ಡಿ.ಸಿ.ಮಾಯಾಣ್ಣ; ನಾ ಕಂಡ ನಿಜ ಕಾರ್ಮಿಕ ನಾಯಕ- ವಕೀಲ, ಹೋರಾಟಗಾರ ಕೆ.ಪಿ.ಶ್ರೀಪಾಲ

ಡಿ.ಸಿ.ಮಾಯಾಣ್ಣ; ನಾ ಕಂಡ ನಿಜ ಕಾರ್ಮಿಕ ನಾಯಕ- ವಕೀಲ, ಹೋರಾಟಗಾರ ಕೆ.ಪಿ.ಶ್ರೀಪಾಲ

ಕಳೆದ 28 ವರ್ಷಗಳಿಂದ ಮಾಯಾಣ್ಣ ಪರಿಚಿತರಾಗಿದ್ದರು ಯಾವುದೇ ಹೋರಾಟ, ಯಾವುದೇ ಮೆರವಣಿಗೆ ಇದ್ದರು ಮಾಯಾಣ್ಣ ಅದೆ ಕೆಂಪು ಚೀಲ ಬಗಲಿಗೆ ಸಿಗಿಸಿಕೊಂಡು ಆ ಕನ್ಮಡಕದ ನಡುವೆ ಬಿರುವ ಅವರ ಮುಗುಳು ನಗುವಿನ ಆ ಕಣ್ಣುಗಳಲ್ಲಿ ಪ್ರೀತಿಯೇ ತುಂಬಿರುತ್ತಿತ್ತು,

ಒಂದು ದಿನವು ಮಾಯಾಣ್ಣ ಸಿಟ್ಟಿನಿಂದ ಮಾತನಾಡಿದ್ದು ನಾನು ನೋಡಲಿಲ್ಲ.
ಭದ್ರಾವತಿಯಲ್ಲಿ ನಾವು ಭಾಗವಹಿಸುವ ಯಾವುದೆ ಹೋರಾಟದ ಸಭೆಗಳಿದ್ದರು ಮಾಯಾಣ್ಣರವರದ್ದೆ ಅಧ್ಯಕ್ಷತೆ, ಮಾತನಾಡುತ್ತ ಮಾತನಾಡುತ್ತ ಕೆಲವೊಮ್ಮೆ ಸುದೀರ್ಘವಾಗಿಯೇ ಮಾತನಾಡುತ್ತಿದ್ದ ಮಾಯಾಣ್ಣರವರು ಮಾತು ಮತ್ತು ಕೃತಿ ಎರಡರಲ್ಲೂ ಒಂದೇ ಆಗಿದ್ದರು.

ಕಾರ್ಮಿಕರ ಪ್ರಕರಣಗಳು ಹಾಸನ ಡಿವಿಜನ್ ನಲ್ಲಿ ಆದೇಶವಾಗಿ ನಂತರ ಜಿಲ್ಲಾ ಪ್ರದಾನ ನ್ಯಾಯಾಲಯಕ್ಕೆ ಬರುತ್ತಿದ್ದವು ಈ ಸಂದರ್ಭದಲ್ಲಿ ಕಾರ್ಮಿಕರನ್ನು ಕರೆತರುತ್ರಿದ್ದ ಮಾಯಾಣ್ಣ ಅತ್ಯಂತ ವಿನಂಬ್ರತೆಯಿಂದ ” ನೋಡಿ ಇವರ ಪ್ರಕರಣ ನಡೆಸಿಕೋಡಿ ಜಡ್ಜಮೆಂಟ್ ಆದ ಮೇಲೆ ಪೀ ಕೊಡುತ್ತಾರೆ” ಎಂದು ಕೇಳಿಕೊಳ್ಳುತ್ತಿದ್ದರು, ನಮಗಿಂತಲು ವಯಸ್ಸು ಅನುಭವ ಎಲ್ಲದರಲ್ಲು ಹಿರಿಯರು ನಮ್ಮ ಮುಂದೆ ಆ ರೀತಿ ಕೇಳುವುದು ನಮಗೆ ಮುಜುಗರವಾಗಿ ಮಾಯಾಣ್ಣ ನೀವು ಹಾಗೆಲ್ಲ ರಿಕವೆಸ್ಟ್ ಮಾಡಬಾರದು ನಮಗೆ ಆರ್ಡರ್ ಮಾಡಿ ನೀವು ಹಿರಿಯರು ಎಂದರೆ ಒಮ್ಮೆ ನಗುತ್ತಿದ್ದರು. ಹಲವಾರು ಕಾರ್ಮಿಕ ಪ್ರಕರಣಗಳನ್ನು ನನ್ನ ಬಳಿ ತಂದಿದ್ದರು.

ಸಾಗರ ತಾಲ್ಲೂಕಿನ ಹಳ್ಳಿಯೊಂದರ ಅಂಗವಾಡಿ ಅಡಿಗೆ ಸಹಾಯಕಿಗೆ ಊರಿನ ಪಾಟೆಲನ ಕುಮ್ಮಕ್ಕಿನಿಂದ ಕೆಲಸ ಕಿತ್ತುಹಾಕಲಾಗಿತ್ತು ಆ ಪ್ರಕರಣ ಹಾಸನ ಡಿವಿಜನ್ ನಿಂದ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು, ಅಂಗನವಾಡಿ ಸಹಾಯಕಿಯಾದ ಆ ತಾಯಿಯನ್ನು ಕರೆತಂದ ಮಾಯಾಣ್ಣ ಪ್ರತಿ ಹಿಯರಿಂಗ್ ಡೆಟ್ ಗು ಪೋನ್ ಮಾಡುತ್ತಿದ್ದರು, ಸುಧೀರ್ಘ ವಾಗಿ ನಡೆಯಿತು, ಈ ನಡುವೆ ಅರ್ಜಿದಾರ ತಾಯಿಗೆ ಕ್ಯಾನ್ಸರ್ ಬಂತು ಆ ತಾಯಿ ಪೋನ್ ಮಾಡಿದಾಗ ನಾನು ಬದುಕಿರುವಾಗಲೆ ನನಗೆ ಏನಾದರು ಮಾಡಿ ಬೇಗ ಹಣ ಕೊಡಿಸಿ ಎಂದು ಕೇಳುತ್ತಿದ್ದರು ಆದರೆ ಈ ಪ್ರಕರಣದಲ್ಲಿ ಆ ತಾಯಿ ಪರವಾಗಿ ಆದೇಶವಾಗಲಿಲ್ಲ ಅನಾರೋಗ್ಯದಲ್ಲಿದ್ದ ಆ ತಾಯಿಗೆ ಪ್ರಕರಣ ಅನಾನುಕೂಲವಾದ ವಿಷಯ ತಿಳಿಸದೆ ನಾವೇ ಸ್ವಲ್ಪ ಹಣವನ್ನು ನೀಡಿ ಉಳಿದ ಹಣ ಬರುವುದು ತಡವಾಗುತ್ತೆ ಅಂತ ಅವರ ಮಗನ ಮೂಲಕ ಹೇಳಿಸಿದ್ದೇವು,

ಈ ತರದ ಅಸಾಯಕರ ಪರವಾಗಿ ಬರುತ್ತಿದ್ದ ಮಾಯಾಣ್ಣರವರ ಕಾಳಜಿ ಮತ್ತು ಪ್ರೀತಿ ಉಳಿದ ನಾಯಕರುಗಳಿಗೆ ಮಾದರಿಯಾದದ್ದು.
ಮಾಯಾಣ್ಣರಂತಹ ನೈಜ ಕಾಳಜಿಯ ಹೋರಾಟಗಾರ,ಕಾರ್ಮಿಕ ನಾಯಕರು ಅತಿ ವಿರಳ, 88 ವರ್ಷ ತುಂಬು ಜೀವನ ನಡೆಸಿದ ಮಾಯಾಣ್ಣರವರು ಬದುಕಿನುದ್ದಕ್ಕು ಕಮ್ಯುನಿಸ್ಟ್ ಸಿದ್ದಾಂತವನ್ನು ಚಾಚು ತಪ್ಪದೆ ಪಾಲಿಸಿದ ಮಾಯಾಣ್ಣರವರು ಕಳೆದ ಕೆಲವುದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಈ ದಿನ ಬೆಳಿಗ್ಗೆ ನಮ್ಮನ್ನು ಅಗಲಿದ್ದಾರೆ, ಅವರಿಗೆ ಭಾವಪೂರ್ಣ ನಮನಗಳೊಂದಿಗೆ ವಂದನೆಗಳು…