಂದೆ ನೋಡುತ್ತಿರುವುದು ಮುಖ್ಯವಾಗಿ ಸಾರ್ವಜನಿಕ ಚರ್ಚೆಯ ವಿಷಯ.

ಖಾಸಗಿ ಆಸ್ಪತ್ರೆಗಳು ದುರ್ಗಿಗುಡಿ, ತಿಲಕ್ ನಗರ, ಕುವೆಂಪು ರಸ್ತೆಯ ಸುತ್ತಮುತ್ತ ತುಂಬಿಕೊಂಡಿವೆ. ಪಾರ್ಕಿಂಗ್ ಜಾಗದಲ್ಲಿ ಕ್ಯಾಂಟೀನುಗಳು, ಕಚೇರಿಗಳು ತೆರೆದುಕೊಂಡಿವೆ. ಇಲ್ಲೆಲ್ಲ ಪ್ರಭಾವಿಗಳದ್ದೇ ದರ್ಬಾರು. ಬಸ್ ನಿಲ್ದಾಣದ ಸಮೀಪದ ಹೊಸ ಮಾಲ್ ನಿಂದಾಗಿ ಆಗುತ್ತಿರುವ ಟ್ರಾಫಿಕ್ ಸಮಸ್ಯೆ ಅಷ್ಟಿಷ್ಟಲ್ಲ…ತಾಳ್ಮೆಕೆಟ್ಟು ಕಾಯ ಬೇಕು ರಸ್ತೆಯಲ್ಲಿ ಮುಂದುವರೆಯಲು…

ಕೆಲವೊಂದು ಸೂಕ್ಷ್ಮ ವಿಚಾರಗಳಿವೆ…ಕುವೆಂಪು ರಸ್ತೆ, ತಿಲಕ್ ನಗರ, ದುರ್ಗಿಗುಡಿಗಳಲ್ಲಿ ಬಡ ಫುಟ್ ಪಾತ್ ವ್ಯಾಪಾರಿಗಳನ್ನು ಓಡಿಸಿದ್ದು ಹೊಗಳಿ ನಾವೂ ಸುದ್ದಿ ಮಾಡಾಯ್ತು… ಆದರೆ, ಖಾಸಗಿ ಆಸ್ಪತ್ರೆಗಳಿಂದ, ಖಾಸಗಿ ಉದ್ಯಮಿಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲೇಕೆ ತಾವು ಮುಂದಾಗುತ್ತಿಲ್ಲ!

ಅದೆಲ್ಲ ಶ್ರೀಮಂತರಿಂದ ಆಗುತ್ತಿರುವ ತೊಂದರೆ ನಿಭಾಯಿಸುವುದು ನಿಮಗೆ ಕಷ್ಟವಾಗುತ್ತಿದೆಯೇ? ಅವರನ್ನು ಬಡ ಫುಟ್ ಪಾತ್ ವ್ಯಾಪಾರಿಗಳಂತೆ ಎದುರು ಹಾಕಿಕೊಂಡು ಜಯಿಸಲು ಯಾರಾದರು ಅಡ್ಡ ಬರುತ್ತಿದ್ದಾರೆಯೇ?

ನಿಮ್ಮಿಂದ ಬಡ ಫುಟ್ ಪಾತ್ ವ್ಯಾಪಾರಿಗಳಿಂದ ಆಗುತ್ತಿದ್ದ ಸಮಸ್ಯೆ ಬಗೆಹರಿಯುತ್ತಿದೆ!

ಆದರೆ, ಶ್ರೀಮಂತ, ಪ್ರಭಾವಿ ಜನರಿಂದ ಹರಡುತ್ತಿರುವ ಭೀಕರ ಟ್ರಾಫಿಕ್ ಕ್ಯಾನ್ಸರಿಗೆ ಮದ್ದು ನಿಮ್ಮ ಬಳಿಯಲ್ಲೇ ಇದೆಯೇ?! ಅಥವಾ…