*ಎಸ್.ಕೆ.ರಾಘವೇಂದ್ರ ಎಂಬ 24/7 ಜನ ಸೇವಕ…* *ಜನ್ಮದಿನದ ಶುಭಾಶಯಗಳು*
*ಎಸ್.ಕೆ.ರಾಘವೇಂದ್ರ ಎಂಬ 24/7 ಜನ ಸೇವಕ…*
*ಜನ್ಮದಿನದ ಶುಭಾಶಯಗಳು*
ಇಂದು ಎಸ್.ಕೆ.ರಾಘವೇಂದ್ರರವರ ಜನ್ಮದಿನ. ಅವರು ರಾಜಕಾರಣದಲ್ಲಿದ್ದರೂ ಸಮಾಜಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ, ಸಹಕರಿಸುವ ಸಹೃದಯಿ.
ತೊಂದರೆ ಎಂದು ಬಂದವರಿಗೆ ಕೈಲಾದ ಪರಿಹಾರ ನೀಡುವ ರಾಘವೇಂದ್ರ ತಮ್ಮ ಸುತ್ತಮುತ್ತಲಿನ ಜನರ, ಸಮಾಜದ ಮೇಲೂ ಪ್ರೀತಿ ಇಟ್ಟುಕೊಂಡವರು. ಅವರ ಜೊತೆ ಹೋರಾಟಕ್ಕೂ ನಿಲ್ಲುವವರು.
ಬಿಜೆಪಿಯಲ್ಲಿದ್ದೂ ಅಲ್ಲಿನ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ಸ್ನೇಹಮಯಿ ರಾಘವೇಂದ್ರ ದುಡಿಮೆ ಇರುವುದು ರಿಯಲ್ ಎಸ್ಟೇಟ್ ಕೆಲಸದಲ್ಲಿ.
ನಂಜಪ್ಪ ಬಡಾವಣೆ ಹಿತ ರಕ್ಷಣಾ ಸಮಿತಿ, ಬಾಲಾಜಿ ಬಡಾವಣೆ ಹಿತರಕ್ಷಣಾ ಸಮಿತಿ,ನಮ್ಮ ಹರಿಗೆ ಪರಿವಾರ, ಚೌಡೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಶ್ರೀವಿನಾಯಕ ದೇವಸ್ಥಾನ ಸಮಿತಿ ಟ್ರಸ್ಟಿಯಾಗಿಯೂ ಕ್ರಿಯಾಶೀಲರಾಗಿರುವ ರಾಘವೇಂದ್ರ 24/7 ಸಮಾಜ ಸೇವಕರು.
ಕುವೆಂಪು ವಿವಿ ಸೆನೆಟ್ ಎಲೆಕ್ಟ್ರಾಲ್ ಆಗಿಯೂ ಸೇವೆ ಸಲ್ಲಿಸಿರುವ ಎಸ್.ಕೆ.ರಾಘವೇಂದ್ರ ಮುಂದಿನ ದಿನಗಳಲ್ಲಿ ಕಾರ್ಪೊರೇಟರ್ ಆಗುವ ಕನಸು ಹೊತ್ತಿದ್ದಾರೆ. ಆ ಕನಸು ಈಡೇರುವಂತಾಗಲಿ…



