ಮಂಜಮ್ಮ ನಿಧನಕ್ಕೆ ಸಚಿವ ಮಧು ಬಂಗಾರಪ್ಪ ಸಂತಾಪ
ಕಾಗೋಡು ಚಳವಳಿಯ ರೂವಾರಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಗಣಪತಿಯಪ್ಪ ಅವರ ಧರ್ಮ ಪತ್ನಿ ಶ್ರೀಮತಿ ಮಂಜಮ್ಮ ಅವರ ನಿಧನಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಅವರು ತೀವ್ರ ಸಂತಾಪ ಸಲ್ಲಿಸಿದ್ದಾರೆ.
ಈ ಸಂಬಂಧ ಶೋಕ ಸಂದೇಶ ಕಳಿಸಿರುವ ಅವರು, ಐತಿಹಾಸಿಕ ಕಾಗೋಡು ಚಳವಳಿಯ ರೂವಾರಿ ಗಣಪತಿಯಪ್ಪ ಅವರ ಹೋರಾಟದ ಹಿಂದಿನ ಶಕ್ತಿಯಾಗಿದ್ದ ಮಂಜಮ್ಮ ನಿಧನ ನೋವು ತಂದಿದೆ. ಅವರ ಅಗಲಿಕೆಯಿಂದ ಸಮಾಜದ ಒಬ್ಬ ಧೀರ ಮಹಿಳೆಯನ್ನು ಕಳೆದುಕೊಂಡಂತಾಗಿದೆ. ಮಂಜಮ್ಮ ಅವರ ಆತ್ಮಕ್ಕೆ ಶಾಂತಿಸಿಗಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬ ವರ್ಗ ಮತ್ತು ಸಮಾಜಕ್ಕೆ ಭಗವಂತ ಕರುಣಿಸಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.



