*ಕಬ್ಬಿಣದ ಶೀಟ್ ಗಳಿಗೆ JSW ಕಂಪನಿಯ ನಕಲಿ ಪ್ರಿಂಟ್ ಜಾಲ ಪತ್ತೆ ಮಾಡಿದ ಜಯನಗರ ಪೊಲೀಸರು* *ಹೊಳೆಬೆನವಳ್ಳಿ ನಂದಿ ಟ್ರೇಡಿಂಗ್ ಕಂಪನಿಯ ಮಾಲೀಕ ಲೋಹಿತ್ ಬಿ.ನಾಯ್ಕನ ವಿರುದ್ಧ ಪ್ರಕರಣ ದಾಖಲು* *ಏನಿದು ನಕಲಿ ಪ್ರಿಂಟ್ ಪ್ರಕರಣ? ಇಲ್ಲಿದೆ ಸಂಪೂರ್ಣ ಮಾಹಿತಿ*

*ಕಬ್ಬಿಣದ ಶೀಟ್ ಗಳಿಗೆ JSW ಕಂಪನಿಯ ನಕಲಿ ಪ್ರಿಂಟ್ ಜಾಲ ಪತ್ತೆ ಮಾಡಿದ ಜಯನಗರ ಪೊಲೀಸರು*

*ಹೊಳೆಬೆನವಳ್ಳಿ ನಂದಿ ಟ್ರೇಡಿಂಗ್ ಕಂಪನಿಯ ಮಾಲೀಕ ಲೋಹಿತ್ ಬಿ.ನಾಯ್ಕನ ವಿರುದ್ಧ ಪ್ರಕರಣ ದಾಖಲು*

*ಏನಿದು ನಕಲಿ ಪ್ರಿಂಟ್ ಪ್ರಕರಣ? ಇಲ್ಲಿದೆ ಸಂಪೂರ್ಣ ಮಾಹಿತಿ*

 

ಬೇರೆ ಕಂಪನಿಯ ಕಬ್ಬಿಣದ ಶೀಟ್ ಗಳಿಗೆ ಜೆ.ಎಸ್.ಡಬ್ಲೂ ಕಂಪನಿಯ ಶೀಟ್ ಎಂದು ನಕಲಿ ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಬುಧವಾರದಂದು ಜಯನಗರದ ಪ್ರದೀಪ್ ದೂರು ನೀಡಿದ್ದು, ಸುಂದರಂ ಇಂಜಿನಿಯರಿಂಗ್ ವರ್ಕ್ಸ್ ನ ನವೀನ್ ಎಂಬುವವರ ವಿರುದ್ಧ ಆರೋಪ ಮಾಡಿದ್ದರು.

ಈ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆ ಗುನ್ನೆ ನಂ. 97/2025 ಕಲಂ 318(4) ಬಿ.ಎನ್.ಎಸ್, 51(1), (ಬಿ), 63 Copy Right Act-1957 ರೀತ್ಯಾ ಪ್ರಕರಣ ದಾಖಲಾಗಿತ್ತು.

ಕೃತ್ಯವೆಸಗಿದ ಆರೋಪಿಗಳನ್ನು ಪತ್ತೆ ಮಾಡುವ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ ರವರ ನಿರ್ದೇಶನದಂತೆ ಅಪರ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಕೆಎಸ್,ಪಿ,ಎಸ್ & ಶಿವಮೊಗ್ಗ ಉಪವಿಭಾಗದ ಡಿ.ವೈಎಸ್.ಪಿ. ರವರಾದ ಸಂಜೀವ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಕೆ,ಎನ್,ಹಳ್ಳಿಯವರ್ ಪಿಎಸ್ಐ ಜಯನಗರ ಠಾಣೆ ಹಾಗೂ ಸಿದ್ದೇಗೌಡ ಪಿಐ ಜಯನಗರ ಪೊಲೀಸ್ ಠಾಣೆ ಶಿವಮೊಗ್ಗ ರವರು ಸದರಿ ಪ್ರಕರಣದ ತನಿಖೆ ಕೈಗೊಂಡು ಶಿವಮೊಗ್ಗ ಎನ್,ಇ,ಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಸಿ.ಬಿ.ಆರ್ ಲಾ ಕಾಲೇಜ್ ನ ಟೆರೆಸ್ ಕಟ್ಟಡದ ನವೀನ್ ರವರು ರೂಫಿಂಗ್ ಮಾಡಿಸುತ್ತಿದ್ದ ಶೀಟ್ ಗಳನ್ನು ಪರಿಶೀಲಿಸಿದ್ದು, ಕಬ್ಬಿಣದ ಶೀಟ್ ಗಳಿಗೆ ಜೆ. ಎಸ್.ಡಬ್ಲೂ ಕಂಪನಿಯ ನಕಲಿ ಪ್ರಿಂಟ್ ಹಾಕಿರುವುದು ಕಂಡು ಬಂದಿತ್ತು.

ಆಗ ಸ್ಥಳದಲ್ಲಿದ್ದ 20 ಅಡಿ ಉದ್ದ 15 ಶೀಟ್ ಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿತ್ತು.

ನಂತರ ನವೀನ್ ರವರು ಆ ಶೀಟ್ ಗಳನ್ನು ಗುರುಪುರದಲ್ಲಿರುವ ನಂದಿ ಟ್ರೇಡಿಂಗ್ ನಲ್ಲಿ ಖರೀದಿ ಮಾಡಿದ್ದಾಗಿ ತಿಳಿಸಿದ್ದು, ನಂದಿ ಟ್ರೇಡಿಂಗ್ ನ ಮಾಲಿಕರಾದ ಹೊಳೆಬೆನವಳ್ಳಿಯ ಲೋಹಿತ್ ಬಿ ನಾಯ್ಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ ಪೊಲೀಸರು,ಈತ ಕಬ್ಬಿಣದ ಶೀಟ್ ಗಳಿಗೆ ಜೆ.ಎಸ್.ಡಬ್ಲೂ ಎಂದು ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದರ ಕಾರಣದಿಂದ ಕಬ್ಬಿಣದ ಶೀಟ್ ಗಳಿಗೆ ಜೆ.ಎಸ್.ಡಬ್ಲೂ ಎಂದು ಪ್ರಿಂಟ್ ಮಾಡುವ ಯಂತ್ರವನ್ನು ಅಮಾನತ್ತು ಪಡಿಸಿಕೊಂಡಿದ್ದು , ತನಿಖೆ ಮುಂದುವರೆಸಿದ್ದಾರೆ.