ಜ.12ಕ್ಕೆ ಪತ್ರಿಕಾ ವಿತರಕರ ಒಕ್ಕೂಟದ 2026ರ ಕ್ಯಾಲೆಂಡರ್ ಬಿಡುಗಡೆ; ಜಿಲ್ಲಾಧ್ಯಕ್ಷ ಎನ್.ಮಾಲತೇಶ್

ಜ.12ಕ್ಕೆ ಪತ್ರಿಕಾ ವಿತರಕರ ಒಕ್ಕೂಟದ 2026ರ ಕ್ಯಾಲೆಂಡರ್ ಬಿಡುಗಡೆ; ಜಿಲ್ಲಾಧ್ಯಕ್ಷ ಎನ್.ಮಾಲತೇಶ್

ಶಿವಮೊಗ್ಗ : ಜ.12ಕ್ಕೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರ ಪ್ಯಾರಡೈಸ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಪತ್ರಿಕಾ ವಿತರಕರ ಒಕ್ಕೂಟದ 2026ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಮಾಲತೇಶ್ ಪ್ರಕಟಣೆಯಲ್ಲಿ ತಿಳಿಸಿದೆ.

ವಿತರಕರ ಕ್ಯಾಲೆಂಡರ್ ಕರ್ನಾಟಕ ಕಾರ್ಯನಿರಂತ ಪತ್ರಕರ್ತರ ಸಂಘ ಜಿಲ್ಲಾ ಅಧ್ಯಕ್ಷರಾದ ವೈದ್ಯನಾಥ್ ಹಾಗೂ ಪದಾಧಿಕಾರಿಗಳು ಬಿಡುಗಡೆಗೊಳಿಸಲಿದ್ದಾರೆಂದರು.

ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಹೆಚ್.ಯು.ವೈದ್ಯನಾಥ್ (ವೈದ್ಯ,) ಪ್ರಧಾನ ಕಾರ್ಯದರ್ಶಿ ಆರ್.ಎಸ್.ಹಾಲಸ್ವಾಮಿ ರಾಜ್ಯ ಸಮಿತಿ ಸದಸ್ಯರಾದ ಕೆ.ವಿ.ಶಿವಕುಮಾರ್, ರಾಜ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎನ್.ರವಿಕುಮಾರ್ (ಟೆಲೆಕ್ಸ್) ರಾಷ್ಟ್ರೀಯ ಮಂಡಳಿ ಸದಸ್ಯರು ಭಂಡಿಗಡಿ ಆರ್.ನಂಜುಂಡಪ್ಪ, ಹಿರಿಯ ಪತ್ರಕರ್ತರಾದ ಪಾವನ ಕನ್ನಡ ದಿನಪತ್ರಿಕೆ ಸಂಪಾದಕರು ತ್ಯಾಗರಾಜ್‌ಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು
ಮುಖ್ಯ ಅತಿಥಿಗಳಾಗಿ ಕರವೇ ಜನಮನ ರಾಜ್ಯ ಸಂಘಟನೆ ರಾಜ್ಯ ಅಧ್ಯಕ್ಷರಾದ ಜನಾರ್ಧನ್ ಸಾಲಿಯನ್ ಹಾಗೂ ಪದಾಧಿಕಾರಿಗಳು ಮಧುರ ಪ್ಯಾರಡೈಸ್ ಗೋಪಿನಾಥ್, ಆ.ನಾ.ವಿಜೇಂದ್ರ, ಕಾಂಗ್ರೆಸ್ ಮುಖಂಡ ಕೆ,.ದೇವೇಂದ್ರಪ್ಪ ಇನ್ನು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಗೌರವ ಅಧ್ಯಕ್ಷರು ಶಿಕಾರಿಪುರ ಹುಲಿಗಿ ಕೃಷ್ಣ, ಉಪಾಧ್ಯಕ್ಷರು ರಾಮು ಜಿ, ತೀರ್ಥಹಳ್ಳಿ ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹಮದ್( ನಜೀರ್) ಉಪಾಧ್ಯಕ್ಷರು ವಿನಯ್ ಕುಮಾರ್ ಎಸ್. ವಾಲಿ ತೊಗರ್ಸಿ, ಸಂಘಟನಾ ಕಾರ್ಯದರ್ಶಿ ಶಿಕಾರಿಪುರ ಗಜೇಂದ್ರ, ಭದ್ರಾವತಿ ಪರಶುರಾಮ್ ರಾವ್, ಭದ್ರಾವತಿ ತಾಲೂಕು ಅಧ್ಯಕ್ಷರು ಜಿ,ಐ, ಮಲ್ಲಿಕಾರ್ಜುನ ನಿರ್ದೇಶಕರು ಹರ್ಷ ಎನ್, ಆರ್, ಪಾರ್ತಿಬನ್. ಪಿ, ರಾಜವರ್ಮ ಜೈನ್, ಶಿರಾಳಕೊಪ್ಪ ರಾಘವೇಂದ್ರ ಉಪಸ್ಥಿತರಿರುವರು ಎಂದರು.