ಕವಿಸಾಲು
01
ಭದ್ರಾವತಿಯಲ್ಲಿ ಪೊಲೀಸ್ ಗುಂಡಿನ ಸದ್ದು;* *ಗುಂಡ @ ರವಿ ಕಾಲು ಸೀಳಿತು ಖಾಕಿ ಗುಂಡು!* *ಏನಿದು ಸ್ಟೋರಿ?*
*ಭದ್ರಾವತಿಯಲ್ಲಿ ಪೊಲೀಸ್ ಗುಂಡಿನ ಸದ್ದು;*
*ಗುಂಡ @ ರವಿ ಕಾಲು ಸೀಳಿತು ಖಾಕಿ ಗುಂಡು!*
*ಏನಿದು ಸ್ಟೋರಿ?*
ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ಗುಂಡ @ ರವಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಗಾಯಗೊಂಡ ಆರೋಪಿ ಗುಂಡ @ ರವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆಯ ಪಿಎಸ್ಐ ಕೃಷ್ಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ಠಾಣೆಯ ಸಿಬ್ಬಂದಿ ಆದರ್ಶನ ಮೇಲೆ ಆರೋಪಿ ಗುಂಡ @ ರವಿ ಹಲ್ಲೆ ಮಾಡಲು ಯತ್ನಿಸಿದ. ಆಗ ಆದರ್ಶನನ್ನು ರಕ್ಷಿಸಲು ಆರೋಪಿ ರವಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಶರಣಾಗಲಿಲ್ಲ. ಕಾಲಿಗೆ ಗುಂಡು ಹಾರಿಸುವುದು ಅನಿವಾರ್ಯವಾಯಿತು ಎಂದು ಎಸ್ ಪಿ ಹೇಳಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.