*ಮದುವೆ ಮನೆಗಳ ಖತರ್ನಾಕ್ ಕಳ್ಳಿ ರುಕ್ಸಾರ್ ಫಿರ್ದೋಸ್ ಬಂಧನ* *4 ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳಿಯಿಂದ 18 ಲಕ್ಷ ರೂ.,ಗಳ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು* *ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಮತ್ತು ತಂಡವನ್ನು ಅಭಿನಂದಿಸಿದ ಎಸ್ ಪಿ ನಿಖಿಲ್*
*ಮದುವೆ ಮನೆಗಳ ಖತರ್ನಾಕ್ ಕಳ್ಳಿ ರುಕ್ಸಾರ್ ಫಿರ್ದೋಸ್ ಬಂಧನ*
*4 ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳಿಯಿಂದ 18 ಲಕ್ಷ ರೂ.,ಗಳ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು*
*ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಮತ್ತು ತಂಡವನ್ನು ಅಭಿನಂದಿಸಿದ ಎಸ್ ಪಿ ನಿಖಿಲ್*
ಶಾದಿ ಮಹಲ್ ಗಳಲ್ಲಿ ಮದುವೆಗಳ ಸಂದರ್ಭದಲ್ಲಿ ಬಂಗಾರದ ಆಭರಣಗಳನ್ನು ಕದಿಯುತ್ತಿದ್ದ ಶಿವಮೊಗ್ಗದ ಸೂಳೆಬೈಲಿನ ರುಕ್ಸಾರ್ ಫಿರ್ದೋಸ್ ಎಂಬಾಕೆಯನ್ನು ತುಂಗಾನಗರ ಪೊಲೀಸರು ಬಂಧಿಸಿದ್ದು, 120 ಗ್ರಾಂ ಚಿನ್ನದಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿಯೇ ಮಹಿಳಾ ಕಳ್ಳಿ ರುಕ್ಸಾರ್ ಫಿರ್ದೋಸ್ ಳನ್ನು ಬಂಧಿಸಿರುವ ಪೊಲೀಸರು ಆಕೆಯ ಬಳಿಯಿಂದ ವಶಕ್ಕೆ ಪಡೆದ ಬಂಗಾರದ ಬೆಲೆಯೇ 18 ಲಕ್ಷ ರೂ.,ಗಳು.
ಒಟ್ಟು 4 ಕಳ್ಳತನ ಪ್ರಕರಣಗಳ ಆರೋಪಿ ಈಕೆ. 30 ವರ್ಷ ವಯಸ್ಸಿನ ಈಕೆಯನ್ನು ತುಂಗಾನಗರದ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ಹೆಚ್ ಸಿ ಕಿರಣ್ ಮೋರೆ, ಅರುಣ್ ಕುಮಾರ್, ಶೋಭಾರಾಣಿ, ಪಿಸಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್, ರಂಗನಾಥ್, ತಮ್ಮಣ್ಣ ಜಂಬಗಿ ತಂಡ ಬಂಧಿಸಿದೆ.
ಎಸ್ ಪಿ ಬಿ.ನಿಖಿಲ್ ತಂಡವನ್ನು ಅಭಿನಂದಿಸಿದ್ದಾರೆ.


