ಫೆ.22 ರ ನಾಳೆ ಬೆಳಿಗ್ಗೆ ಕಾಂಗ್ರೆಸ್ ನಿಂದ ಸಂವಿಧಾನ ರಕ್ಷಕ್ ಅಭಿಯಾನ; ಆರ್.ಪ್ರಸನ್ನ ಕುಮಾರ್*कांग्रेस कल सुबह 22 फरवरी को ‘समानता रक्षक’ अभियान शुरू करेगी; आर. प्रसन्ना कुमार* Congress to launch Samvidhan Rakshak Abhiyan tomorrow morning on Feb. 22; R. Prasanna Kumar*

*ಫೆ.22 ರ ನಾಳೆ ಬೆಳಿಗ್ಗೆ ಕಾಂಗ್ರೆಸ್ ನಿಂದ ಸಂವಿಧಾನ ರಕ್ಷಕ್ ಅಭಿಯಾನ; ಆರ್.ಪ್ರಸನ್ನ ಕುಮಾರ್*

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ, ಪರಿಶಿಷ್ಟ ಜಾತಿ ವಿಭಾಗ, ಪರಿಶಿಷ್ಟ ಪಂಗಡ ವಿಭಾಗ, ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಫೆ ೨೨ರಂದು ಬೆಳಗ್ಗೆ ೧೧ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ರಕ್ಷಕ್ ಅಭಿಯಾನ
ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದು ಯಶಸ್ವಿಯಾಗಿದ್ದು, ಇದರ ನಂತರ ಈಗ ಜಿಲ್ಲಾ ಮಟ್ಟದಲ್ಲಿ ಸಂವಿಧಾನ ರಕ್ಷಕ್ ಅಭಿಯಾನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕೇಂದ್ರ ಗೃಹಮಂತ್ರಿ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನವನ್ನು ಮತ್ತು ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನ ಮಾಡತೊಡಗಿದ್ದಾರೆ. ಸಂವಿಧಾನದ ತಿದ್ದುಪಡಿ ಮಾಡಲು  ಹೊರಟಿದ್ದಾರೆ. ಇದರ ರಕ್ಷಣೆ ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರ ನಿರ್ದೇಶನದಂತೆ ಶಿವಮೊಗ್ಗದಲ್ಲಿಯೂ ಕೂಡ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಫೆ. ೨೨ರಂದು ಬೆಳಗ್ಗೆ ೯.೩೦ಕ್ಕೆ ಗಾಂಧಿ ಪಾರ್ಕ್‌ನಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಮೆರವಣಿಗೆ ಅಲ್ಲಿಂದ ಮಹಾನಗರ ಪಾಲಿಕೆಗೆ ತೆರಳಿ ಅಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಶಿವಪ್ಪನಾಯಕ ವೃತ್ತದ ಮೂಲಕ ಎಎ ಸರ್ಕಲ್, ನೆಹರೂ ರಸ್ತೆ, ಶೀನಪ್ಪ ಶೆಟ್ಟಿ ವೃತ್ತ ನಂತರ ಅಂಬೇಡ್ಕರ್ ಭವನದವರೆಗೂ ಸಾಗುತ್ತದೆ. ಅಲ್ಲಿ ವೇದಿಕೆ ಕಾರ್ಯಕ್ರಮ ೧೧ ಗಂಟೆಗೆ ನಡೆಯಲಿದೆ ಎಂದರು.

ಈ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಕೆ. ಸಂಗಮೇಶ್, ಗೋಪಾಲಕೃಷ್ಣ ಬೇಳೂರು, ಬಲ್ಕೀಶ್ ಬಾನು ಹಾಗೂ ವಿವಿಧ ಅಭಿವೃದ್ಧಿ ನಿಗಮಗಳ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ, ಎಸ್. ರವಿಕುಮಾರ್, ಜಿ. ಪಲ್ಲವಿ, ಹೆಚ್.ಎಸ್. ಸುಂದರೇಶ್, ಸಿ.ಎಸ್. ಚಂದ್ರಭೂಪಾಲ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭಾಗವಹಿಸುವರು ಎಂದರು.

ಹಾಗೆಯೇ, ಕಾಂಗ್ರೆಸ್ ಮುಖಂಡರಾದ ಡಾ. ಶ್ರೀನಿವಾಸ ಕರಿಯಣ್ಣ, ಹೆಚ್.ಸಿ ಯೋಗೀಶ್, ಗೋಣಿ ಮಾಲತೇಶ್, ನಾಗರಾಜಗೌಡ ಸೇರಿದಂತೆ ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ವಿಭಾಗದ ಮುಖಂಡರು, ಕಾರ್ಯಕರ್ತರು ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಪತ್ರಕರ್ತ ಹಾಗೂ ನಿವೃತ್ತ ಉಪನ್ಯಾಸಕ ಡಾ.ಕೆ.ಜಿ. ವೆಂಕಟೇಶ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಶಿವಣ್ಣ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮುಜಾಮಿಲ್ ಪಾಷಾ, ಎಸ್ಟಿ ಘಟಕದ ಅಧ್ಯಕ್ಷ ಕೆ.ಆರ್. ಶ್ರೀಧರ್, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಮುಖಂಡರಾದ ಕಲಗೋಡು ರತ್ನಾಕರ್, ಡಾ. ಶ್ರೀನಿವಾಸ ಕರಿಯಣ್ಣ, ಶರತ್ ಮರಿಯಪ್ಪ, ಎಸ್.ಟಿ. ಹಾಲಪ್ಪ, ಜಿ.ಡಿ. ಮಂಜುನಾಥ್, ಶಿ.ಜು. ಪಾಶಾ, ಉಮಾಪತಿ, ಗಣಪತಿ, ರಮೇಶ್, ಇದ್ದರು.
*****************

*कांग्रेस कल सुबह 22 फरवरी को ‘समानता रक्षक’ अभियान शुरू करेगी; आर. प्रसन्ना कुमार*

शिवमोग्गा: जिला कांग्रेस कमेटी, कांग्रेस पिछड़ा वर्ग प्रभाग, अनुसूचित जाति प्रभाग, अनुसूचित जनजाति प्रभाग, अल्पसंख्यक प्रभाग द्वारा 22 फरवरी को सुबह 11 बजे अंबेडकर भवन में संविधान रक्षक अभियान का आयोजन किया जाएगा।
जिला कांग्रेस कमेटी के अध्यक्ष आर. ने बताया कि इसका आयोजन किया गया। प्रसन्ना कुमार ने कहा।

एक संवाददाता सम्मेलन में बोलते हुए उन्होंने कहा कि हाल ही में बेलगाम अधिवेशन के दौरान जय बापू, जय भीम, जय संविधान नामक कार्यक्रम का आयोजन किया गया था। उन्होंने कहा कि यह सफल रहा और इसके बाद अब जिला स्तर पर समिति रक्षक अभियान कार्यक्रम का आयोजन किया गया है।

केंद्रीय गृह मंत्री समेत भाजपा नेताओं ने संविधान और बी.आर. वे अंबेडकर का अपमान करने लगे हैं। वे संविधान में संशोधन करने जा रहे हैं। आज इसका संरक्षण अपरिहार्य एवं आवश्यक है। उन्होंने कहा कि राष्ट्रीय एवं राज्य के नेताओं के निर्देशानुसार शिवमोग्गा में भी यह कार्यक्रम आयोजित किया गया है।

फ़रवरी। 22 तारीख को प्रातः 9.30 बजे गांधी पार्क स्थित गांधी जी की प्रतिमा पर माल्यार्पण के साथ जुलूस निकाला जाएगा। इसके बाद जुलूस नगर निगम की ओर बढ़ेगा, जहां अंबेडकर प्रतिमा पर माल्यार्पण किया जाएगा, फिर शिवप्पनायक सर्किल, एए सर्किल, नेहरू रोड, शिनप्पा शेट्टी सर्किल से होते हुए अंबेडकर भवन तक जाएगा। उन्होंने बताया कि वहां सुबह 11 बजे मंचीय कार्यक्रम होगा।

इस कार्यक्रम का उद्घाटन जिला प्रभारी मंत्री मधु बंगरप्पा करेंगे। विधायक बी.के. संगमेश, गोपालकृष्ण बेलूर, बालकिश बानू और विभिन्न विकास निगमों के अध्यक्ष आर.एम. मंजूनाथ गौड़ा, एस. रविकुमार, जी. पल्लवी, एच.एस. सुन्दरेश, सी.एस. उन्होंने बताया कि इसमें भाजपा के राष्ट्रीय अध्यक्ष जेपी नड्डा, केंद्रीय मंत्री वी.पी. चंद्रभूपाल और पूर्व मंत्री किम्माने रत्नाकर भाग लेंगे।

इसी प्रकार, कांग्रेस नेता डॉ. उन्होंने कहा कि जुलूस और सभा कार्यक्रम में श्रीनिवास करियान्ना, एचसी योगीश, गोनी मालतेश, नागराज गौड़ा समेत पिछड़ा वर्ग, अनुसूचित जाति, अनुसूचित जनजाति और अल्पसंख्यक वर्ग के नेता और कार्यकर्ता भाग लेंगे।
पत्रकार एवं सेवानिवृत्त व्याख्याता डॉ. के.जी. वेंकटेश एक विशेष व्याख्यान देंगे।

कांग्रेस एससी इकाई के जिला अध्यक्ष शिवन्ना, अल्पसंख्यक इकाई के जिला अध्यक्ष मुजामिल पाशा, एसटी इकाई के अध्यक्ष के.आर. श्रीधर, ओबीसी इकाई के जिला अध्यक्ष इक्केरी रमेश, भोवी विकास निगम के अध्यक्ष एस. रविकुमार, नेता कलगोडु रत्नाकर, डॉ. श्रीनिवास करिअन्ना, शरत मरियप्पा, एस.टी. हलप्पा, जी.डी. मंजूनाथ, एस.जे. पाशा, उमापति, गणपति और रमेश वहां थे।
*****************

*Congress to launch Samvidhan Rakshak Abhiyan tomorrow morning on Feb. 22; R. Prasanna Kumar*

Shivamogga: The District Congress Committee, Congress Backward Classes Division, Scheduled Caste Division, Scheduled Tribe Division, Minorities Division have organized a Samvidhan Rakshak Abhiyan on Feb. 22 at 11 am at Ambedkar Bhavan, said District Congress Committee President R. Prasanna Kumar.

Speaking at a press conference, he said that recently a program called Jai Bapu, Jai Bhim, Jai Sammanthipyan was organized in the Belgaum session. It was successful, and after this, a Sammanthip Rakshak Abhiyan program has been organized at the district level.

BJP leaders, including the Union Home Minister, have started insulting the Constitution and B.R. Ambedkar. They are going to amend the Constitution. Its protection is inevitable and necessary today. He said that this program has been organized in Shivamogga as well as in the direction of national and state leaders.

Feb. A procession will be taken out on the 22nd at 9.30 am by garlanding the statue of Gandhiji at Gandhi Park. From there, the procession will go to the Municipal Corporation, where it will garland the statue of Ambedkar, then proceed through Shivappanayaka Circle, AA Circle, Nehru Road, Shinappa Shetty Circle and then to Ambedkar Bhavan. The stage program will be held there at 11 am, he said.

The program will be inaugurated by District In-charge Minister Madhu Bangarappa. MLAs B.K. Sangamesh, Gopalakrishna Belur, Balkish Banu and chairmen of various development corporations R.M. Manjunatha Gowda, S. Ravikumar, G. Pallavi, H.S. Sundaresh, C.S. Chandrabhupal, former minister Kimmane Ratnakar will participate in the program, he said.

Similarly, Congress leaders Dr. Srinivasa Kariyanna, H.C Yogish, Goni Malatesh, Nagarajagowda and other backward, Scheduled Caste, Scheduled Tribe and minority leaders and activists will participate in the procession and meeting program.
Journalist and retired lecturer Dr. K.G. Venkatesh will deliver a special lecture.

Congress SC unit district president Shivanna, Minority unit district president Muzamil Pasha, ST unit president K.R. Sridhar, OBC unit district president Ikkeri Ramesh, Bhovi Development Corporation president S. Ravikumar, leaders Kalagodu Ratnakar, Dr. Srinivasa Kariyanna, Sharath Mariyappa, S.T. Halappa, G.D. Manjunath, Shi.Ju. Pasha, Umapati, Ganapati, Ramesh, were present at the press conference.
*****************