ಡಿ.ಕೆ.ಶಿ. ಶಿಷ್ಯ ಆರ್.ಮೋಹನ್ ಐಡಿಯಾ ಫುಲ್ ವೈರಲ್!* *ಇಡೀ ರಾಜ್ಯದಲ್ಲೇ ಗಮನ ಸೆಳೆದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷ ಜನ್ಮ ದಿನಾಚರಣೆ* *ಅಖಿಲ ಕರ್ನಾಟಕ ಡಿಕೆಶಿ ಅಭಿಮಾನಿಗಳ ಸಂಘದ ಆರ್.ಮೋಹನ್ ವಿಶೇಷ ಕಾರ್ಯಕ್ರಮ* *ಡಿಕೆಶಿ ಜನ್ಮದಿನಾಚರಣೆಯಲ್ಲಿ ಸೈನಿಕರನ್ನೂ ಸ್ಥಳೀಯರನ್ನೂ ಗೌರವಿಸಿ ಅರ್ಥಪೂರ್ಣ ಆಚರಣೆ ಮಾಡಿದ ಮೋಹನ್ ದಂಪತಿ* *ಸೈನಿಕರು ನಿಜವಾದ ದೇವರು ಎಂದ ಎಂ.ಎಲ್.ಸಿ ಬಲ್ಕೀಶ್ ಬಾನು* *ಯೋಧ ಎಂಬ ಪದವೇ ರೋಮಾಂಚಕ ಎಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್* *ಯೋಧನ ದೇಶ ಮತ್ತು ಕುಟುಂಬದ ಕಥೆ ಹೇಳಿದ ಶ್ರೀ ಆದಿಚುಂಚನಗಿರಿ ಸ್ವಾಮೀಜಿ*

*ಡಿ.ಕೆ.ಶಿ. ಶಿಷ್ಯ ಆರ್.ಮೋಹನ್ ಐಡಿಯಾ ಫುಲ್ ವೈರಲ್!*

*ಇಡೀ ರಾಜ್ಯದಲ್ಲೇ ಗಮನ ಸೆಳೆದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷ ಜನ್ಮ ದಿನಾಚರಣೆ*

*ಅಖಿಲ ಕರ್ನಾಟಕ ಡಿಕೆಶಿ ಅಭಿಮಾನಿಗಳ ಸಂಘದ ಆರ್.ಮೋಹನ್ ವಿಶೇಷ ಕಾರ್ಯಕ್ರಮ*

*ಡಿಕೆಶಿ ಜನ್ಮದಿನಾಚರಣೆಯಲ್ಲಿ ಸೈನಿಕರನ್ನೂ ಸ್ಥಳೀಯರನ್ನೂ ಗೌರವಿಸಿ ಅರ್ಥಪೂರ್ಣ ಆಚರಣೆ ಮಾಡಿದ ಮೋಹನ್ ದಂಪತಿ*

*ಸೈನಿಕರು ನಿಜವಾದ ದೇವರು ಎಂದ ಎಂ.ಎಲ್.ಸಿ ಬಲ್ಕೀಶ್ ಬಾನು*

*ಯೋಧ ಎಂಬ ಪದವೇ ರೋಮಾಂಚಕ ಎಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್*

*ಯೋಧನ ದೇಶ ಮತ್ತು ಕುಟುಂಬದ ಕಥೆ ಹೇಳಿದ ಶ್ರೀ ಆದಿಚುಂಚನಗಿರಿ ಸ್ವಾಮೀಜಿ*

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನ್ಮದಿನ ಇಂದು. ಆಚರಿಸಬೇಡಿ ಅಂತ ಬಂಡೆ ಸಾಹೇಬರು ಘೋಷಿಸಿದರೂ ಅವರ ಪಟ್ಟ ಶಿಷ್ಯ, ಶಿವಮೊಗ್ಗದ ಆರ್.ಮೋಹನ್ ಬಿಡಬೇಕಲ್ಲ…ಶಿವಮೊಗ್ಗಕ್ಕೆ ಬಂದಿರೋ ಸೈನಿಕರನ್ನು ಮೊದಲು ಸನ್ಮಾನಕ್ಕೆ ಸಿದ್ಧಪಡಿಸಿಕೊಂಡರು. ಅವರ ಜೊತೆ ಮೆರವಣಿಗೆಗೆ ಹೆಜ್ಜೆ ಹಾಕಿದರು. ಎಲ್ಲರೂ ಗಮನಿಸುವಂತೆ ಮೋಹನ್ ದಂಪತಿಗಳು ಸಮಾರಂಭ ಮುಗಿಸಿದರು.

ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ಶ್ರೀ ಆದಿಚುಂಚನಗಿರಿ ಮಠದ ಶ್ರೀ ಸಾಯಿನಾಥ ಸ್ವಾಮೀಜಿ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷ ಹೆಚ್. ಎಸ್.ಸುಂದರೇಶ್, ಭದ್ರಾವತಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಕಲಗೋಡು ರತ್ನಾಕರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷ, ಕಾಂಗ್ರೆಸ್ ಮುಖಂಡ ಜಿ.ಡಿ.ಮಂಜುನಾಥ್, ಹಿರಿಯರಾದ ರಾಜಮ್ಮ, ಎಚ್. ಎಮ್. ಮಧು, ಶಿಡ್ನೂರ್ ಶಿವಣ್ಣ ಸೇರಿದಂತೆ ಹಲವರಿದ್ದರು.