ಕವಿಸಾಲು
01
ಭದ್ರಾವತಿಯಲ್ಲಿ ಪೊಲೀಸ್ ಗುಂಡಿನ ಸದ್ದು;* *ರೌಡಿಶೀಟರ್* *ಗುಂಡ @ ರವಿ ಕಾಲು ಸೀಳಿತು ಖಾಕಿ ಗುಂಡು!* *4 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ* *ಏನಿದು ಸ್ಟೋರಿ?*
*ಭದ್ರಾವತಿಯಲ್ಲಿ ಪೊಲೀಸ್ ಗುಂಡಿನ ಸದ್ದು;*
*ರೌಡಿಶೀಟರ್*
*ಗುಂಡ @ ರವಿ ಕಾಲು ಸೀಳಿತು ಖಾಕಿ ಗುಂಡು!*
*4 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ*
ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ಗುಂಡ @ ರವಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಗಾಯಗೊಂಡ ಆರೋಪಿ ಗುಂಡ @ ರವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆಯ ಪಿಎಸ್ಐ ಕೃಷ್ಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ಠಾಣೆಯ ಸಿಬ್ಬಂದಿ ಆದರ್ಶನ ಮೇಲೆ ಆರೋಪಿ ಗುಂಡ @ ರವಿ ಹಲ್ಲೆ ಮಾಡಲು ಯತ್ನಿಸಿದ. ಆಗ ಆದರ್ಶನನ್ನು ರಕ್ಷಿಸಲು ಆರೋಪಿ ರವಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಶರಣಾಗಲಿಲ್ಲ. ಕಾಲಿಗೆ ಗುಂಡು ಹಾರಿಸುವುದು ಅನಿವಾರ್ಯವಾಯಿತು. ಈತ ರೌಡಿಶೀಟರ್ ಆಗಿದ್ದು, ನಾಲ್ಕು ಪ್ರಕರಣಗಳು ಈತನ ಮೇಲಿವೆ ಎಂದು ಎಸ್ ಪಿ ಹೇಳಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.