ಚಾಲುಕ್ಯ ಸುರೇಶ್ ಕುಮಾರ್ ರವರ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ*

ಚಾಲುಕ್ಯ ಸುರೇಶ್ ಕುಮಾರ್ ರವರ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ*

ನನ್ನ ತಂದೆಯವರಾದ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌. ಬಂಗಾರಪ್ಪರ ಬಹುಕಾಲದ ಬೆಂಬಲಿಗರೂ, ಅಭಿಮಾನಿಯೂ ಆಗಿದ್ದ, ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರು, ಹಿರಿಯ ಸಹಕಾರಿಗಳು ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡರು ಆದ ಎಂ.ಕೆ. ಸುರೇಶ್‌ ಕುಮಾರ್‌ ಅವರ ನಿಧನದ ಸುದ್ದಿ ತಿಳಿದು ಅತೀವ ದಃಖವಾಗಿದೆ ಎಂದು ಮಾಜಿ ಮಂತ್ರಿ ಎಸ್.ಮಧು ಬಂಗಾರಪ್ಪ ಪ್ರಕಟಣೆಯಲ್ಲಿ ಕಂಬನಿ ಮಿಡಿದಿದ್ದಾರೆ.

ನನಗೂ ಆತ್ಮೀಯರಾಗಿದ್ದ ಸುರೇಶ್‌ ಕುಮಾರ್‌, ನಮ್ಮ ಕುಟುಂಬದವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಆಗಾಗ ಪಕ್ಷದ ಸಂಘಟನೆ ಹಾಗೂ ಪ್ರಸ್ತುತ ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಅವರ ನಿಧನದ ಸುದ್ದಿ ನನಗೆ ಆಘಾತವನ್ನುಂಟು ಮಾಡಿದೆ.
ಎಂ.ಕೆ. ಸುರೇಶ್‌ ಕುಮಾರ್‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ, ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.