*ಆತಂಕಕ್ಕೊಳಗಾದ ಪೋಷಕರು!* *ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಮೌನವೇಕೆ?* *ದಾವಣಗೆರೆಯ ಡಾ.ಸಿಎನ್ ಆರ್ ರಾವ್ ಅಕಾಡೆಮಿಯಲ್ಲಿ ನಡೆಯುತ್ತಿರುವುದೇನು?* *ಭಾರತ ರತ್ನನ ಹೆಸರು ಬೀದಿಗೆ ಬೀಳುವ ಮುನ್ನ ಎಚ್ಚೆತ್ತುಕೊಳ್ಳಿ…*

*ಆತಂಕಕ್ಕೊಳಗಾದ ಪೋಷಕರು!*

*ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಮೌನವೇಕೆ?*

*ದಾವಣಗೆರೆಯ ಡಾ.ಸಿಎನ್ ಆರ್ ರಾವ್ ಅಕಾಡೆಮಿಯಲ್ಲಿ ನಡೆಯುತ್ತಿರುವುದೇನು?*

*ಭಾರತ ರತ್ನನ ಹೆಸರು ಬೀದಿಗೆ ಬೀಳುವ ಮುನ್ನ ಎಚ್ಚೆತ್ತುಕೊಳ್ಳಿ…*

ಪೋಷಕರು ಆತಂಕಕ್ಕೊಳಗಾಗಿದ್ದಾರೆ! ದಾವಣಗೆರೆಯ ಡಾ.ಸಿಎನ್ ಆರ್ ರಾವ್ ಅಕಾಡೆಮಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಆಕಾಶದ ನಕ್ಷತ್ರಗಳನ್ನು ತೋರಿಸಿ ಮಣ್ಣು ಮುಕ್ಕಿಸುತ್ತಿದೆಯಾ? ಎಂಬ ಆತಂಕದಲ್ಲಿ ಕೆಲ ಪೋಷಕರು ಇದ್ದಂತಿದೆ!

ಡಮ್ಮಿ ಕಾಲೇಜುಗಳ ಜೊತೆ ಅಕ್ರಮ ಸಂಬಂಧ ಮಾಡಿಕೊಂಡು ಮಕ್ಕಳ ಅಡ್ಮೀಷನ್ ಮಾಡಿಸಿ, ತಾವು ಅತ್ಯುತ್ತಮ ಕಾಲೇಜಿನ ವಿದ್ಯಾರ್ಥಿಗಳೆಂಬಂತೆ ಅವರಲ್ಲಿ ಭ್ರಮೆ ಮೂಡಿಸಲಾಗುತ್ತಿದೆಯಾ? ಪೋಷಕರು ಆತಂಕಕ್ಕೊಳಗಾಗಿರುವುದು ಇಂಥ ವಿಚಾರಗಳಲ್ಲಿಯೇ…

ತಮ್ಮ ಮಕ್ಕಳು ಓದಿ ದೊಡ್ಡ ಹುದ್ದೆಗಳನ್ನು ಅಲಂಕರಿಸಲಿ ಎಂಬ ಕನಸು ಹೊತ್ತು ಹಣದ ಹೊಳೆ ಹರಿಸುವ ಪೋಷಕರಿಗೆ ಹಾದಿ ತಪ್ಪಿಸಲಾಗುತ್ತಿದೆಯೇ?

ಭಾರತ ರತ್ನ ಪಡೆದವರ ಹೆಸರನ್ನೂ ಈ ಅಕಾಡೆಮಿ ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ? ಬೇರೊಂದು ಕಾಲೇಜುಗಳಲ್ಲಿ (ಡಮ್ಮಿ) ನೋಂದಣಿ ಮಾಡಿಸಿ ಈ ಅಕಾಡೆಮಿ ಹಾರ್ಸ್ ರೈಡಿಂಗ್, ಟ್ರಕ್ಕಿಂಗ್ ಆಸೆ ಕೂಡ ತೋರಿಸಿ ದಿಕ್ಕು ತಪ್ಪಿಸುತ್ತಿದೆ ಎಂಬ ಆರೋಪ ಪೋಷಕರದು.

ಬೇರೆ ಬೇರೆ ಕಾಲೇಜುಗಳಲ್ಲಿ ಕೆಲಸ ಮಾಡಿ ಅಲ್ಲಿಂದ ಐದಾರು ತಿಂಗಳುಗಳಲ್ಲೇ ಕಾಲ್ಕೀಳುವ ಬಯಾಲಜಿ ವಿಷಯದ ಲೇಡಿ ಉಪನ್ಯಾಸಕಿಯೂ ಸೇರಿದಂತೆ ಕೆಲ ಉಪನ್ಯಾಸಕರು ಇಂಥ ತರಬೇತಿ ಟೀಮ್ ಗಳನ್ನು ಕಟ್ಟಿಕೊಂಡು ಪ್ರಥಮ ಮತ್ತು ದ್ವಿತೀಯ ಪಿಯುಸಿಯ, ಭವ್ಯ ಭವಿಷ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಏಮ್ಸ್ ಜೆಇಇ ಸೀಟ್ ಕೊಡಿಸುವ ಆಸೆಯನ್ನು ತೋರಿಸಿ ಹೀಗೆಲ್ಲ ಮಾಡುತ್ತಿದ್ದರೂ ಸಂಬಂಧಿಸಿದ ಶಿಕ್ಷಣ ಇಲಾಖೆ ಸೂಕ್ತ ಕಾನೂನು ಕ್ರಮ ಯಾಕೆ ಕೈಗೊಳ್ತಿಲ್ಲ? ಸರ್ಕಾರವೂ ಕಾಲೇಜು ಅನುಮತಿ ಪಡೆಯದ ಇಂಥ ಟೀಮ್ ಗಳ ವಿರುದ್ಧ ತೊಡೆ ತಟ್ಟದೇ ಬಿಟ್ಟಿರುವುದು ಸರಿಯಲ್ಲ…

ಈಗಲಾದರೂ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಕಾರಣದಿಂದಲಾದರೂ ಇಂಥ ಟೀಮ್ ಗಳಿಂದ ಹುಷಾರಾಗಿರಬೇಕು. ಮಕ್ಕಳು ಕೂಡ ಡುಬುಕ್ ಅಂತ ಬಲಿ ಬೀಳಬಾರದು. ಕಾಲೇಜು ಇಲಾಖೆ, ಸರ್ಕಾರಗಳೂ ಮಕ್ಕಳ ಭವಿಷ್ಯದ ಜೊತೆ ಆಟ ಆಡುವ ಇಂಥ ಸಂಸ್ಥೆಗಳ ವಿರುದ್ಧ ಮುಗಿಬಿದ್ದು ಕ್ರಮಕೈಗೊಳ್ಳಬೇಕು.