ಭದ್ರಾವತಿಯಲ್ಲಿಂದು ಹಿಂದುಅ ಮಹಾಸಭಾ ಗಣಪತಿ ವಿಸರ್ಜನೆ; ಖಾಕಿ ಸರ್ಪಗಾವಲು

ಭದ್ರಾವತಿಯಲ್ಲಿಂದು ಹಿಂದುಅ ಮಹಾಸಭಾ ಗಣಪತಿ ವಿಸರ್ಜನೆ; ಖಾಕಿ ಸರ್ಪಗಾವಲು

ಇಂದು ಭದ್ರಾವತಿ ನಗರದಲ್ಲಿ ನಡೆಯುವ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಸರ್ಪಗಾವಲಿನಂತೆ ರೂಪಿಸಲಾಗಿದೆ.

ಕರ್ತವ್ಯಕ್ಕೆ *03* ಪೊಲೀಸ್ ಅಧೀಕ್ಷಕರು, *02* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *17* ಪೊಲೀಸ್ ಉಪಾಧೀಕ್ಷಕರು, *34* ಪೋಲಿಸ್ ನಿರೀಕ್ಷಕರು, *228* ಪೊಲೀಸ್ ಉಪ ನಿರೀಕ್ಷಕರು, *58* ಸಹಾಯಕ ಪೊಲೀಸ್ ನಿರೀಕ್ಷಕರು, *1690* ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, *197* ಗೃಹರಕ್ಷಕ ದಳ ಸಿಬ್ಬಂದಿಗಳು, *01* RAF ತುಕಡಿ, *01* SAF ತುಕಡಿ *05* DAR ತುಕಡಿ, *01* QRT ತುಕಡಿ ಮತ್ತು *06* KSRP ತುಕಡಿಗಳನ್ನು *ನಿಯೋಜಿಸಲಾಗದೆ.

ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಸ್ ಪಿ ಮಿಥುನ್ ಕುಮಾರ್ ಜಿ.ಕೆ  ರವರ ನೇತೃತ್ವದಲ್ಲಿ ನಿನ್ನೆ ಸಂಜೆ ಭದ್ರಾವತಿ ನಗರದ *ಕಾರ್ಮಿಕರ ಭವನದಲ್ಲಿ ಬ್ರೀಫಿಂಗ್ ನಡೆಸಿ,* ಬಂದೋಬಸ್ತ್ ಸಂದರ್ಭದಲ್ಲಿ *ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು* ನೀಡಿದರು.

ನಂತರ  ಮಿಥುನ್ ಕುಮಾರ್ ಜಿ.ಕೆ  ರವರ ನೇತೃತ್ವದಲ್ಲಿ, ಬಂದೋಬಸ್ತ್ ಗೆ ನೇಮಕವಾದ *ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು* ಮತ್ತು *ಸಶಸ್ತ್ರ ಪೊಲೀಸ್ ಬಲದ* ತುಕಡಿಗಳು ಹಾಗೂ *ಗೃಹರಕ್ಷಕ ಸಿಬ್ಬಂದಿಗಳ* ತಂಡದೊಂದಿಗೆ ಭದ್ರಾವತಿ ನಗರದಲ್ಲಿ *ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು.

ಆನಂತರ  ಪೊಲೀಸ್ ಅಧೀಕ್ಷಕರು, ಭದ್ರಾವತಿ ನಗರದ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಅತಿಥಿ ಗೃಹದಲ್ಲಿ ಪೊಲೀಸ್ ನಿಧೀಕ್ಷಕರು ಹಾಗೂ ಮೇಲ್ಪಟ್ಟ ದರ್ಜೆಯ ಪೊಲೀಸ್ ಅಧಿಕಾರಿಗಳಿಗೆ ಬ್ರೀಫಿಂಗ್ ಸಭೆ ನಡೆಸಿ ಸೂಚನೆಗಳನ್ನು ನೀಡಿದರು.