ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ಸರ್ಕಲಲ್ಲಿ ಓಡಾಡುವ ಟ್ರಾಫಿಕ್ ಸಿಗ್ನಲ್!* *ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?*
*ಶಿವಮೊಗ್ಗ ಉಷಾ ನರ್ಸಿಂಗ್ ಹೋಂ ಸರ್ಕಲಲ್ಲಿ ಓಡಾಡುವ ಟ್ರಾಫಿಕ್ ಸಿಗ್ನಲ್!*
*ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?*

*ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ವೃತ್ತದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು, ಹಾಗೂ ಈ ಸ್ಥಳದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸದೇ ಇದ್ದ ಕಾರಣ ವಾಹನ ದಟ್ಟಣೆಯಾಗುತ್ತಿರುವ ಹಿನ್ನೆಲೆ *ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅನ್ನು* ಅಳವಡಿಸಲಾಗಿದೆ.
ಇಂದು ಎಸ್ ಪಿ ಮಿಥುನ್ ಕುಮಾರ್ ಜಿ. ಕೆ. ರವರು *ಟ್ರಾಫಿಕ್ ಸಿಗ್ನಲ್* ಗೆ ಚಾಲನೆ ನೀಡಿ ಮಾತನಾಡಿದರು.
ಸಂಚಾರ ದಟ್ಟಣೆಯ ನಿಯಂತ್ರಣದ ಸಂಬಂಧ *ಉಷಾ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅನ್ನು ಅಳವಡಿಸಲಾಗಿದೆ.
ಈ ಸ್ಥಳದಲ್ಲಿ *ಸಿಗ್ನಲ್ ಲೈಟ್ ನ ಅಳವಡಿಕೆಯ ಅವಶ್ಯಕತೆ* ತುಂಬಾ ಇದ್ದು, ಸಾರ್ವಜನಿಕರು, ಜನಪ್ರತಿನಿಧಿಗಳು, ಮುಖಂಡರು ಗಳ ಸಹಾ *ಸಿಗ್ನಲ್ ಲೈಟ್ ಅಳವಡಿಕೆ ಮಾಡುವಂತೆ ಕೋರಿಕೆ* ಸಲ್ಲಿಸಿದ್ದು, ಈ ಸಂಬಂಧ ಟ್ರಾಫಿಕ್ ಲೈಟ್ ಅನ್ನು ಅಳವಡಿಕೆ ಮಾಡಲಾಗಿದೆ ಎಂದು ಮಿಥುನ್ ಕುಮಾರ್ ಹೇಳಿದರು.
ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಒಳ್ಳೆಯ ಕೆಲಸವಾಗುತ್ತದೆ ಎಂಬುದಕ್ಕೆ ಇದೇ ಒಂದು ಉತ್ತಮ ಉದಾಹರಣೆಯಾಗಿದೆ.
ಸಾರ್ವಜನಿಕರು *ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ* ಮಾಡಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದಾರೆ, ಸಂಚಾರಿ ಟ್ರಾಫಿಕ್ ಸಿಗ್ನಲ್ ಇದೆ ಎಂದು ಮಾತ್ರ ನಿಯಮ ಪಾಲಿಸದೇ ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.
ನಿಮ್ಮ *ಕುಟುಂಬ, ಸ್ನೇಹಿತರು, ಅವಲಂಬಿತರು ಮತ್ತು ನಿಮ್ಮ ಜೀವದ ಸುರಕ್ಷತೆಯ ಹಿನ್ನೆಲೆಯಲ್ಲಿ* ಸಂಚಾರ ನಿಯಮ ಪಾಲನೆ ಅವಶ್ಯಕ.
ಕೇವಲ *ಸೀಟ್ ಬೆಲ್ಟ್, ಹೆಲ್ಮೇಟ್ ಧರಿಸುವುದರಿಂದಲೇ ಎಷ್ಟೋ ಬಾರಿ ಮಾರಣಾಂತಿಕ ಅಪಘಾತ ತಡೆದು, ಪ್ರಾಣವನ್ನು* ರಕ್ಷಿಸಲು ಸಾಧ್ಯವಾಗಿದೆ.ಅಪಘಾತದಲ್ಲಿ ಹೆಚ್ಚಿನ ಸಂದರ್ಭ *ಯುವಕರೇ ಪ್ರಾಣ ಕಳೆದುಕೊಳ್ಳುತ್ತಾರೆ,* ಸಾಮಾನ್ಯ ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ಇದ್ದ ಸಂದರ್ಭದಲ್ಲಿ *ಈ ರೀತಿಯ ಸಣ್ಣ ಪುಟ್ಟ ಅಪಘಾತಗಳು ಸಹಾ ಮಾರಣಾಂತಿಕ ಅಪಘಾತಗಳಾಗಿ* ಪರಿಣಮಿಸುತ್ತವೆ ಎಂದು ವಿವರಿಸಿದರು.
ಅಪಘಾತದಲ್ಲಿ *ಕೇವಲ ಗಾಯಾಳುವಲ್ಲದೇ ಆತನ ಅವಲಂಬಿತರೂ ಸಹಾ ತೊಂದರೆಗೆ ಒಳಗಾಗುತ್ತಾರೆ.* ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ ಎಂದರು.
*ದೇವರಾಜ್, ಸಿಪಿಐ* ಶಿವಮೊಗ್ಗ ಸಂಚಾರ ವೃತ್ತ, *ತಿರುಮಲೇಶ್, ಪಿಎಸ್ಐ* ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, *ನವೀನ್ ಎಂ,* ಪಿಎಸ್ಐ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ರವರು ಹಾಗೂ ಮುಖಂಡರುಗಳಾದ *ಸಂತೋಷ್ ಬೆಳ್ಳಿಕೆರೆ, ಹೆಚ್.ಸಿ. ಯೋಗೇಶ್, ಉದಯ್ ದಾಸ್* ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.