*ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ – ವೈ.ಹೆಚ್. ನಾಗರಾಜ್*
*ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ – ವೈ.ಹೆಚ್. ನಾಗರಾಜ್*
*ಶಿವಮೊಗ್ಗ:* ಕಾಂಗ್ರೆಸ್ ನಾಯಕರನ್ನು, ಪಕ್ಷವನ್ನು ಟೀಕಿಸುವ ಯಾವುದೇ ನೈತಿಕತೆಯೂ ಬಿಜೆಪಿ ನಾಯಕರಿಗೆ ಇಲ್ಲ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಸಕ ಚೆನ್ನಬಸಪ್ಪ, ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಟೀಕೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಐಆರ್ ವಿರೋಧಿಸುವವರು ದೇಶದ್ರೋಹಿಗಳು ಎನ್ನುವ ಮೂಲಕ ಚೆನ್ನಬಸಪ್ಪ ಅವರು ತಮ್ಮ ಹರಿತ ನಾಲಿಗೆಯನ್ನು ಮತ್ತೆ ಹೊರಚಾಚಿದ್ದಾರೆ. ‘ಹೊಡಿ-ಬಡಿ-ಕಡಿ’ ಸಂಸ್ಕೃತಿಯನ್ನು ಶಾಸಕರಾದ ಮೇಲಾದರೂ ತಿದ್ದಿಕೊಳ್ಳಬಹುದಿತ್ತು, ಆದರೆ ಇದೇ ನಮ್ಮ ಸಂಸ್ಕೃತಿ ಎಂದುಕೊಂಡಿದ್ದಾರೆ. ಬಿ.ವೈ. ವಿಜಯೇಂದ್ರ ಅವರು ಅಪ್ಪನ ಘನತೆಯನ್ನೇ ಹಾಳು ಮಾಡಿದ್ದನ್ನು ಮರೆತಿದ್ದಾರೆ ಎಂದು ಅವರು ದೂರಿದ್ದಾರೆ.
ವಿಜೇಯೆಂದ್ರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈ ನನ್ನ ಮಕ್ಕಳು ಕಾಂಗ್ರೆಸ್ ವನರು ಎಂದಿದ್ದಾರೆ.. ಇದೇನು ನಾಲಿಗೆಯೋ,ಗೊತ್ತಿಲ್ಲ.ಕೊನೆ ಪಕ್ಷ ತಂದೆಯವರ ನಡೆ ನುಡಿಯನ್ನಾದ್ರೂ ಪಾಲಿಸಲಿ…ಎಂದಿದ್ದಾರೆ.
ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ರಾಮಲೀಲಾ ಮೈದಾನದಲ್ಲಿ ನಡೆದ ‘ದಿಲ್ಲಿ ಚಲೋ’ ಬೃಹತ್ ಪ್ರದರ್ಶನವು ಇತ್ತೀಚಿನ ವರ್ಷಗಳ ಅತ್ಯಂತ ದೊಡ್ಡ ಶಕ್ತಿ ಪ್ರದರ್ಶನವಾಗಿದ್ದು, ಇದು ಕಾಂಗ್ರೆಸ್ ಒಬ್ಬರ ಹೋರಾಟವಲ್ಲ, ಜನರ ಕಳವಳದ ಸಂಕೇತವಾಗಿದೆ ಎಂದಿದ್ದಾರೆ.
ಶಾಸಕರನ್ನೇ ಖರೀದಿ ಮಾಡುವ, ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ, ಅರಾಜಕತೆಯನ್ನು ಸೃಷ್ಟಿಸುವ ಬಿಜೆಪಿಯವರು ಈಗ ಅರಾಜಕತೆಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಎಸ್ಐಆರ್ ನಿಂದ ಆಗಿರುವ ಹಾನಿಯನ್ನು ಸರಿಪಡಿಸಬೇಕು ಮತ್ತು ಸಿಇಸಿ ರಾಜೀನಾಮೆ ಪಡೆಯಬೇಕು ಎಂದು ವೈ.ಹೆಚ್. ನಾಗರಾಜ್ ಆಗ್ರಹಿಸಿದ್ದಾರೆ.


