ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಹೊಗಳದಿದ್ದರೆ
ಸಂತಸಗೊಳ್ಳುವುದಿಲ್ಲ
ಯಾರೂ…

ಸುಳ್ಳು ಹೇಳದೇ
ಹೊಗಳಲಾಗುವುದಿಲ್ಲ
ಯಾರಿಗೂ…

2.
ಒಬ್ಬರನ್ನು ಬಿಟ್ಟು
ಮತ್ತೊಬ್ಬರಿಲ್ಲ ಇಲ್ಲಿ…

ಅದುವೇ
ಸಂಬಂಧಗಳ
ಸುಗಂಧವೂ,
ಸೌಂದರ್ಯವೂ!

3.
ಶಾಂತವಿಡು ಮನಸು;
ಪ್ರತಿ ಪ್ರಶ್ನೆಗೂ
ಉತ್ತರ ನೀಡುವುದು
ಕಾಲ!

4.
ನಿನ್ನೊಳಗೇ ಮುಳುಗಿ
ಹುಡುಕುತ್ತಿರುವೆ ನನ್ನನ್ನು…

ಇನ್ನುಳಿದಂತೆ ಎಲ್ಲೆಡೆ
ಕಣ್ಮರೆಯು ನಾನು!

5.
ಮನುಷ್ಯನದು ಎರಡೇ ಸ್ಥಿತಿ;
ಮಣ್ಣಿನ ಮೇಲಿನದು
ಮತ್ತು
ಮಣ್ಣಿನ ಒಳಗಿನದು!

– *ಶಿ.ಜು.ಪಾಶ*
8050112067
(16/3/2026)