ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ಜಾತಿ ಜನಗಣತಿ ಕೂಡಲೇ ಬಿಡುಗಡೆ ಮಾಡಿ ತಾಖತ್ತು ತೋರಿಸಲಿ ಸಿದ್ದರಾಮಯ್ಯ ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಮುಸಲ್ಮಾನ್ ಗೂಂಡಾಗಿರಿ- ಇರ್ಫಾನ್ @ ಗೌತಮ್ ಗೆ ಗಡಿಪಾರು ಮಾಡಿ ಡಿಸಿ ಕಚೇರಿ ಎದುರಿನ ಮೈದಾನ ವಕ್ಫ್ ಸುನ್ನಿ ಈದ್ಗಾ ಮೈದಾನ ಅನ್ನೋದು ತಪ್ಪು- ಆ ಮೈದಾನಕ್ಕೊಂದು ಹೆಸರಿಡಲಿ ಶಿವಮೊಗ್ಗ ಮಹಾನಗರ ಪಾಲಿಕೆ
ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;
ಜಾತಿ ಜನಗಣತಿ ಕೂಡಲೇ ಬಿಡುಗಡೆ ಮಾಡಿ ತಾಖತ್ತು ತೋರಿಸಲಿ ಸಿದ್ದರಾಮಯ್ಯ
ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಮುಸಲ್ಮಾನ್ ಗೂಂಡಾಗಿರಿ- ಇರ್ಫಾನ್ @ ಗೌತಮ್ ಗೆ ಗಡಿಪಾರು ಮಾಡಿ
ಡಿಸಿ ಕಚೇರಿ ಎದುರಿನ ಮೈದಾನ ವಕ್ಫ್ ಸುನ್ನಿ ಈದ್ಗಾ ಮೈದಾನ ಅನ್ನೋದು ತಪ್ಪು- ಆ ಮೈದಾನಕ್ಕೊಂದು ಹೆಸರಿಡಲಿ ಶಿವಮೊಗ್ಗ ಮಹಾನಗರ ಪಾಲಿಕೆ
ರಾಜ್ಯ, ದೇಶದಲ್ಲಿ ಜಾತಿ ಜನಗಣತಿ ದೊಡ್ಡ ಚರ್ಚೆ ನಡೀತಿದೆ. ಈ ಚರ್ಚೆಗಳು ನಿಲ್ಲಲಿ. ರಾಜ್ಯದಲ್ಲಿ ಜಾತಿ ಜನಗಣತಿ ಬಿಡುಗಡೆಯಾಗಿ ಈಗ ಚರ್ಚೆಯಲ್ಲಿದೆ. ಕಾಂತರಾಜ್ ಒರಿಜಿನಲ್ ಪ್ರತಿಯೇ ಸಿಕ್ಕಿಲ್ಲ ಎಂದು ಹಾಲಿ ಅಧ್ಯಕ್ಷರೇ ಹೇಳ್ತಿದ್ದಾರೆ.
ಕ್ಯಾಬಿನೇಟ್ ಚರ್ಚೆ ಇನ್ನೂ ಮುಗಿದಿಲ್ಲ. ಜಾತಿ ಜನಗಣತಿ ಮಾಡಲು ಸಿದ್ದರಾಮಯ್ಯ ಹೊರಟಾಗ ಯಾವ ವಿರೋಧವೂ ಇರಲಿಲ್ಲ. ಆಗ ವಿರೋಧ ಪಕ್ಷದ ನಾಯಕ ನಾನಾಗಿದ್ದೆ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಲೇ ಇಲ್ಲ.
ಲಿಂಗಾಯತ, ಒಕ್ಕಲಿಗ ಶಾಸಕ, ಸಚಿವರು ತೀರ್ಮಾನ ತೆಗೆದುಕೊಳ್ತೇವೆ ಅಂತಿದಾರೆ. ಇದಕ್ಕೆ ಮುಕ್ತಿ ಯಾವಾಗ? ಹೊರಕ್ಕೆ ಬಿಡಿ…ತಿದ್ದುಪಡಿ ಮಾಡೋದಾದ್ರೆ ಮಾಡೋಣ. ಆಗಲೂ ಹೇಳ್ತಿದ್ದೆ, ಈಗಲೂ ಹೇಳ್ತಿದೀನಿ- ಬಿಡುಗಡೆ ಮಾಡಿ. ನಿಮಗೆ ತಾಕತ್ ಇದ್ರೆ ಇಷ್ಟನೇ ತಾರೀಖಿನೊಳಗೆ ಬಿಡುಗಡೆ ಮಾಡ್ತೀನಿ ಅಂತ ಸಿದ್ದರಾಮಯ್ಯ ಘೋಷಿಸಲಿ.ಈ ಮೂಲಕ ಎಲ್ಲಾ ಜನಾಂಗಕ್ಕೂ ನ್ಯಾಯ ದೊರಕಿಸಿ ಕೊಡಲಿ.
ಅದೇನೇ ಇರಲಿ, ಜಾತಿಗಣತಿ ವರದಿ ಬಿಡುಗಡೆ ಮಾಡಿ. ತಿದ್ದುಪಡಿ ಆಮೇಲೆ ಮಾಡಿ. ರಾಜಕಾರಣ ಮಾಡಬೇಡಿ.
ಕೇಂದ್ರದ ಜಾತಿಗಣತಿ ಕಾಂಗ್ರೆಸ್ ಸ್ವಾಗತಿಸಿದೆ. ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು. ಮೂರು ತಿಂಗಳೊಳಗೆ ಜಾರಿಗೊಳಿಸಿ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಟಕ ಆಡ್ತಿದ್ದಾರೆ. ನಾಟಕ ನಿಲ್ಲಿಸಿ.
ಬಜೆಟ್ಟಲ್ಲಿ 500 ಕೋಟಿ ಇಟ್ಟಿದಾರೆ. ಮೊದಲು ಕೇಂದ್ರವೇ ಜಾತಿ ಗಣತಿಗೆ ಹಣ ಬಿಡುಗಡೆ ಮಾಡಿದ್ದು. ರಾಜ್ಯ ಸರ್ಕಾರ ಕೂಡಲೇ ಜಾತಿಗಣತಿ ಬಿಡುಗಡೆ ಮಾಡಿ. ಸಕಲ ಸಮಾಜಕ್ಕೂ ಅನುಕೂಲ ಆಗುತ್ತೆ.
ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಮುಸಲ್ಮಾನ ಗೂಂಡಾಗಿರಿ ಹೆಚ್ಚಾಗಿದೆ. ಸಿದ್ದರಾಮಯ್ಯ ಬಜೆಟ್ಟಲ್ಲಿ ಮುಸ್ಲೀಮರಿಗೆ ಹೆಚ್ಚಿನ ಆದ್ಯತೆ. ಇದನ್ನು ದುರುಪಯೋಗ ಮಾಡಿಕೊಂಡು ಗೂಂಡಾಗಿರಿ.
ಟಿಪ್ಪುನಗರದಲ್ಲಿ ಇರ್ಫಾನ್ @ ಗೌತಮ್ ಮೂರು ಗುಂಡು ಹಾರಿಸಿದ್ದಾನೆ. ರೌಡಿಶೀಟರ್ ಇವನು. ಗಡಿಪಾರು ಮಾಡಿ ಎಸ್ ಪಿ ಯವರೇ. ಏರ್ ಗನ್ನೋ ಒರಿಜಿನಲ್ ಗನ್ನೋ ತೀರ್ಮಾನಿಸಿ ಕ್ರಮ ಕೈಗೊಳ್ಳಿ.
ರಾಜ್ಯದಲ್ಲಿ ಸರ್ಕಾರ ಇದೆ ಅಂತ ಅನಿಸ್ತಿಲ್ಲ. ಮಂಗಳೂರು ಸುಹಾಸ್ ಶೆಟ್ಟಿ ಮರ್ಡರ್ ಕೇಸ್- ಗೂಂಡಾಗಳಿಗೆ ಪೊಲೀಸ್ ಇಲಾಖೆ ರುಚಿ ತೋರಿಸಬೇಕು. ಪೊಲೀಸ್ ಇಲಾಖೆ ಸತ್ತಿದೆಯಾ?
ಪೊಲೀಸ್ ರಾಜ್ಯ ಆಗೋಕೆ ಬಿಡಬೇಡಿ. ಜನ ತಿರುಗಿ ಬೀಳ್ತಾರೆ. ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯೋಕೆ ಹೋದ್ರಲ್ಲ, ವಾಪಸ್ ಹೊಡೆದಿದ್ರೆ ಏನಾಗೋದು? ಒಬ್ಬರಾದ್ರೂ ಕ್ಷಮೆ ಕೇಳಿದ್ರಾ? ಜನ ತಿರುಗಿ ಬೀಳೋದಿನ ದೂರವಿಲ್ಲ…
ಡಿಸಿ ಕಚೇರಿ ಎದುರಿನ ಜಾಗ ವಕ್ಫ್ ಪ್ರಾಪರ್ಟಿ ಅಲ್ಲ. ಪಾಲಿಕೆ ಆಯುಕ್ತರೇ ಹಿಂದೆ ಪತ್ರ ಬರೆದಿದ್ದಾರೆ. ಆ ಜಾಗ ನಗರಪಾಲಿಕೆ ಆಸ್ತಿ. ವಕ್ಫ್ ಸುನ್ನಿ ಈದ್ಗಾ ಮೈದಾನ ಅಂತ ಒತ್ತುವರಿ ಮಾಡಿಕೊಳ್ಳೋ ಪ್ರಯತ್ನ ಮಾಡ್ತಿದಾರೆ. ಇದರ ಮುಖಾಂತರ ಅನುಮತಿ ಕೊಟ್ಟಿರೋದನ್ನೇ ನೆಪವಾಗಿಟ್ಟುಕೊಳ್ಳಬಹುದು. ಆ ಜಾಗದಲ್ಲಿ ಪ್ರತಿಭಟನೆಗೆ ಅವಕಾಶ ಕೊಡಬಾರದು.
ಸುಪ್ರೀಂ ಕೋರ್ಟ್ ನಲ್ಲಿ ವಕ್ಫ್ ಮಸೂದೆ ಪ್ರಶ್ನಿಸಿರುವುದರಿಂದ ಪ್ರತಿಭಟನೆಗಳಿಗೆ ಅನುಮತಿ ನೀಡಬಾರದಿತ್ತು ಎಂದು ಮಂಗಳೂರು ಪ್ರತಿಭಟನೆ ಕುರಿತಾಗಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಆದೇಶ ಪ್ರತಿ ಸಿಗಲಿದೆ. ಅನುಮತಿ ಕೊಡುವುದನ್ನು ನಿಲ್ಲಿಸಿ ಎಂದು ಕರ್ನಾಟಕ ಹೈಕೋರ್ಟ್ ಹೇಳಿರೋದು ಅರ್ಥ ಮಾಡಿಕೊಳ್ಳಲಿ.
ಕಾರ್ಪೊರೇಷನ್ ಅಧಿಕಾರಿಗಳೇ, ಒತ್ತುವರಿ ಮೈದಾನವನ್ನು ವಕ್ಫ್ ಸುನ್ನಿ ಈದ್ಗಾ ಮೈದಾನ ಎಂದು ಹೇಳುತ್ತಿರೋದನ್ನು ಬಿಟ್ಟು ಒಂದೊಳ್ಳೆ ಹೆಸರನ್ನಿಡಿ. ನೆಹರೂ ಮೈದಾನ, ಅಲ್ಲಮ ಮೈದಾನ ಎಂದು ಹೆಸರಿಟ್ಟಂತೆ ಇದಕ್ಕೂ ಒಂದು ಒಳ್ಳೆಯ ಹೆಸರಿಡಿ.
ಪತ್ರಿಕಾಗೋಷ್ಠಿ ನಂತರ, ಪಾಲಿಕೆಗೆ ಭೇಟಿ ಕೊಟ್ಟು ಮನೆಗೆ ಹೋದ್ವಿ. ಪೊಲೀಸರು ಮನೆಗೆ ಬಂದಿದ್ರು. ಡಿವೈಎಸ್ ಪಿ, ಇಬ್ಬರು ಸರ್ಕಲ್ ಇನ್ಸ್ ಪೆಕ್ಟರ್ ಗಳು ಇದೊಂದ್ ಸರ್ತಿ ಕೊಡ್ತೀವಿ ಪರ್ಮೀಷನ್ ಅಂದ್ರು. ನಾನು ವಿರೋಧಿಸ್ದೆ.