*ವಾಮಾಚಾರ ಕಥೆ ಹೇಳಿ ಭದ್ರಾವತಿ ಮಹಿಳೆಯ ಚಿನ್ನ- ನಗದು ಲೂಟಿ…* *ತಿಮ್ಲಾಪುರ ಕ್ಯಾಂಪಿನ ಮುರುಳಿಯನ್ನು ಬಂಧಿಸಿದ ಪೊಲೀಸರು* *ಕೆಲವೇ ಗಂಟೆಗಳಲ್ಲಿ ಕೇಸ್ ಸಾಲ್ವ್…*

*ವಾಮಾಚಾರ ಕಥೆ ಹೇಳಿ ಭದ್ರಾವತಿ ಮಹಿಳೆಯ ಚಿನ್ನ- ನಗದು ಲೂಟಿ…*

*ತಿಮ್ಲಾಪುರ ಕ್ಯಾಂಪಿನ ಮುರುಳಿಯನ್ನು ಬಂಧಿಸಿದ ಪೊಲೀಸರು*

*ಕೆಲವೇ ಗಂಟೆಗಳಲ್ಲಿ ಕೇಸ್ ಸಾಲ್ವ್…*

ವಾಮಾಚಾರದ ಹೆಸರಲ್ಲಿ ಭಯಭೀತಗೊಳಿಸಿ ಮಹಿಳೆಯಿಂದ ಬಂಗಾರ ಹಾಗೂ ನಗದು ಹಣ ದೋಚಿದ್ದ ವ್ಯಕ್ತಿಯನ್ನು ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿ ಮಾಲು ವಶಕ್ಕೆ ಪಡೆದಿದ್ದಾರೆ.

ಭದ್ರಾವತಿ ಗಾಂಧಿನಗರದ ಮಹಿಳೆಗೆ ನಿಮ್ಮ ಮೇಲೆ ವಾಮಾಚಾರ ಆಗಿದೆ.ಅದನ್ನು ತೆಗೆಸದಿದ್ದಲ್ಲಿ ನಿಮಗೂ ನಿಮ್ಮ ಮಕ್ಕಳಿಗೂ ಗಂಡಾಂತರ ಕಾದಿದೆ ಎಂದು ಹೆದರಿಸಿದ ಭದ್ರಾವತಿಯ ಮುರಳಿ ಮತ್ತು ಅವನ ತಮ್ಮ ರವಿ ಪೂಜೆಯ ಕಥೆ ಹೇಳಿದ್ದಾರೆ. ನಂಬಿದ ಮಹಿಳೆ 193 ಗ್ರಾಂ ತೂಕದ ಬಂಗಾರದ ಒಡವೆ, ಎರಡು ಲಕ್ಷ ನಗದು ಹಣ ನೀಡಿದ್ದಾರೆ.

ಎರಡನ್ನೂ ಪಡೆದ ಆರೋಪಿಗಳು ಪರಾರಿಯಾಗಿದ್ದು, ಅನುಮಾನಗೊಂಡ ಮಹಿಳೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಡಿವೈಎಸ್ ಪಿ ರಾಥೋಡ್ ಮೇಲ್ವಿಚಾರಣೆಯಲ್ಲಿ ಸಿಪಿಐ ನಾಗಮ್ಮ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ಲಿನ ಪೊಲೀಸ್ ಠಾಣೆಯ ಪಿಎಸ್ ಐ ಸಿದ್ದಪ್ಪ ಎಂ.ಪಿ. ಮತ್ತು ಸಿಬ್ಬಂದಿ ಆದರ್ಶ ಶೆಟ್ಟಿ, ಮನ್ಸೂದ್ ಖಾನ್,ಆಸ್ಟಿನ್ ಜಾಯ್ ಫುಲ್, ಬಿ.ಎನ್.ಕಾಂತರಾಜ್,ಹಣಮಂತ ಅಮಾತಿ, ಶ್ರೀಧರ, ಸುನೀತಾ ರವರಿದ್ದ ತಂಡ ಭದ್ರಾವತಿಯ ತಿಮ್ಲಾಪುರ ಕ್ಯಾಂಪಿನ 31 ವರ್ಷ ವಯಸ್ಸಿನ ಮುರುಳಿ @ ಕರಿಯನನ್ನು ಬಂಧಿಸಿದ್ದಾರೆ.

22.50 ಲಕ್ಷ ಮೌಲ್ಯದ 161 ಗ್ರಾಂ ಬಂಗಾರದ ಆಭರಣ, ಚಿನ್ನದ ಗಟ್ಟಿ ವಶಕ್ಕೆ ಪಡೆದಿದ್ದಾರೆ.

ಎಸ್ ಪಿ ನಿಖಿಲ್ ಬಿ. ತಂಡವನ್ನು ಅಭಿನಂದಿಸಿದ್ದಾರೆ.