ಇಂದಿನ ನನ್ನ ದಾಖಲೆಯ 17ನೇ ಬಜೆಟ್ ಮೂಲಕ ಮುಂದಿನ ಒಂದು ವರ್ಷದ ಅವಧಿಗೆ ನಮ್ಮ ಸರ್ಕಾರ ಕೈಗೊಳ್ಳುವ ಜನಕಲ್ಯಾಣ – ಅಭಿವೃದ್ಧಿ ಕಾರ್ಯಗಳು, ರಾಜ್ಯದ ಆರ್ಥಿಕ ಸ್ಥಿತಿಗತಿ, ಸರ್ಕಾರದ ಮುಂದಿರುವ ಸವಾಲುಗಳು ಹಾಗೂ ಭವಿಷ್ಯದ ಪ್ರಗತಿಯ ಮುನ್ನೋಟ… ದಾಖಲೆಯ ಬಜೆಟ್ ಮಂಡಿಸಿದ ನಂತರ ಸಿಎಂ ಸಿದ್ದರಾಮಯ್ಯ ಏನಂದ್ರು?
ಇಂದಿನ ನನ್ನ ದಾಖಲೆಯ 17ನೇ ಬಜೆಟ್ ಮೂಲಕ ಮುಂದಿನ ಒಂದು ವರ್ಷದ ಅವಧಿಗೆ ನಮ್ಮ ಸರ್ಕಾರ ಕೈಗೊಳ್ಳುವ ಜನಕಲ್ಯಾಣ – ಅಭಿವೃದ್ಧಿ ಕಾರ್ಯಗಳು, ರಾಜ್ಯದ ಆರ್ಥಿಕ ಸ್ಥಿತಿಗತಿ, ಸರ್ಕಾರದ ಮುಂದಿರುವ ಸವಾಲುಗಳು ಹಾಗೂ ಭವಿಷ್ಯದ ಪ್ರಗತಿಯ ಮುನ್ನೋಟ…
ದಾಖಲೆಯ ಬಜೆಟ್ ಮಂಡಿಸಿದ ನಂತರ ಸಿಎಂ ಸಿದ್ದರಾಮಯ್ಯ ಏನಂದ್ರು?
ಬಜೆಟ್ ಕೇವಲ ಆಯವ್ಯಯದ ಲೆಕ್ಕ ಪುಸ್ತಕವಲ್ಲ, ಸರ್ಕಾರವೊಂದು ತನ್ನ ಜನರಿಗೆ ಉತ್ತದಾಯಿತ್ವವನ್ನು ತೋರಲು ಒದಗಿಬರುವ ಅವಕಾಶ ಎನ್ನುವುದು ನನ್ನ ನಂಬಿಕೆ. ಸಾರ್ವಜನಿಕರು ಕಟ್ಟುವ ಪ್ರತಿ ಪೈಸೆ ತೆರಿಗೆಗೂ ಲೆಕ್ಕ ನೀಡಬೇಕಾಗಿರುವುದು ಪ್ರಜಾಸತ್ತಾತ್ಮಕ ಸರ್ಕಾರವೊಂದರ ಕರ್ತವ್ಯ. ಇಂದಿನ ನನ್ನ ದಾಖಲೆಯ 17ನೇ ಬಜೆಟ್ ಮೂಲಕ ಮುಂದಿನ ಒಂದು ವರ್ಷದ ಅವಧಿಗೆ ನಮ್ಮ ಸರ್ಕಾರ ಕೈಗೊಳ್ಳುವ ಜನಕಲ್ಯಾಣ – ಅಭಿವೃದ್ಧಿ ಕಾರ್ಯಗಳು, ರಾಜ್ಯದ ಆರ್ಥಿಕ ಸ್ಥಿತಿಗತಿ, ಸರ್ಕಾರದ ಮುಂದಿರುವ ಸವಾಲುಗಳು ಹಾಗೂ ಭವಿಷ್ಯದ ಪ್ರಗತಿಯ ಮುನ್ನೋಟವನ್ನು ರಾಜ್ಯದ ಜನರ ಮುಂದಿಡುತ್ತಿದ್ದೇನೆ.
ಕಳೆದ ಕೆಲವು ದಿನಗಳಿಂದ ನಮ್ಮ ಸಂಪುಟದ ಸಚಿವರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ರೈತ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಜಾತಿ, ಜನಾಂಗ, ವರ್ಗದ ಜನರ ಆಶೋತ್ತರಗಳನ್ನು ಆಲಿಸಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್ ಮೂಲಕ ಮಾಡಿದ್ದೇನೆ.
ಬಜೆಟ್ ಎಂಬುದು ಹಾಳೆಗಳಿಗೆ ಸೀಮಿತವಾಗದೆ, ರಾಜ್ಯದ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿಯಾಗಬೇಕು ಎಂಬ ಆಶಯದೊಂದಿಗೆ ಕರ್ನಾಟಕದ ಸಮಸ್ತ ಜನತೆಗೆ 2026-27ನೇ ಸಾಲಿನ ಬಜೆಟ್ ಅನ್ನು ಇಂದು ಅರ್ಪಿಸುತ್ತಿದ್ದೇನೆ.
ನಮ್ಮ ಸರ್ಕಾರದ ಜೊತೆಗಿನ ನಿಮ್ಮ ಪ್ರೀತಿ – ಸಹಕಾರಕ್ಕಾಗಿ ಧನ್ಯವಾದಗಳು.


