ಸಿಸಿ- ಓಸಿ ಪಡೆಯದೇ ಕಟ್ಟಿರೋ ಮನೆಗಳಿಗೆ ನೀರು- ಕರೆಂಟು‌ ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧಾರ* *ಏನಿದು ಮಹತ್ವದ ನಿರ್ಧಾರ?*

*ಸಿಸಿ- ಓಸಿ ಪಡೆಯದೇ ಕಟ್ಟಿರೋ ಮನೆಗಳಿಗೆ ನೀರು- ಕರೆಂಟು‌ ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧಾರ*

*ಏನಿದು ಮಹತ್ವದ ನಿರ್ಧಾರ?*

ಸಿಸಿ , ಓಸಿ ಪಡೆಯದೇ ಕಟ್ಟಿರುವ ನೂತನ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಹಾಗೂ ನೀರು ಸರಬರಾಜು ನೀಡಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಇಂದು (ಅಕ್ಟೋಬರ್ 08) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ರಾಜ್ಯದ್ಯಾಂತ 1200 ಅಡಿಯಲ್ಲಿ ಕಟ್ಟಿರುವ ಮನೆಗಳಿಗೆ ವಿದ್ಯುತ್ ಮತ್ತು ನೀರು ನೀಡಲು ನಿರ್ಧರಿಸಲಾಗಿದೆ.

ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 30X40ವರೆಗೆ ಅನುಮತಿ ಕೊಡಲು ತೀರ್ಮಾನ ಮಾಡಿದ್ದೇವೆ.ಕಾನೂನಿನಲ್ಲಿ ಇರುವ ಅಡೆತಡೆ ನಿವಾರಿಸಲು ಚರ್ಚಿಸಲಾಗಿದೆ. 30X40 ಅಂದರೆ 1200 ಚ.ಮೀ.ಗೆ ಅನುಮತಿ ನೀಡಲಾಗಿದೆ. ಆದ್ರೆ, ಇಂಧನ ಇಲಾಖೆಗೆ ಅನುಷ್ಠಾನಗೊಳಿಸಲು ಅಡೆತಡೆ ಇವೆ. ಅದನ್ನು ನಿವಾರಿಸಿ ಅನುಮತಿ ನೀಡಲು ಪ್ರಯತ್ನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.