ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ?* *ಸತ್ತಿದ್ದು ನಿಜಾನಾ?*

*ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ?*

*ಸತ್ತಿದ್ದು ನಿಜಾನಾ?*

ಅತ್ಯಾಚಾರ ಆರೋಪ ಹಾಗೂ ಹಲವಾರು ವಿವಾದಗಳಲ್ಲಿ ಸಿಲುಕಿ ದೇಶ ಬಿಟ್ಟು ಪಲಾಯನ ಮಾಡಿ ಕೈಲಾಸ (Kailasa) ಎಂಬ ದೇಶವನ್ನು (country) ನಿರ್ಮಾಣ ಮಾಡಿ ಅಲ್ಲಿ ತನ್ನ ಶಿಷ್ಯರೊಂದಿಗೆ ವಾಸವಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ (Nityananda Swamy) ಬಗ್ಗೆ ಗೊತ್ತೇಯಿದೆ ಅಲ್ವಾ. ಇದೀಗ ಈ ವಿವಾದಿತ ಸ್ವಾಮಿ ಮೃತಪಟ್ಟಿದ್ದಾನೆ (Death) ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ನಿತ್ಯಾನಂದರು ಎರಡು ದಿನಗಳ ಹಿಂದೆ ನಿಧನರಾದರು ಎಂಬ ಸುದ್ದಿಯನ್ನು ಆತನ ಸೋದರಳಿಯ ಸುಂದರೇಶ್ವರನ್‌ ಹೇಳಿಕೊಂಡಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಸಾವಿನ ಸುದ್ದಿಯ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗದ ಕಾರಣ ಜನ ಇದೆಲ್ಲಾ ಏಪ್ರಿಲ್‌ ಫೂಲ್‌ (April Fool) ದಿನದ ಸಲುವಾಗಿ ಮಾಡಿದ ಪ್ರಚಾರದ ಗಿಮಿಕ್‌ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ನಿತ್ಯಾನಂದ ಸ್ವಾಮಿಯ ಸೋದರಳಿಯ ಸ್ವತಃ ತಾನೇ ಸಾವಿನ ಸುದ್ದಿಯ ಬಗ್ಗೆ ಘೋಷಿಸಿದ್ದು, ಸಾವಿನ ವದಂತಿಗೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ನಿತ್ಯಾನಂದ ಸ್ವಾಮಿಯ ಸೋದರಳಿಯ ಸುಂದರೇಶ್ವರನ್ ತನ್ನ ಆಧ್ಯಾತ್ಮಿಕ ಪ್ರವಚನದ ವೀಡಿಯೊದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ನಿತ್ಯಾನಂದ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ವಿವಾದಿತ ಸ್ವಾಮಿ ಸಾವಿನ್ನಪ್ಪಿದ್ದಾನೆಯೋ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ದೊರೆತಿಲ್ಲ. ಆದರೆ ಇಂದು ಏಪ್ರಿಲ್‌ 1 ತಾರೀಕು ಆಗಿರುವುದರಿಂದ ಉದ್ದೇಶಪೂರ್ವಕವಾಗಿ ಸಾವಿನ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಆತನ ಟ್ರಸ್ಟ್‌ಗೆ ಸೇರಿದ ₹4000 ಕೋಟಿ ಮೌಲ್ಯದ ಆಸ್ತಿಗಳನ್ನು ಯಾರು ನಿರ್ವಹಿಸುತ್ತಾರೆ ಎಂಬ ಬಗ್ಗೆ ದೊಡ್ಡ ಪ್ರಶ್ನೆ ಕೂಡಾ ಉದ್ಭವಿಸಿದೆ. ಹೀಗೆ ನಿತ್ಯಾನಂದ ಸ್ವಾಮಿಯ ಸಾವಿನ ವದಂತಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಈ ವದಂತಿಯ ಸತ್ಯಾಸತ್ಯತೆ ತಿಳಿಯಲು ಜನ ಕಾತರದಿಂದ ಕಾಯುತ್ತಿದ್ದಾರೆ.

ಈ ಕುರಿತ ವಿಡಿಯೋವನ್ನು Polimer News ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋ ತುಣುಕಿನಲ್ಲಿ ನಿತ್ಯಾನಂದ ಸ್ವಾಮಿಯ ಸೋದರಳಿಯ ಸುಂದರೇಶ್ವರನ್ ತನ್ನ ಆಧ್ಯಾತ್ಮಿಕ ಪ್ರವಚನದ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಲು ಸ್ವಾಮಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.

ಏಪ್ರಿಲ್‌ 1 ರಂದು ಶೇರ್‌ ಮಾಡಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂದು ಏಪ್ರಿಲ್‌ ಫೂಲ್‌, ಅವರು ನಮ್ಮನ್ನು ಫೂಲ್‌ ಮಾಡ್ತಿರಬಹುದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ನಿಜ ಸುದ್ದಿಯೇʼ ಎಂದು ಕೇಳಿದ್ದಾರೆ.