*ಪುರದಾಳು ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಹಾವಳಿ*
*ಪುರದಾಳು ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಹಾವಳಿ*
ಮತ್ತೆ ಕಾಡಾನೆಗಳು ಪುರದಾಳಿನಲ್ಲಿ ಕಾಣಿಸಿಕೊಂಡು ದಾಂಧಲೆ ಎಬ್ಬಿಸಿದ ಘಟನೆ ಗುರುವಾರದಂದು ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಪುರದಾಳು ಗ್ರಾಮದ ವಸಂತ್ ಕುಮಾರ್,ಅನಂತಪ್ಪ, ವೀರಪ್ಪ ಮತ್ತು ಚಂದ್ರಮ್ಮ ರವರ ಅಡಿಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು, ಸುಮಾರು 35ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಹಾಗೂ ಬಾಳೆ ತೋಟವನ್ನು ನಾಶಪಡಿಸಿವೆ.
ಪದೇ ಪದೇ ಆನೆ ದಾಳಿ ನಡೆಯುತ್ತಿದ್ದು, ರೈತರ ಬೆಳೆ ಕೈ ತಪ್ಪುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ.
ಕಾಡಾನೇ ದಾಳಿ ತಪ್ಪಿಸಿ ರೈತರ ಬೆಳೆ ರಕ್ಷಿಸುವಂತೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಕಾಡಾನೇ ದಾಳಿ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಈ ಕೂಡಲೇ ಆನೆ ದಾಳಿ ತಡೆಯಲು ಸೋಲಾರ್ ಫೆನ್ಸಿಂಗ್ ಅಳವಡಿಸುವುದರ ಜೊತೆಗೆ ರೈತರಿಗೆ ಪರಿಹಾರ ನೀಡಬೇಕೆಂದು ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಎಸ್.ಹೆಬ್ಬೂರ್ ಆಗ್ರಹಿಸಿದ್ದಾರೆ.


