*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗಿ ಹೆಚ್.ಸಿ.ಯೋಗೇಶ್…* *ಕಾಂಗ್ರೆಸ್ ನಲ್ಲಿ ಮತ್ತೆ ಮರುಕಳಿಸಲಿದೆ ಉತ್ಸಾಹ…*
*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗಿ ಹೆಚ್.ಸಿ.ಯೋಗೇಶ್…*
*ಕಾಂಗ್ರೆಸ್ ನಲ್ಲಿ ಮತ್ತೆ ಮರುಕಳಿಸಲಿದೆ ಉತ್ಸಾಹ…*
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಜಿಲ್ಲಾಧ್ಯಕ್ಷರಾಗಿ ಯುವ ಉತ್ಸಾಹಿ ಹೆಚ್.ಸಿ.ಯೋಗೇಶ್ ಆಯ್ಕೆಯಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಗೆ ಯಾರು ನೂತನ ಸಾರಥಿ? ಎಂಬ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿದ್ದವು. ಎಐಸಿಸಿಯಿಂದ ಶರತ್ ವೀಕ್ಷಕರಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ಓಡಾಡಿ, ನೂತನ ಅಧ್ಯಕ್ಷರು ಯಾರಾಗಬೇಕೆಂದು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಯೋಗೇಶ್ ಕಾರ್ಪೊರೇಟರ್ ಆಗಿಯೂ ಅನುಭವಸ್ಥರು. ರಾಜಕಾರಣದ ಮೂಲ ಕುಟುಂಬದಿಂದಲೇ ಬಂದಿರುವ ಯೋಗೇಶ್ ಸಂಘಟನಾ ಚತುರರು ಹಾಗೂ ಪಕ್ಷದಲ್ಲಿ ಕ್ರಿಯಾಶೀಲವಾಗಿಡಬಲ್ಲ ಕ್ರಿಯಾಶೀಲ ವ್ಯಕ್ತಿತ್ವದವರು.
ನೂತನ ಅಧ್ಯಕ್ಷರಾಗಿರುವ ಹೆಚ್.ಸಿ.ಯೋಗೇಶ್ ರವರಿಗೆ ಅಭಿನಂದನೆಗಳು…


