*ಬಂಗಾರ ಲೇಪಿತ ಚಿನ್ನದಾಭರಣ ಅಡವಟ್ಟು ಮಹಾ ವಂಚನೆ* *ಶಿವಮೊಗ್ಗದ ಮಹಿಳೆಯೂ ಸೇರಿದಂತೆ 5 ಜನರ ಬಂಧನ* *ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ಸತ್ಯನಾರಾಯಣ್ ಮತ್ತು ಪಿಎಸ್ ಐ ನಾರಾಯಣ ಮಧುಗಿರಿ ನೇತೃತ್ವದ ತಂಡದ ವಿಶೇಷ ಸಾಧನೆ…* *ಶಿವಮೊಗ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕ್, ತೀರ್ಥಹಳ್ಳಿಯ ವರ್ತಕರ ಸೌಹಾರ್ದ ಸಂಘ, ಶಿವಮೊಗ್ಗ ಆಲ್ಕೊಳದ ಸಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘ, ಶಿವಮೊಗ್ಗದ ಗೋಪಾಳದ ಡಿಸಿಸಿ ಬ್ಯಾಂಕ್, ಶಿವಮೊಗ್ಗ ಸವಾರ್ ಲೈನ್ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಶಿವಮೊಗ್ಗದ ನೇತಾಜಿ ಸರ್ಕಲ್ಲಿನ ಗುಲಾಬಿ ಜ್ಯುವೆಲರಿ ವರ್ಕ್ಸ್ ನಲ್ಲಿ ನಕಲಿ ಬಂಗಾರ ಅಡವಿಟ್ಟು ಹಣ ಪಡೆದಿದ್ದ ವಂಚಕರು…*
*ಬಂಗಾರ ಲೇಪಿತ ಚಿನ್ನದಾಭರಣ ಅಡವಟ್ಟು ಮಹಾ ವಂಚನೆ*
*ಶಿವಮೊಗ್ಗದ ಮಹಿಳೆಯೂ ಸೇರಿದಂತೆ 5 ಜನರ ಬಂಧನ*
*ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ಸತ್ಯನಾರಾಯಣ್ ಮತ್ತು ಪಿಎಸ್ ಐ ನಾರಾಯಣ ಮಧುಗಿರಿ ನೇತೃತ್ವದ ತಂಡದ ವಿಶೇಷ ಸಾಧನೆ…*
*ಶಿವಮೊಗ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕ್, ತೀರ್ಥಹಳ್ಳಿಯ ವರ್ತಕರ ಸೌಹಾರ್ದ ಸಂಘ, ಶಿವಮೊಗ್ಗ ಆಲ್ಕೊಳದ ಸಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘ, ಶಿವಮೊಗ್ಗದ ಗೋಪಾಳದ ಡಿಸಿಸಿ ಬ್ಯಾಂಕ್, ಶಿವಮೊಗ್ಗ ಸವಾರ್ ಲೈನ್ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಶಿವಮೊಗ್ಗದ ನೇತಾಜಿ ಸರ್ಕಲ್ಲಿನ ಗುಲಾಬಿ ಜ್ಯುವೆಲರಿ ವರ್ಕ್ಸ್ ನಲ್ಲಿ ನಕಲಿ ಬಂಗಾರ ಅಡವಿಟ್ಟು ಹಣ ಪಡೆದಿದ್ದ ವಂಚಕರು…*

ನಕಲಿ ಬಂಗಾರ ಅಡವಿಟ್ಟು ವಿವಿಧ ಬ್ಯಾಂಕುಗಳು ಹಾಗೂ ಜ್ಯುವೆಲರಿ ಶಾಪ್ ಗಳಿಗೆ ವಂಚಿಸಿದ್ದ 5 ಜನ ಆರೋಪಿಗಳನ್ನು ಬಂಧಿಸಿರುವ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ಸತ್ಯನಾರಾಯಣ್ ಮತ್ತು ಪಿಎಸ್ ಐ ನಾರಾಯಣ ಮಧುಗಿರಿ ನೇತೃತ್ವದ ತಂಡ ಅವರಿಂದ ವಸ್ತುಗಳನ್ನು ಕೂಡ ವಶಪಡಿಸಿಕೊಂಡಿದೆ.
ಶಿವಮೊಗ್ಗದ ಸವಾರ್ ಲೇನ್ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮ್ಯಾನೇಜರ್ ದಾರಾವತೋ ಕ್ರಾಂತಿಕುಮಾರ್ ಜುಲೈ 3 ರಂದು ನೀಡಿದ ದೂರನ್ನು ದಾಖಲಿಸಿಕೊಂಡು ಎಫ್ ಐ ಆರ್ ಮಾಡಿದ್ದ ದೊಡ್ಡಪೇಟೆ ಪೊಲೀಸರು, ತೀವ್ರ ತನಿಖೆ ನಡೆಸಿ ಐದು ಜನರನ್ನು ಬಂಧಿಸಿದರು.
ಬಂಗಾರಲೇಪಿತ ನಕಲಿ ಬಂಗಾರದ ಆಭರಣಗಳನ್ನು ಗಿರವಿಯಿಟ್ಟು ಗೋಲ್ಡ್ ಲೋನ್ ಪಡೆಯುತ್ತಿದ್ದ ಆರೋಪಿಗಳು ಬಹಳಷ್ಟು ಬ್ಯಾಂಕುಗಳು ಹಾಗೂ ಜ್ಯುವೆಲರಿ ಶಾಪ್ ಗಳನ್ನು ವಂಚಿಸಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ಬಿಳ್ಮನೆ ಅರೆಕಲ್ಲಿನ ವಾಸಿ 39 ವರ್ಷದ ಲೋಕೇಶ್ ಬಿ.ಜೆ, ಶಿವಮೊಗ್ಗ ಮಲವಗೊಪ್ಪದ ಶ್ರೀಮತಿ ಹೆಚ್.ಸುಧಾ, ಪಂಜಾಬ್ ಬ್ಯಾಂಕಿನ ಗೋಲ್ಡ್ ಅಪ್ರೈಸರ್ ಎಸ್.ವೈ.ರವಿಶಂಕರ್, ತೀರ್ಥಹಳ್ಳಿ ತಾಲ್ಲೂಕಿನ ಬಗ್ಗೋಡು ಗ್ರಾಮದ ರಾಹುಲ್ ಮತ್ತು ಶರತ್ ಕುಮಾರ್ ರವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ಶಿವಮೊಗ್ಗದ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 7,62,567 ರೂ.,ಗಳ ಮೌಲ್ಯಕ್ಕೆ 163.300 ಗ್ರಾಂ ನಕಲಿ ಬಂಗಾರವನ್ನು, ಹಾಗೆಯೇ, ತೀರ್ಥಹಳ್ಳಿಯ ವರ್ತಕರ ಸೌಹಾರ್ದ ಸಂಘದಲ್ಲಿ 9.33 ಲಕ್ಷಕ್ಕೆ 75,544 ಗ್ರಾಂ, ಶಿವಮೊಗ್ಗ ಆಲ್ಕೊಳದ ಸಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘದಲ್ಲಿ 7.43 ಲಕ್ಷ ರೂ.,ಗಳಿಗೆ 75.01 ಗ್ರಾಂ, ಶಿವಮೊಗ್ಗದ ಗೋಪಾಳದ ಡಿಸಿಸಿ ಬ್ಯಾಂಕಲ್ಲಿ 1.79 ಲಕ್ಷ ರೂ.,ಗಳಿಗೆ 48.28 ಗ್ರಾಂ, ಶಿವಮೊಗ್ಗ ಸವಾರ್ ಲೈನ್ ರಸ್ತೆಯ ಇಂಡಿಯನ್ ಓವರ್ ಸೀಸ್ ಬ್ಯಾಂಕಲ್ಲಿ 1.10 ಲಕ್ಷ ರೂ.,ಗಳಿಗೆ 26.490 ಗ್ರಾಂ, ಶಿವಮೊಗ್ಗದ ನೇತಾಜಿ ಸರ್ಕಲ್ಲಿನ ಗುಲಾಬಿ ಜ್ಯುವೆಲರಿ ವರ್ಕ್ಸ್ ನಲ್ಲಿ 1.90 ಲಕ್ಷ ರೂ.,ಗಳಿಗೆ 30.90 ಗ್ರಾಂ ನಕಲಿ ಬಂಗಾರ ಅಡವಿಟ್ಟು ಹಣ ಪಡೆದಿದ್ದರು.
ಒಟ್ಟು 28,87,237 ರೂ.,ಗಳ 419.824 ಗ್ರಾಂ ನಕಲಿ ಬಂಗಾರ ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಎಸ್ ಐ ಚೂಡಾಮಣಿ, ಪುನೀತ್, ಸಂದೀಪ್, ಗುರುನಾಯ್ಕ, ರಾಜೇಶ್ ಗೌಡ ಪಾಟೀಲ್, ಪುಟ್ಟಮ್ಮ ಎನ್. ಪಾಲ್ಗೊಂಡಿದ್ದರು.


