*ಶಿವಮೊಗ್ಗದ ಸೀಗೆಹಟ್ಟಿಯ ಕುಳ್ಳಿ ಕಿರಣನ ಕೊಲೆ* *ಎಸ್ ಪಿ ನಿಖಿಲ್ ಏನಂದ್ರು?*
*ಶಿವಮೊಗ್ಗದ ಸೀಗೆಹಟ್ಟಿಯ ಕುಳ್ಳಿ ಕಿರಣನ ಕೊಲೆ*
*ಎಸ್ ಪಿ ನಿಖಿಲ್ ಏನಂದ್ರು?*

*ಕುಳ್ಳಿ ಕಿರಣನ ಮರ್ಡರ್…*
*ಎಸ್ ಪಿ ನಿಖಿಲ್ ಏನಂದ್ರು?*
ಶಿವಮೊಗ್ಗದ ರಾಮಿನಕೊಪ್ಪ ಬಳಿಯಲ್ಲಿ ಕುಳ್ಳಿ ಕಿರಣ(32)ನ ಕೊಲೆಯಾಗಿದ್ದು, ಇದಕ್ಕೆ ಖಾಸಗಿ ಹಣಕಾಸು ವಿಚಾರದಲ್ಲಿ ನಡೆದ ಜಗಳವೇ ಕಾರಣವೆಂದು ಎಸ್ ಪಿ. ಬಿ.ನಿಖಿಲ್ ಸ್ಪಷ್ಟಪಡಿಸಿದ್ದಾರೆ.
ಇಬ್ಬರಿಂದ ಮೂವರು ಈ ಕೊಲೆ ಮಾಡಿರಬಹುದು ಎಂದು ಎಸ್ ಪಿ ನಿಖಿಲ್ ಹೇಳಿದ್ದಾರೆ.
ಇಸ್ಪೀಟ್ ಜೂಜಾಟ ಆಡುತ್ತಿದ್ದ ರಾಮಿನಕೊಪ್ಪದ ಜಾಗದಲ್ಲಿಯೇ ಕುಳ್ಳಿ ಕಿರಣ ಎಂಬ ರೌಡಿಯನ್ನು ಕೊಲೆ ಮಾಡಲಾಗಿದೆ.
ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಗುಂಪು ಪರಾರಿಯಾಗುತ್ತಿದ್ದಂತೆಯೇ ಹಲ್ಲೆಗೊಳಗಾದ ಕಿರಣನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಸಾವು ಕಂಡಿದ್ದಾನೆ.
ಕೊಲೆಗೆ ಕಾರಣ ಇಸ್ಪೀಟ್ ಅಥವಾ ಹಳೆಯ ದ್ವೇಷವೇ? ಪೊಲೀಸರು ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ.
ಮೃತ ಕುಳ್ಳಿ ಕಿರಣ ಸೀಗೆಹಟ್ಟಿಯ ವಾಸಿ.


