*ಫ್ಯೂಚರ್ ಎಂ ಎಲ್ ಎ ಗಣೇಶ್ ಜನ್ಮದಿನಾಚರಣೆ ತೋರಿಸಿದ ಸಿಗ್ನಲ್ ಯಾವುದು?* *ಗಣೇಶ್ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವ ಸಹೋದರ ಬಸವೇಶ್…*
*ಫ್ಯೂಚರ್ ಎಂ ಎಲ್ ಎ ಗಣೇಶ್ ಜನ್ಮದಿನಾಚರಣೆ ತೋರಿಸಿದ ಸಿಗ್ನಲ್ ಯಾವುದು?*
*ಗಣೇಶ್ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವ ಸಹೋದರ ಬಸವೇಶ್…*

ಫ್ಯೂಚರ್ ಎಂ.ಎಲ್.ಎ ಅರ್ಥಾತ್ ಭದ್ರಾವತಿಯ ಭವಿಷ್ಯದ ಶಾಸಕ ಬಿ.ಎಸ್.ಗಣೇಶ್ ಅದ್ಧೂರಿ ಜನ್ಮದಿನಾಚರಣೆ ಸೆ.9ರಂದು ರಾತ್ರಿ ವಿಶೇಷ ಗಮನ ಸೆಳೆಯಿತು.
ಗುರುವಾರ ಬೆಳಿಗ್ಗೆಯಿಂದಲೇ ಭದ್ರಾವತಿ, ಶಿವಮೊಗ್ಗದಲ್ಲಿ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಪೂಜೆ ಪುನಸ್ಕಾರಗಳ ಜೊತೆ, ಸಾಮಾಜಿಕ ಕಾರ್ಯಗಳಲ್ಲೂ ಅಭಿಮಾನಿಗಳು ಪಾಲ್ಗೊಂಡು ಆಚರಿಸಿದರು.
ಯುವ ನಾಯಕ, ಯುವಕರ ಆಶಾಕಿರಣ, ಬಡವರ ಬಂಧು ಎಂದೆಲ್ಲಾ ಕರೆಸಿಕೊಳ್ಳುವ ಬಿ.ಎಸ್.ಗಣೇಶ್ ಭದ್ರಾವತಿಯ ಭವಿಷ್ಯದ ಶಾಸಕರೆಂದೇ ಕರೆಸಿಕೊಳ್ಳುತ್ತಿದ್ದಾರೆ. ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ್ ರವರ ಮಗ ಆಗಿರುವ ಗಣೇಶ್ ರವರನ್ನೇ 2028ರ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸ್ವತಃ ಸಂಗಮೇಶ್ವರ್ ಆಸೆ ಪಟ್ಟು ಪ್ರಯತ್ನಶೀಲರಾಗಿರುವುದು ವಿಶೇಷ. ಇವರ ಜೊತೆ ಸಹೋದರ ಬಿ.ಎಸ್.ಬಸವೇಶ್ ರವರ ರಾಜಕೀಯ ಯುದ್ಧನೀತಿ ಕೂಡ ಸೇರಿಕೊಂಡಿದೆ.
ಒಟ್ಟಾರೆಯಾಗಿ, ಬಿ.ಎಸ್.ಗಣೇಶ್ ಜನ್ಮದಿನದ ಈ ಬಾರಿಯ ಆಚರಣೆ ಬೇರೆಯದೇ ಸಿಗ್ನಲ್ ಗಳನ್ನು ನೀಡುತ್ತಿದ್ದು, ಭವಿಷ್ಯದ ನಾಯಕನನ್ನು ಈಗಲೇ ಕಣ್ಣಿಗೆ ತುಂಬಿಕೊಂಡು ಭದ್ರಾವತಿಯ ಜನ ಸಂಭ್ರಮಿಸುತ್ತಿರುವುದು ವಿಶೇಷ.



