*ಡಾ.ಬೆನಕ ಪ್ರಸಾದ್ ರನ್ನು ಸಾಗರದಲ್ಲೇ ಮುಂದುವರೆಸಿದ ರಾಜ್ಯ ಸರ್ಕಾರ* *ಶಿವಮೊಗ್ಗ ಎ ಉಪವಿಭಾಗಕ್ಕೆ ಬಳ್ಳಾರಿಯ ಶೀಲವಂತ ಹೊಸಮನಿ ವರ್ಗಾವಣೆಗೊಳಿಸಿ ತಿದ್ದುಪಡಿ ಆದೇಶ*

*ಡಾ.ಬೆನಕ ಪ್ರಸಾದ್ ರನ್ನು ಸಾಗರದಲ್ಲೇ ಮುಂದುವರೆಸಿದ ರಾಜ್ಯ ಸರ್ಕಾರ*

*ಶಿವಮೊಗ್ಗ ಎ ಉಪವಿಭಾಗಕ್ಕೆ ಬಳ್ಳಾರಿಯ ಶೀಲವಂತ ಹೊಸಮನಿ ವರ್ಗಾವಣೆಗೊಳಿಸಿ ತಿದ್ದುಪಡಿ ಆದೇಶ*

ಡಾ. ಬೆನಕ ಪ್ರಸಾದ್ ಎನ್. ಜೆ., IPS (KN 2022) ಇವರನ್ನು ಶಿವಮೊಗ್ಗ (ಎ) ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಲಾಗಿದ್ದ ಕುರಿತ ಆದೇಶವನ್ನು ಸರ್ಕಾರ ರದ್ದು ಪಡಿಸಿ ಅಧಿಸೂಚನೆ ಹೊರಡಿಸಿದೆ.

21.05.2026ರ e-DAR 191 SPS 2025 ಅಧಿಸೂಚನೆಯಲ್ಲಿನ ಆದೇಶವನ್ನು ರದ್ದುಪಡಿಸಲಾಗಿದ್ದು, ಡಾ.ಬೆನಕ ಪ್ರಸಾದ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರ ಹುದ್ದೆಯಲ್ಲೇ ಮುಂದುವರೆಯುವರು.

ಶೀಲವಂತ ಹೊಸಮನಿ, ಡಿ.ವೈ.ಎಸ್.ಪಿ (ಸಿವಿಲ್) ಇವರನ್ನು ಸಿ.ಸಿ.ಪಿ.ಎಸ್., ಬಳ್ಳಾರಿಗೆ ನೇಮಕ ಮಾಡಲಾಗಿದ್ದ ಆದೇಶವನ್ನು ತಿದ್ದುಪಡಿ ಮಾಡಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರನ್ನು ಶಿವಮೊಗ್ಗ ಉಪವಿಭಾಗ–1 ರ ಉಪ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ.