Gm ಶುಭೋದಯ💐💐
*ಕವಿಸಾಲು*
1.
ನಾವು
ಮಂದಿರ ಮಸೀದಿ ಚರ್ಚು ಕಟ್ಟಿ
ಬೇರೆ ಬೇರೆ ಯಾಗುತ್ತೇವೆ;
ಹಕ್ಕಿಗಳೋ ಅಲ್ಲೆಲ್ಲ
ಗೂಡು ಕಟ್ಟಿ ಅಣಕಿಸುತ್ತವೆ!
2.
ಬದುಕಲ್ಲಿ
ಬದುಕು ಹುಡುಕುವುದೇ
ಬದುಕು ಹೃದಯವೇ…
3.
ಏಕಾಂಗಿ ಕುಳಿತಿದ್ದೆ
ಜಗತ್ತಿನ ದೃಷ್ಟಿಯಲ್ಲಿ;
ಆದರೆ, ನಿಜವಾಗಲೂ
ನಾನು ನನ್ನೊಂದಿಗೆ
ಕುಳಿತಿದ್ದೆ!
– *ಶಿ.ಜು.ಪಾಶ*
8050112067
(18/2/2026)