ಪರಿಸರಕ್ಕಾಗಿ ನಾವು ಸಂಘಟನೆ ಮತ್ತು ರಾಷ್ಟ್ರಭಕ್ತರ ಬಳಗದ ವತಿಯಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಮಾ.24 ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ* *ಶಿವಮೊಗ್ಗದ ನೆಹರೂ ಸ್ಟೇಡಿಯಂ ಎದುರಿನ ಪುಟ್ ಪಾತಲ್ಲಿ ನಡೆಯಲಿದೆ ಧರಣಿ* *ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ- ಪ್ರೊ.ಬಿ.ಎಂ.ಕುಮಾರಸ್ವಾಮಿ-ಶ್ರೀಪತಿ- ಕೆ.ಇ.ಕಾಂತೇಶ್- ಶ್ರೀಕಾಂತ್…*
*ಪರಿಸರಕ್ಕಾಗಿ ನಾವು ಸಂಘಟನೆ ಮತ್ತು ರಾಷ್ಟ್ರಭಕ್ತರ ಬಳಗದ ವತಿಯಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಮಾ.24 ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ*
*ಶಿವಮೊಗ್ಗದ ನೆಹರೂ ಸ್ಟೇಡಿಯಂ ಎದುರಿನ ಪುಟ್ ಪಾತಲ್ಲಿ ನಡೆಯಲಿದೆ ಧರಣಿ*
*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ- ಪ್ರೊ.ಬಿ.ಎಂ.ಕುಮಾರಸ್ವಾಮಿ-ಶ್ರೀಪತಿ- ಕೆ.ಇ.ಕಾಂತೇಶ್- ಶ್ರೀಕಾಂತ್…*

ಎರಡು ಪಾಸಿಟೀವ್ ಬೆಳವಣಿಗೆಗಳಾಗಿವೆ. ಕೇಂದ್ರದ ಮೂವರು ತಜ್ಞರನ್ನು ಭೇಟಿ ಮಾಡಿ ಮಾತಾಡಿದ್ದೇವೆ. ಕ್ಲೈಮ್ಯಾಟ್ ಕ್ಲೈಮ್ಯಾಕ್ಸ್ ಫಾರೆಸ್ಟ್ ಹಾಳಾಗೋಕೆ ಬಿಡಲ್ಲ ಎಂದಿದ್ದಾರೆ.
ಹೈಕೋರ್ಟಲ್ಲಿ ಪಿಐಎಲ್ ಹಾಕಲಾಗಿದೆ ಅಖಿಲೇಶ್ ಚಿಪ್ಲಿ ತಂಡದಿಂದ. ಆ ಪಿಟಿಷನ್ ಸ್ವೀಕರಿಸಿದ ಹೈಕೋರ್ಟ್ ಯೋಜನಾ ಕಾರ್ಯಕ್ಕೆ ಸ್ಟೇ ನೀಡಿದೆ.
ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವೂ ನಡೆದಿದ್ದು, ಮಾ.24 ರಂದು ಅಹೋರಾತ್ರಿ ಧರಣಿಯನ್ನು ಶಿವಮೊಗ್ಗದ ನೆಹರೂ ಮೈದಾನದ ಎದುರು ಹಮ್ಮಿಕೊಂಡಿದ್ದೇವೆ. 500 ಜನ ಪ್ರಮುಖರು ಈ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪಕ್ಷಾತೀತವಾಗಿ ಈ ಹೋರಾಟ ನಡೆಯುತ್ತಿದೆ. ಸ್ಟೇಡಿಯಂ ಎದುರಿನ ಫುಟ್ ಪಾತ್ ನಲ್ಲಿ ಧರಣಿ ನಡೆಯಲಿದೆ.
*ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆಯಿಂದಾಗುವ ದುಷ್ಪರಿಣಾಮಗಳು;*
ಈ ಯೋಜನೆಯಲ್ಲಿ 16,000ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಪ್ರಸ್ತಾವನೆ ಇದೆ. ಇದು ವನ್ಯ ಜೀವಿಗಳ ಆವಾಸ ಸ್ಥಾನಕ್ಕೆ ಧಕ್ಕೆ ಬರುತ್ತದೆ. ಭೂ ಕುಸಿತ, ಜಲ ಮಾಲಿನ್ಯ, ನದಿ ಕಣಿವಗಳಲ್ಲಿ ಹೂಳು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಯೋಜನೆಯು ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಾಣಿ ಸಂಕುಲಗಳಾದ ಸಿಂಹ ಬಾಲದ ಸಿಂಗಳೀಕ, ಕೆಂದಳಿಲು, ಕಾಳಿಂಗ ಸರ್ಪ, ಮಂಗಟ್ಟೆ ಹಕ್ಕಿ ಹಾಗೂ ಅಪಕೂಪದ ಔಷಧಿ ಸಸ್ಯಗಳ ತಾಣವಾದ ಪಶ್ಚಿಮ ಘಟ್ಟ ಪ್ರದೇಶದ ಶರಾವತಿ ಸಿಂಗಳೀಕ ಅಭಯಾರಣ್ಯದಲ್ಲಿ ಜಾರಿಯಾಗುತ್ತಿದೆ. ಇದು ವನ್ಯ ಜೀವಿ ಕಾಯ್ದೆ 1972ರ ಸ್ಪಷ್ಟ ಉಲ್ಲಂಘನೆ.
ಈ ಯೋಜನೆಗಾಗಿ 18,000 ಟನ್ ಸ್ಫೋಟಕಗಳನ್ನು ಬಳಸಿ ಭೂಗತ ಬಂಡೆಗಳನ್ನು ಒಡೆದು ಸುರಂಗ ಮಾರ್ಗವನ್ನು ಕೊರೆಯಲಾಗುತ್ತದೆ, ಇದರಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅಪಾರ ಪ್ರಮಾಣದ ಪರಿಸರ ನಾಶಕ್ಕೆ ಕಾರಣವಾಗುತ್ತದೆ.
ಯೋಜನಾ ಪ್ರದೇಶದಲ್ಲಿರುವ ಐತಿಹಾಸಿಕ ಸ್ಮಾರಕಗಳ ನಾಶ, ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಹಾನಿಯಾಗುವ ಭೀತಿ, ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಹರಿಯುವ ನದಿಗಳ ಜಲಮೂಲ ಶಾಶ್ವತವಾಗಿ ಬತ್ತಿ ಹೋಗುವ ಭೀತಿ, ಅಲ್ಲಿ ವಾಸಿಸುವ ಕುಟುಂಬಗಳಿಗೆ ಸಂಕಷ್ಟ.
ಅವೈಜ್ಞಾನಿಕ ಯೋಜನೆಯಿಂದ ಆರ್ಥಿಕ ಹೊರೆ, ದೀರ್ಘಕಾಲೀನ ಪರಿಣಾಮಗಳಲ್ಲಿ ನದಿಗಳ ಅವನತಿ, ಭೂಕುಸಿತ ಯೋಜನೆಯಿಂದ ಸಂತ್ರಸ್ತರಾಗುವ ಕುಟುಂಬಗಳು ಸ್ಥಳಾಂತರಗೊಂಡು ದಟ್ಟ ಅರಣ್ಯವನ್ನು ಅತಿಕ್ರಮಿಸುವ ಸಾಧ್ಯತೆ ಇದೆ ಎಂದು ಈ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
*ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಪ್ರಮುಖರು*
ಶ್ರೀ ಮಲ್ಲಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಬೆಕ್ಕಿನ ಕಲ್ಮರ ಶಿವಮೊಗ್ಗ, ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ಮೂಲೆಗದ್ದೆ, ಶ್ರೀ ರಾಜೋಟೇಶ್ವರ ಸ್ವಾಮಿಗಳು ಬಿಳಕಿ, ಶ್ರೀ ಅಭಿನವ ಸಿದ್ಧಲಿಂಗ ಸ್ವಾಮಿಗಳು ತಾವರೆಕೆರೆ, ಶ್ರೀ ಬಸವ ಮರುಳಸಿದ್ದ ಸ್ವಾಮೀಗಳು ಬಸವಕೇಂದ್ರ ಶಿವಮೊಗ್ಗ, ಶ್ರೀ ಮಾರುತಿ ಗುರೂಜಿ ಬಂಗಾರಮಕ್ಕಿ, ಶ್ರೀ ಮಹಾಂತ ಸ್ವಾಮಿಗಳು ಜಡೆ, ಶ್ರೀ ವಿನಯ್ ಗುರೂಜಿ, ಶ ಎ.ಟಿ.ರಾಮಸ್ವಾಮಿ ಮಾಜಿ ಶಾಸಕರು ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷರು, ಕೆ.ಎಸ್.ಈಶ್ವರಪ್ಪ ಮಾಜಿ ಉಪಮುಖ್ಯಮಂತ್ರಿಗಳು, ಪರಶುರಾಮೇಗೌಡ, ಕುಮಾರಸ್ವಾಮಿ, ಶ್ರೀಪತಿ. ಕೆ.ಈ.ಕಾಂತೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಶಂಕರ್ ಗೌಶೇರ್ ಹಾಗೂ ಅನೇಕ ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು, ಪರಿಸರ ಪ್ರೇಮಿಗಳು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ.


