*ಡಾ.ಶರತ್ ಮರಿಯಪ್ಪ ಫೌಂಡೇಷನ್ ನಿಂದ ಜು.5 ರ ಭಾನುವಾರ ಬೆಳ್ ಬೆಳಿಗ್ಗೆಯಿಂದ ರನ್ ಮಲೆನಾಡು-2026* *ಯಾರೆಲ್ಲ ಭಾಗವಹಿಸಬಹುದು? ಸ್ಪರ್ಧೆಗಳ ವಿವರ- ಬಹುಮಾನಗಳ ವಿವರ ಇಲ್ಲಿದೆ*

*ಡಾ.ಶರತ್ ಮರಿಯಪ್ಪ ಫೌಂಡೇಷನ್ ನಿಂದ ಜು.5 ರ ಭಾನುವಾರ ಬೆಳ್ ಬೆಳಿಗ್ಗೆಯಿಂದ ರನ್ ಮಲೆನಾಡು-2026*

*ಯಾರೆಲ್ಲ ಭಾಗವಹಿಸಬಹುದು? ಸ್ಪರ್ಧೆಗಳ ವಿವರ- ಬಹುಮಾನಗಳ ವಿವರ ಇಲ್ಲಿದೆ*

ಡಾ.ಶರತ್ ಮರಿಯಪ್ಪ ಫೌಂಡೇಷನ್‌ವತಿಯಿಂದ ಜು.5ರಂದು `ರನ್ ಮಲೆನಾಡು-2026 ಎಂಬ ಬೃಹತ್ ಮ್ಯಾರ ಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಫೌಂಡೇಷನ್ನಿನ ಸಂಸ್ಥಾಪಕ ಡಾ.ಶರತ್ ಮರಿಯಪ್ಪ ಹೇಳಿದ್ದಾರೆ.

ಜು.5ರ ಬೆಳಿಗ್ಗೆ 6ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆರಂಭವಾಗುತ್ತದೆ. ಮಾಜಿ ಸಚಿವ ಮಧುಬಂಗಾರಪ್ಪ, ಸಚಿವ ಸಂತೋಷ್‌ಲಾಡ್,ಆರ್.ಎಂ.ಮಂಜು ನಾಥ್ ಗೌಡರು, ಆರ್.ಪ್ರಸನ್ನಕುಮಾರ್ ಸೇರಿ ದಂತೆ ಹಲವು ಕಾಂಗ್ರೆಸ್ ಮುಖಂಡರು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.

ಈ ಮ್ಯಾರಥಾನ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಈ ಬಾರಿ ವಿಶೇಷವಾಗಿ ಹ್ಯೂಮಥಾನ್ ಎಂಬ ವಿಶೇಷ ಚೇತನರಿಗಾಗಿ ವಿಶೇಷ ಓಟವನ್ನು ಕೂಡ ಆಯೋಜಿಸಲಾಗಿದೆ. ಇದು ಮಾನಸಿಕ ಮತ್ತು ದೈಹಿಕ ವಿಶೇಷ ಚೇತನರಿಗೆ ಆತ್ಮವಿಶ್ವಾಸ ಬೆಳೆಸುವುದೇ ಆಗಿದೆ. ಮತ್ತು ನಾವು ಅವರ ಜೊತೆ ಇದ್ದೇವೆ ಎಂಬ ಮನೋಭಾವನೆ ಕೂಡ ಉಂಟಾಗುತ್ತದೆ. ಜೊತೆಗೆ ಈ ಓಟದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಸುಮಾರು 2೦೦೦ ಸಸಿಗಳನ್ನು ಉಚಿತವಾಗಿ ನೀಡಲಾಗು ವುದು ಹಾಗೂ ಇದಕ್ಕೆ ನೋಂದಣಿ ಅಗತ್ಯವಿದ್ದು, ಮೊದಲ 2೦೦೦ ನೋಂದಾಯಿತರಿಗೆ ಉಚಿತ ವಾಗಿ ಟೀಶರ್ಟ್ ಜೊತೆಗೆ ಪ್ರಮಾಣಪತ್ರ ನೀಡಲಾಗುವುದು ಎಂದರು.
ಮ್ಯಾರಥಾನ್ ಸ್ಪರ್ಧೆಯ ಬಗ್ಗೆ ವಿವರ ನೀಡಿದ ಅಥ್ಲೆಟಿಕ್ ಅಸೋಸಿಯೇಷನ್ನಿನ ಮುಖ್ಯಸ್ಥ ಉದಯಕುಮಾರ್ ಈ ಸ್ಪರ್ಧೆಗಳು ಐದು ವಿಭಾಗಗಳಲ್ಲಿ ನಡೆಯುತ್ತವೆ. 16ವರ್ಷದೊಳಗಿನ ಬಾಲಕ-ಬಾಲಕಿಯರಿಗೆ 20ವರ್ಷದ ಬಾಲಕ-ಬಾಲಕಿಯರಿಗೆ ಕ್ರಮವಾಗಿ ಮೂರು ಕಿ.ಮೀ. ಹಾಗೂ 5 ಕಿ.ಮೀ. ಓಟದ ಸ್ಫರ್ಧೆಯಿದ್ದು, ಎರಡೂ ವಿಭಾಗಗಳಲ್ಲಿ ತಲಾ 3 ಬಹುಮಾನ ಗಳನ್ನು ನೀಡಲಾಗುತ್ತದೆ. ಅಂದರೆ ಪ್ರಥಮ 3೦೦೦, ದ್ವಿತೀಯ 2೦೦೦, ತೃತೀಯ 1೦೦೦ ರೂ.ಗಳನ್ನು ಎರಡೂ ವಿಭಾಗದಲ್ಲೂ ನಗದು ಬಹುಮಾನ ನೀಡಲಾಗುವುದು. ಹಾಗೆಯೇ ಪುರುಷ ಮತ್ತು ಮಹಿಳಾ ವೃತ್ತಿಪರರಿಗೆ 10 ಕಿ.ಮೀ. ಓಟದ ಸ್ಪರ್ಧೆ ಇದ್ದು, ಇದರಲ್ಲೂ ಕೂಡ ಕ್ರಮವಾಗಿ 1೦,೦೦೦, 7,೦೦೦ ಹಾಗೂ 5೦೦೦ ರೂ.ಗಳನ್ನು ಬಹುಮಾನ ನೀಡಲಾಗುತ್ತದೆ ಎಂದರು.
ಹಾಗೆಯೇ ಪುರುಷ ಮತ್ತು ಮಹಿಳಾ ಸಾರ್ವಜನಿಕ ವಿಭಾಗದಲ್ಲಿ 5 ಕಿ.ಮೀ. ಸ್ಪರ್ಧೆ ಏರ್ಪಡಿಸಿದ್ದು ಇದರಲ್ಲಿಯೂ ಕೂಡ 5,೦೦೦, 3,೦೦೦, 2,೦೦೦ ರೂ.ಗಳನ್ನು ನಗದು ಬಹುಮಾನ ನೀಡಲಾಗು ವುದು. ಈ ವರ್ಷ ವಿಶೇಷವಾಗಿ ದಂಪತಿಗಳಿಗಾಗಿ 3 ಕಿ.ಮೀ. ಓಟದ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಟ್ರೋಫಿ ಹಾಗೂ ವಿಶೇಷ ಉಡುಗೊರೆ ನೀಡಲಾಗುವುದು.

ನೋಂದಣಿಗೆ ಮೊ.:8971397714,8892325558, 8660461919 ರಲ್ಲಿ ಸಂಪರ್ಕಿಸಬಹುದು.
.