ಭದ್ರಾವತಿಯ ಅತ್ತಿಗುಂದದಲ್ಲಿ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ; ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿ
ಭದ್ರಾವತಿಯ ಅತ್ತಿಗುಂದದಲ್ಲಿ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ;
ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿ
ಭದ್ರಾವತಿ ತಾಲೂಕಿನ ಅತ್ತಿಗುಂದ ಗ್ರಾಮದಲ್ಲಿ 19ನೆಯ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾವೇಶದಲ್ಲಿ ಅತಿಗುಂದ ಗ್ರಾಮ ಪಂಚಾಯತಿಯ ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಶಾಸಕ ಬಿ.ಕೆ. ಸಂಗಮೇಶ್ವರ್ ರವರ ಮಾರ್ಗದರ್ಶನದಲ್ಲಿ ಪಂಚ ಗ್ಯಾರಂಟಿಯ ತಾಲೂಕು ಅಧ್ಯಕ್ಷರಾದ ಬಿ ಎಸ್ ಗಣೇಶ್ ಇವರ ನೇತೃತ್ವದಲ್ಲಿ ಇಡೀ ತಾಲೂಕಿನ ಎಲ್ಲೆಡೆ ಇದುವರೆಗೆ 18 ಪಂಚ ಗ್ಯಾರಂಟಿ ಸಮಾವೇಶಗಳು ಜರುಗಿವೆ.
ಈ ಸಮಾವೇಶದಲ್ಲಿ ಭಾಗವಹಿಸಿದ ಫಲಾನುಭವಿಗಳಲ್ಲಿ ಯಾವುದಾದರೂ ಸಮಸ್ಯೆಗಳು ಇದ್ದರೆ ಅದನ್ನು ಸ್ಥಳದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಗ್ಯಾರಂಟಿಗಳ ಸಂಬಂಧಪಟ್ಟ ಅಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಅತ್ತಿಗುಂದದಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಶಿಸ್ತುಬದ್ಧವಾಗಿ ಜರಗಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕ್ರೆಡಿಲ್ ನ ಅಧ್ಯಕ್ಷರು ಹಾಗೂ ಶಾಸಕರಾದ ಬಿ ಕೆ ಸಂಗಮೇಶ್ವರ್ ಇವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್ ಕುಮಾರ್, ಗ್ರಾಮಾಂತರ ಅಧ್ಯಕ್ಷರಾದ ಷಡಾಕ್ಷರಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ರಮೇಶ್ ಶಂಕರಘಟ್ಟ, ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾದ ಮಣಿಶೇಖರ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಬಿ ಕೆ ಶಿವಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದಶರಥಗಿರಿ, ಕಾಂಗ್ರೆಸ್ ಮುಖಂಡರುಗಳಾದ
ಧರ್ಮಣ್ಣ, ಅತ್ತಿಗುಂದ ಶ್ರೀನಿವಾಸ್, ಅತ್ತಿಗುಂದ ಜಗದೀಶ್, ಮುಂತಾದವರು ಇದ್ದರು.
ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳ ನೃತ್ಯ ನೆರೆದಿದ್ದವರ ಕಣ್ಮನ ಸೆಳೆಯಿತು. ನೃತ್ಯ ಮಾಡಿದ ಶಾಲಾ ಮಕ್ಕಳಿಗೆ ಎಲ್ಲಾ ತಂಡಗಳಿಗೂ ಶಾಸಕರು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.


