*ಮಹಿಳೆಯ ಖಾಸಗಿ ವೀಡಿಯೋ ಫೇಸ್ ಬುಕ್ ಗೆ ಅಪ್ಲೋಡ್ ಮಾಡಿದ್ದ ಮಹಿಳೆ ಮತ್ತು ಪುರುಷನ ಬಂಧನ*

*ಮಹಿಳೆಯ ಖಾಸಗಿ ವೀಡಿಯೋ ಫೇಸ್ ಬುಕ್ ಗೆ ಅಪ್ಲೋಡ್ ಮಾಡಿದ್ದ ಮಹಿಳೆ ಮತ್ತು ಪುರುಷನ ಬಂಧನ*

ಮತ್ತೊಬ್ಬರ ಖಾಸಗಿ ವೀಡಿಯೋವೊಂದನ್ನು ಫೇಸ್ಬುಕ್ ನಕಲಿ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ಓರ್ವ ಮಹಿಳೆಯೂ ಸೇರಿದಂತೆ ಇಬ್ಬರನ್ನು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.

ಹೊಸನಗರದ ಬ್ಯೂಟೀಷಿಯನ್ ಸೀಮಾ ಜೂಲಿಯನ್ ಸೆರಾವೋ ಕೋಂ ಅರುಣ್ ಕುಮಾರ್ ಕರ್ವಾಲೋ(45) ಮತ್ತು ಬೆಂಗಳೂರು ದಾಸನಪುರದ ನಿವಾಸಿ ಸಿ.ಜೆ.ನಿಶಾಂತ್ ಬಿನ್ ಹೆಚ್.ವಿ.ಜಯಪ್ರಕಾಶ್(29) ಬಂಧಿತರು.

ಇವರ ವಿರುದ್ಧ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ 20/2026 ರಂತೆ ಕಲಂ 67,67(A)IT ACT ಪ್ರಕಾರ ಪ್ರಕರಣ ದಾಖಲಾಗಿತ್ತು.

ಸೈಬರ್ ಕ್ರೈಂ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಿದ್ದ ಎಸ್ ಪಿ ಬಿ.ನಿಖಿಲ್ ಈ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.