ದೀಪಾವಳಿ ಹಬ್ಬದ ರೈಲು ಪ್ರಯಾಣಿಕರಿಗೆ ಶುಭವಾರ್ತೆ!* *ಯಶವಂತಪುರ- ತಾಳಗುಪ್ಪ ವಿಶೇಷ ರೈಲುಗಳಿಗೆ ಟಿಕೆಟ್ ಬುಕ್ಕಿಂಗ್ ಆರಂಭ*

*ದೀಪಾವಳಿ ಹಬ್ಬದ ರೈಲು ಪ್ರಯಾಣಿಕರಿಗೆ ಶುಭವಾರ್ತೆ!*

*ಯಶವಂತಪುರ- ತಾಳಗುಪ್ಪ ವಿಶೇಷ ರೈಲುಗಳಿಗೆ ಟಿಕೆಟ್ ಬುಕ್ಕಿಂಗ್ ಆರಂಭ*

ದೀಪಾವಳಿ ಹಬ್ಬದ ಸಂದರ್ಭದಲ್ಲಿನ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಿಸಲಾಗಿದೆ.

👉 ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ವಿಶೇಷ ರೈಲು
ಅಕ್ಟೋಬರ್ 17 ಮತ್ತು 24 ರಂದು ರಾತ್ರಿ 10.30ಕ್ಕೆ ಯಶವಂತಪುರದಿಂದ ಹೊರಟು -ಮರುದಿನ ಬೆಳಗ್ಗೆ 4.15ಕ್ಕೆ ತಾಳಗುಪ್ಪ ತಲುಪಲಿದೆ.

👉 ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ವಿಶೇಷ ರೈಲು
ಅಕ್ಟೋಬರ್ 18 ಮತ್ತು 25 ರಂದು ಬೆಳಗ್ಗೆ 10.00ಕ್ಕೆ ತಾಳಗುಪ್ಪದಿಂದ ಹೊರಟು- ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

ಪ್ರಯಾಣಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಟಿಕೆಟ್ ಬುಕ್ಕಿಂಗ್ ಈಗ ಆರಂಭವಾಗಿದೆ.

ಈ ವಿಶೇಷ ರೈಲು ಓಡಿಸಲು ಕ್ರಮ ಕೈಗೊಂಡ ನೈಋತ್ಯ ರೈಲ್ವೆ ವಲಯಕ್ಕೆ ಸಂಸದ ಬಿ.ವೈ.ರಾಘವೇಂದ್ರ ಧನ್ಯವಾದಗಳನ್ನು ತಿಳಿಸಿದ್ದಾರೆ.