*ಶಾಸಕ ಬೇಳೂರು ಗೋಪಾಲಕೃಷ್ಣ ಪತ್ರಿಕಾಗೋಷ್ಠಿ…* *ಶಿವಮೊಗ್ಗ ವಿಮಾನ ನಿಲ್ದಾಣ ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣ* *ಈಶ್ವರಪ್ಪ, ಆರಗ ಬಗ್ಗೆ ಏನಂದ್ರು?* *ಸಚಿವ ಸ್ಥಾನದ ಬಗ್ಗೆ ವಿವರಿಸಿದ್ದೇನು?*
*ಶಾಸಕ ಬೇಳೂರು ಗೋಪಾಲಕೃಷ್ಣ ಪತ್ರಿಕಾಗೋಷ್ಠಿ…*
*ಶಿವಮೊಗ್ಗ ವಿಮಾನ ನಿಲ್ದಾಣ ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣ*
*ಈಶ್ವರಪ್ಪ, ಆರಗ ಬಗ್ಗೆ ಏನಂದ್ರು?*
*ಸಚಿವ ಸ್ಥಾನದ ಬಗ್ಗೆ ವಿವರಿಸಿದ್ದೇನು?*

ಬೇಸೂರು ಅಣು ಸ್ಥಾವರ ಸ್ಥಾಪಿಸುವ ಯಾವುದೇ ಉದ್ದೇಶವು ಇಲ್ಲ. ಸರ್ಕಾರ ಅದನ್ನು ರದ್ದು ಮಾಡಿದ್ದು, ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ.ಹಾಗೇಯೆ ವಿದ್ಯುತ್ ಖಾಸಗೀಕರಣವನ್ನು ರಾಜ್ಯ ಸರ್ಕಾರ ಒಪ್ಪುವುದು ಇಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣುಸ್ಥಾವರ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂಬ ವದಂತಿಗಳಿದ್ದವು. ಇದು ಕೇಂದ್ರ ಸರ್ಕಾರದ ಯೋಜನೆ ಆಗಿತ್ತು. ರಾಜ್ಯ ಸರ್ಕಾರಕ್ಕೆ ಎನ್‌ಪಿಸಿಐಎಲ್ ಪತ್ರ ಬರೆದಿತ್ತು ಕೂಡ ಇದರ ವಿರುದ್ದ ಜಿಲ್ಲಾದ್ಯಾಂತ ಹೋರಾಟಗಳು ಆರಂಭವಾಗಿದ್ದವು. ನಾನು ಕೂಡ ಹೋರಾಟದಲ್ಲಿ ಭಾಗವಹಿಸಿ ರೈತರ ಪರವಾಗಿ ಇದ್ದೆ. ಆಗ ಮಾತು ಕೂಡ ಕೊಟ್ಟಿದೆ. ರಾಜ್ಯ ಸರ್ಕಾರದ ಜೊತೆ ಮಾತನಾಡಿದ್ದೆ ಕೂಡ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನೆ ಕೈಬಿಟ್ಟಿದೆ. ಹಾಗಾಗಿ ರೈತರು ಭಯ ಪಡುವ ಅಗತ್ಯವಿಲ್ಲ. ಕೇವಲ ಬೇಸೂರು ಅಣುಸ್ಥಾವರ ಮಾತ್ರವಲ್ಲ ರಾಜ್ಯ ಯಾವುದೇ ಭಾಗದಲ್ಲಿ ಅಣುಸ್ಥಾವರನ್ನು ಸ್ಥಾಪಿಸುವುದಿಲ್ಲ ಎಂದು ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭರವಸೆ ನೀಡಿದ್ದರು ಎಂದರು.
ಹಾಗೆಯೇ, ವಿದ್ಯುತ್ ಖಾಸಗೀಕರಣದ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಚರ್ಚೆಗೆ ಕೇಂದ್ರ ಸರ್ಕಾರವೇ ಕಾರಣವಾಗಿದೆ. ಕೇಂದ್ರ ಒತ್ತಡ ಹಿನ್ನೆಲೆಯಲ್ಲಿಯೇ ವಿದ್ಯುತ್ ಖಾಸಗೀಕರಣದ ವಿಷಯ ಮುನ್ನಲೆಗೆ ಬಂದಿತ್ತು. ಅದಾನಿಗೋ, ಅಂಬಾನಿಗೋ ನೀಡಲು ಇಂತಹ ಯೋಜನೆಯನ್ನ ಕೇಂದ್ರ ಸರ್ಕಾರ ಮಾಡುತ್ತಿತ್ತು. ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಲ್ಲ, ಒಪ್ಪುವುದೂ ಇಲ್ಲ. ರೈತರಿಗೆ ಎಂದಿನಂತೆ ಉಚಿತ ವಿದ್ಯುತ್ ಮುಂದುರೆಯಲಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಹಾಗಾಗಿ ಅಣುಸ್ಥಾವರವೂ ಇಲ್ಲ, ವಿದ್ಯುತ್ ಖಾಸಗೀರಣವೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಎಸ್‌ಐಆರ್ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿರುವುದು ಕಂಡು ಬಿಜೆಪಿಯವರೇ ಭಯಕ್ಕೆ ಒಳಾಗಿದ್ದಾರೆ. ಕರ್ನಾಟಕ ಕಲ್ಕತ್ತವು ಅಲ್ಲ. ಹಾಗಾಗಿ ಇಲ್ಲಿ ಭಯ ಪಡುವ ಅಗತ್ಯವೂ ಇಲ್ಲ. ಅಕಸ್ಮಾತ್ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲ್ಲಿ. ಬೇಡ ಎಂದವರು ಯಾರು? ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದವರಿಗೆ ಮತದಾನ ಕೊಡಬೇಡಿ. ಎಲ್ಲಾ ಧರ್ಮದವರು ದಾಖಲೆ ಕೊಟ್ಟರೆ ಎಲ್ಲರಿಗೂ ಮತದಾನ ಹಕ್ಕು ಸಿಗಲಿದೆ ಎಂದರು.
ಹೈಕೋರ್ಟ್ ಪೀಠ ಶಿವಮೊಗ್ಗದಲ್ಲಿಯೇ ಆಗಬೇಕೆಂಬ ಹೋರಾಟ ನಡೆಯುತ್ತಲೆ ಇದೆ. ಈ ಹೋರಾಟದಲ್ಲಿ ನಾನು ಸಹ ಭಾಗವಹಿಸಿದ್ದೆ ಹಾಗೂ ಮುಖ್ಯಮಂತ್ರಿಗಳ ಬಳಿ ವಕೀಲರು ಹಾಗೂ ಜನಪ್ರತಿನಿಧಿ ನಿಯೋಗವು ಭೇಟಿ ಮಾಡಿ ಮಂಗಳೂರಿನಲ್ಲಿ ಹೈ ಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಬದಲು ಎಲ್ಲಾ ಅನುಕೂಲಗಳಿರುವ ಶಿವಮೊಗ್ಗದಲ್ಲಿ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದಿಂದ ವಿಮಾನ ಹಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ. ಈಗಾಗಲೇ ನೈಟ್ ಲ್ಯಾಡಿಂಗ್ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರದ ಉಡಾನ್ ಯೋಜನೆ ಜಾರಿಯಾದೆ ಸಾಕು ಶಿವಮೊಗ್ಗ ವಿಮಾನಗಳ ಹಾರಾಟ ಆರಂಭವಾಗುತ್ತದೆ ಎಂದರು.
ಅಡಿಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರು ಅಡಿಕೆ ಸಂಬಂಧಿಸಿದಂತೆ ಮೊಸಳೆ ಕಣ್ಣಿರು ಸುರಿಸುತ್ತಿದ್ದಾರೆ ಅ?. ಮಹಾರಾ?ದಲ್ಲಿ ರಾಜ್ಯದ ಅಡಿಕೆ ಲಾರಿಗಳನ್ನು ನಿಲ್ಲಿಸುವವರು ಇವರೇ, ಮತ್ತೇ ಬಿಡುಸುವವರು ಇವರೇ ಸುಮ್ಮನ್ನೆ ನಾಟಕವಾಡುತ್ತಾರೆ ಅ? ಎಂದು ವ್ಯಂಗ್ಯವಾಡಿದರು.
—————————
ಕೆ.ಎಸ್. ಈಶ್ವರಪ್ಪ ಭವಿಷ್ಯ ಖತಂ
ಈ ಈಶ್ವರಪ್ಪ ಎಂಬ ವ್ಯಕ್ತಿ ಮತ್ತೇ ಕೂಗುಮಾರಿಯಾಗಿದ್ದಾರೆ. ಮಾತೆತ್ತಿದ್ದರೆ ಮುಸ್ಲಿಂರನ್ನು ಬಯ್ಯುವುದು, ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದೆ ಇವರ ಕೆಲಸವಾಗಿದೆ. ಈಶ್ವರಪ್ಪ ಏನೇ ಮಾಡಿದರು ಅವರನ್ನು ಬಿಜೆಪಿಗಂತು ಸೇರಿಸಿಕೊಳ್ಳುವುದಿಲ್ಲ. ಅವರ ಭವಿ? ಈಗಾಗಲೇ ಖತಂ ಆಗಿದೆ. ಹಿಂದೂ ಹೆಸರೇಳಿ ಜೀವಿಸುವ ಈಶ್ವರಪ್ಪ, ಯತ್ನಾಳ್, ಅನಂತ್‌ಕುಮಾರ್ ನಂತವರನ್ನು ಈಗಾಗಲೇ ಬಿಜೆಪಿ ಪಕ್ಷದಿಂದಲೆ ಹೊರ ಹಾಕಿದೆ. ಏನಾದರೂ ಮಾಡಿ ಬಿಜೆಪಿಗೆ ಸೇರಬೇಕೆಂದು ಇವರು ಶಿವಮೊಗ್ಗದಿಂದ ಸಾಗರಕ್ಕೆ ಬಂದು ಮು?ರ ಮಾಡುತ್ತಾರೆ ಎಂದು ಟೀಕಿಸಿದರು.
ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ನಾನು ಕೂಡ ಸಚಿವ ಆಕಾಂಕ್ಷಿ ಆಗಿದ್ದೇನೆ. ಸಹಜವಾಗಿಯೇ ಎಲ್ಲರಂತೆ ನಾನು ಕೂಡ ದೆಹಲಿಗೆ ಹೋಗಿದ್ದೇನೆ.ಇದರಲ್ಲಿ ಲಾಭಿಯ ಪ್ರಶ್ನೆ ಇಲ್ಲ. ಎಲ್ಲರಿಗೂ ಸಹಜವಾಗಿ ಹಂಬಲ ಇದ್ದೇ ಇರುತ್ತದೆ. ಕಾದು ನೊಡೋಣ. ಸಚಿವ ಸ್ಥಾನ ಸಿಗಬಹುದು ಎಂಬ ನೀರೀಕ್ಷೆಯಲ್ಲಿದ್ದೇನೆ ಎಂದು ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ಪ್ರಮುಖರಾದ ಶಿ.ಜು.ಪಾಶ, ಹುಲ್ತಿಕೊಪ್ಪ ಶ್ರೀಧರ್ ಉಪಸ್ಥಿತರಿದ್ದರು.


