*ಪ್ರತಿ ಶನಿವಾರ- ಭಾನುವಾರವೂ ರಜೆ ಕೊಡಲು ಒತ್ತಾಯಿಸಿ ಜ.27 ರಂದು ಬ್ಯಾಂಕ್ ನೌಕರರ ಮುಷ್ಕರ* *ಜ.24ರ ಶನಿವಾರದಿಂದ ಮಂಗಳವಾರದವರೆಗೂ ಬ್ಯಾಂಕ್ ಇರೋಲ್ಲ!*
*ಪ್ರತಿ ಶನಿವಾರ- ಭಾನುವಾರವೂ ರಜೆ ಕೊಡಲು ಒತ್ತಾಯಿಸಿ ಜ.27 ರಂದು ಬ್ಯಾಂಕ್ ನೌಕರರ ಮುಷ್ಕರ*
*ಜ.24ರ ಶನಿವಾರದಿಂದ ಮಂಗಳವಾರದವರೆಗೂ ಬ್ಯಾಂಕ್ ಇರೋಲ್ಲ!*
ಜ.24ರಿಂದ 26 ರ ವರೆಗೆ ದೇಶದ ಎಲ್ಲಾ ಬ್ಯಾಂಕುಗಳಿಗೆ ರಜೆಗಳಿದ್ದು, ಜ.27 ರಂದು ಬ್ಯಾಂಕ್ ನೌಕರರ ಮುಷ್ಕರದ ಕಾರಣದಿಂದಲೂ ರಜೆ ಘೋಷಣೆಯಾಗುವ ಸಂಭವಗಳಿವೆ.
ಜ.24ಕ್ಕೆ ನಾಲ್ಕನೇ ಶನಿವಾರದ ರಜೆ, 25ರಂದು ಭಾನುವಾರದ ರಜೆ, 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ ರಜೆಗಳಿವೆ. ಜ.27 ರಂದು ದೇಶದ ಬ್ಯಾಂಕ್ ನೌಕರರೆಲ್ಲ ನಿರಂತರವಾಗಿ ಪ್ರತಿ ಶನಿವಾರ- ಭಾನುವಾರವೂ ರಜೆ ನೀಡಬೇಕೆಂದು ಒತ್ತಾಯಿಸಿ ಮುಷ್ಕರ ಹೂಡಲಿದ್ದಾರೆ. ಸರ್ಕಾರದ ಮಾತುಕತೆ ಜಾರಿಯಲ್ಲಿದೆ. ಆದರೆ, ಯಾವುದೂ ಅಂತಿಮವಾಗಿಲ್ಲ ಎಂದು ತಿಳಿದು ಬಂದಿದೆ.
ಕೆಲ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಇರುವಂತೆ ಬ್ಯಾಂಕುಗಳಲ್ಲೂ ವಾರಕ್ಕೆ ಐದು ದಿನ ಕೆಲಸದ ನಿಯಮ ತರಬೇಕೆಂಬುದು ನೌಕರರ ಪ್ರಮುಖ ಒತ್ತಾಯವಾಗಿದೆ. ಸದ್ಯ ಪ್ರತೀ ಭಾನುವಾರ ರಜೆ ಇದೆ. ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಈಗ ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ರಜೆಯಾಗಿ ಮಾಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ. ಬಹಳ ದಿನಗಳಿಂದ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ.


