*ಪತ್ರಿಕಾಗೋಷ್ಠಿಯಲ್ಲಿ ಎಸ್.ಕೆ.ಮರಿಯಪ್ಪ- ಎನ್.ಮಂಜುನಾಥ್ ವಿವರಣೆ* *ಫೆ.24-28ರವರೆಗೆ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆಗೆ ಸಕಲ ಸಿದ್ಧತೆ*

*ಪತ್ರಿಕಾಗೋಷ್ಠಿಯಲ್ಲಿ ಎಸ್.ಕೆ.ಮರಿಯಪ್ಪ- ಎನ್.ಮಂಜುನಾಥ್ ವಿವರಣೆ*

*ಫೆ.24-28ರವರೆಗೆ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆಗೆ ಸಕಲ ಸಿದ್ಧತೆ*

ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಫೆ.24ರಿಂದ 28ರ ವರೆಗೆ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆ ಆಗಿದೆ. ದ್ವಾರ ಬಾಗಿಲಲ್ಲಿ ಕಾಳಿ ಅಲಂಕಾರ ರಾಜ್ಯದಲ್ಲೇ ಗಮನ ಸೆಳೆಯುವಂತಿದೆ ಎಂದು ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಅನುಕೂಲವಾಗಲು ಜರ್ಮನ್ ಟೆಂಟ್ ಹಾಕಲಾಗಿದೆ. ಜನರಿಗೆ ಸಮಸ್ಯೆ ಆಗದ ಹಾಗೆ ಚರ್ಚ್ ಫೀಲ್ಡ್, ಸೈನ್ಸ್ ಮೈದಾನ, ಪಾಲಿಕೆ ಆವರಣದಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಜ್ಯದಲ್ಲೇ ಮಾದರಿ ಜಾತ್ರೆಗೆ ಸರ್ವ ಪ್ರಯತ್ನ ಮಾಡುತ್ತಿದ್ದೇವೆ. ವಿಐಪಿ ಪಾಸ್ ಗಳ ಸಿದ್ಧತೆ ಮಾಡಿಕೊಂಡಿದ್ದೇವೆ. ಮಾದರಿ ಜಾತ್ರೆ ಯಶಸ್ಸಿಗೆ ಸಾರ್ವಜನಿಕರಲ್ಲಿ ವಿನಂತಿಸಿದರು.

ಜಾತ್ರೆಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ. ಗ್ರಾಹಕರು, ವರ್ತಕರು ಸಹಕರಿಸಲು ವಿನಂತಿ. 20 ಸಾವಿರ ಗೋದಿ ಚೀಲ ಪ್ರಸಾದ ವಿನಿಯೋಗಕ್ಕೆ ತರಿಸಲಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮಾತನಾಡಿ,
ದೇವಸ್ಥಾನದ ಒಳಗಿನ ಹಾಗೂ ಗಾಂಧಿ ಬಜಾರಿನ ಅಲಂಕಾರ ಕಳೆದ ಬಾರಿಗಿಂತ ಈ ಬಾರಿ ಮೀರಿಸುವಂತೆ ಎಂ.ಶ್ರೀಕಾಂತ್ ರಿಂದ ನಡೆದಿದೆ. 10 ಸಾವಿರ ಗುಲಾಬಿ ಹೂಗಳು ಅಲಂಕಾರಕ್ಕಾಗಿ ಬಂದಿವೆ ಎಂದರು.

ಈ ಬಾರಿ ದೇವಿಯ ವಿಶೇಷ ದರ್ಶನಕ್ಕೆ ಮುತುವರ್ಜಿ ವಹಿಸಿದ್ದು, ವಿಕಲಚೇತನರಿಗೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಕುಟುಂಬಕ್ಕೆ 200₹ ವಿಶೇಷ ದರ್ಶನಕ್ಕೆ ದರ ನಿಗದಿ ಮಾಡಲಾಗಿದೆ. ಸ್ಥಳದಲ್ಲೇ ಕೌಂಟರ್ ಮಾಡಲಾಗಿದೆ. ಈ ಬಾರಿ ಎರಡು ಸಾಲುಗಳಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಂಘಸಂಸ್ಥೆಗಳಿಂದ ಪಾನೀಯ ವ್ಯವಸ್ಥೆ ನಡೆಯಲಿದೆ. ಕಾಯಿ ಒಡೆಯೋದಕ್ಕೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವಿನಿಯೋಗ ಕೂಡ ಸುಲಲಿತವಾಗಿ ನಡೆಯಲಿದೆ ಎಂದರು.

ಗುಪ್ತಚರ ಇಲಾಖೆ ಪ್ರಕಾರ ಜಾತ್ರೆಗೆ ಹೆಚ್ಚಿನ ಭಕ್ತರ ಆಗಮನ. ಫೈರ್, ಆ್ಯಂಬುಲೆನ್ಸ್ ವ್ಯವಸ್ಥೆ, ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.

5ರಿಂದ 10ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಇದೆ.ಯಾವುದೇ ದೇಣಿಗೆ ಸಂಗ್ರಹಿಸಲಾಗುತ್ತಿಲ್ಲ. ತ್ರಿಭುಜಾಕಾರದಲ್ಲಿ ಯಾವುದೇ ಮಳಿಗೆಗಳಿರುವುದಿಲ್ಲ. ಕಳ್ಳಕಾಕರ ಕೃತ್ಯವನ್ನು ಸಂಪೂರ್ಣ ಸಿಸಿ ಟಿವಿ ಕಣ್ಗಾವಲು, 8 ವಾಚ್ ಟವರ್ ಪೊಲೀಸ್ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.