*ಕುಳ್ಳಿ ಕಿರಣನ ಕೊಲೆ;* *ಉಮೇಶ್ ನಾಯ್ಕನ ಕಾಲಿಗೆ ಗುಂಡು ಹೊಡೆದ ಪೊಲೀಸರು* *ಉಮೇಶ್ ನಾಯ್ಕ,ಉಮೇಶ ಹೊಸಕೊಪ್ಪ,ಬಾಬು ರಾಜೇಂದ್ರ ಪ್ರಸಾದ್ ಹೊಸಕೊಪ್ಪ, ಸುನೀಲ್ ಹೊಸಕೊಪ್ಪ, ಮನೋಜ್ ಶಿವಮೊಗ್ಗ ಬಂಧಿತ ಆರೋಪಿಗಳು…* *50 ಸಾವಿರ ರೂ.,ಗಳ ವಿಚಾರದಲ್ಲಿ ನಡೆದಿತ್ತು ಕೊಲೆ*

*ಕುಳ್ಳಿ ಕಿರಣನ ಕೊಲೆ;*

*ಉಮೇಶ್ ನಾಯ್ಕನ ಕಾಲಿಗೆ ಗುಂಡು ಹೊಡೆದ ಪೊಲೀಸರು*

*ಉಮೇಶ್ ನಾಯ್ಕ,ಉಮೇಶ ಹೊಸಕೊಪ್ಪ,ಬಾಬು ರಾಜೇಂದ್ರ ಪ್ರಸಾದ್ ಹೊಸಕೊಪ್ಪ, ಸುನೀಲ್ ಹೊಸಕೊಪ್ಪ, ಮನೋಜ್ ಶಿವಮೊಗ್ಗ ಬಂಧಿತ ಆರೋಪಿಗಳು…*

*50 ಸಾವಿರ ರೂ.,ಗಳ ವಿಚಾರದಲ್ಲಿ ನಡೆದಿತ್ತು ಕೊಲೆ*

ಶಿವಮೊಗ್ಗದ ರಾಮಿನಕೊಪ್ಪ ಸಮೀಪ ಭಾನುವಾರದಂದು ನಡೆದಿದ್ದ ಕುಳ್ಳಿ ಕಿರಣನ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸರು ಸಿಪಿಐ ಗುರುರಾಜ್ ನೇತೃತ್ವದಲ್ಲಿ 5 ಜನರನ್ನು ಬಂಧಿಸಿದ್ದು, ಓರ್ವನ ಕಾಲಿಗೆ ಗುಂಡು ಹಾರಿಸಿದ ಘಟನೆಯು ನಡೆದಿದೆ.

ಎನ್ ಆರ್ ಪುರ ರಸ್ತೆಯ ಲಿಂಗಾಪುರ ಬಳಿಯಲ್ಲಿ ಆರೋಪಿ ಉಮೇಶ್ ನಾಯ್ಕ ಮತ್ತಿತರಿದ್ದಾರೆಂದು ತಿಳಿದ ಪೊಲೀಸರು ಬಂಧಿಸಲು ತೆರಳಿದಾಗ 27 ವರ್ಷದ ಉಮೇಶ್ ನಾಯ್ಕ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಜಂಬಗಿ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ರಕ್ಷಣಾತ್ಮಕವಾಗಿ ಉಮೇಶ್ ನಾಯ್ಕನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.

ಉಮೇಶ ಹೊಸಕೊಪ್ಪ,ಬಾಬು ರಾಜೇಂದ್ರ ಪ್ರಸಾದ್ ಹೊಸಕೊಪ್ಪ, ಸುನೀಲ್ ಹೊಸಕೊಪ್ಪ, ಮನೋಜ್ ಶಿವಮೊಗ್ಗ ಉಳಿದ ಕೊಲೆ ಆರೋಪಿಗಳು.

ತುಂಗಾನಗರ ಪೊಲೀಸರು ಐವರು ಆರೋಪಿಗಳನ್ನೂ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಕುಳ್ಳಿ ಕಿರಣ ಆರೋಪಿಗಳಿಂದ 50 ಸಾವಿರ ರೂ.,ಪಡೆದು ಹಿಂದಿರುಗಿಸದ ಕಾರಣಕ್ಕಾಗಿ ಈ ಕೊಲೆ ನಡೆಯಿತೆಂದು ಪೊಲೀಸ್ ಮೂಲಗಳು ತಿಳಿಸಿವೆ.