ಭದ್ರಾವತಿ ರಿಪಬ್ಲಿಕ್- ಜಿಲ್ಲಾಮಂತ್ರಿಗಳು ಈಗ ಏನಂತಾರೆ? ಭದ್ರಾವತಿ ಸೇಫ್ ಇಲ್ಲ- ಶಾಸಕ ಸಂಗಮೇಶ್ ಕೂಡಲೇ ರಾಜಿನಾಮೆ ನೀಡಲಿ ; ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ಭದ್ರಾವತಿಯ ನಾಲ್ಕು ಮಾಫಿಯಾಗಳ ವಿರುದ್ಧ ಹಾಗೂ ಗಣಿ ಮಹಿಳಾ ಅಧಿಕಾರಿ ಮೇಲೆ ದೌರ್ಜನ್ಯ ವಿರೋಧಿಸಿ ಫೆ.14ರಂದು ರಾಜ್ಯ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ; ಶಾರದಾ ಅಪ್ಪಾಜಿ

ಭದ್ರಾವತಿ ರಿಪಬ್ಲಿಕ್- ಜಿಲ್ಲಾಮಂತ್ರಿಗಳು ಈಗ ಏನಂತಾರೆ?
ಭದ್ರಾವತಿ ಸೇಫ್ ಇಲ್ಲ- ಶಾಸಕ ಸಂಗಮೇಶ್ ಕೂಡಲೇ ರಾಜಿನಾಮೆ ನೀಡಲಿ ; ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್

ಭದ್ರಾವತಿಯ ನಾಲ್ಕು ಮಾಫಿಯಾಗಳ ವಿರುದ್ಧ ಹಾಗೂ ಗಣಿ ಮಹಿಳಾ ಅಧಿಕಾರಿ ಮೇಲೆ ದೌರ್ಜನ್ಯ ವಿರೋಧಿಸಿ ಫೆ.14ರಂದು ರಾಜ್ಯ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ; ಶಾರದಾ ಅಪ್ಪಾಜಿ

ಕಡಿದಾಳ್ ಗೋಪಾಲ್, ಅಧ್ಯಕ್ಷರು, ಜಿಲ್ಲಾ ಜೆಡಿಎಸ್

ಭದ್ರಾವತಿ ಘಟನೆ ಇಡೀ ತಲೆತಗ್ಗಿಸುವ ಘಟನೆ. ಮಹಿಳಾ ಅಧಿಕಾರಿಗೆ ಶಾಸಕರ ಮಗನ ವಿರುದ್ಧ ಶುಕ್ರವಾರ ಬೆಳಿಗ್ಗೆ ಭದ್ರಾವತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ‌ ಸಂಖ್ಯೆಯಲ್ಲಿ ಬನ್ನಿ.

ಕೆ.ಬಿ.ಪ್ರಸನ್ನ ಕುಮಾರ್,ಮಾಜಿ ಶಾಸಕರು,

ಗಣಿ ಅಧಿಕಾರಿ ಜ್ಯೊತಿ ಘಟನೆ ಸಮಾಜ ತಲೆತಗ್ಗಿಸುವಂಥದ್ದು. ರಿಪಬ್ಲಿಕ್ ದಿನ ಭದ್ರಾವತಿ ರಿಪಬ್ಲಿಕ್ ಬಗ್ಗೆ ಜಿಲ್ಲಾಮಂತ್ರಿಗಳು ಸ್ಪಷ್ಟನೆ ನೀಡಿದ್ದರು. ಭದ್ರಾವತಿ ರಿಪಬ್ಲಿಕ್ ಆಗೋಕೆ ಬಿಡಲ್ಲ ಎಂದಿದ್ರು. ಇವರು ಬಿಡಲ್ಲ ಅಂದಂಗೆ ಅಲ್ಲಿ ಜಾಸ್ತಿ ಆಗ್ತಿದೆ. ಬಹಳಷ್ಟು ಅಧಿಕಾರಿಗಳು ನೋವಲ್ಲಿದಾರೆ.
ಲಗ್ಗೇಜ್ ರೆಡಿ ಮಾಡ್ಕೋ ಅನ್ನೋದು ಶಾಸಕರ ಮಕ್ಕಳು ಮೊದಲು ಹೇಳ್ತಾರೆ. ಧೈರ್ಯದ ವಾತಾವರಣ ಇಲ್ಲ ಅಲ್ಲಿ ಹಾಗಾಗಿ, ದೂರಿನಲ್ಲಿ ವಿವರವಿಲ್ಲ. ಟೈಪಾಗಿ ಬಂದ ಪತ್ರಕ್ಕೆ ಅಧಿಕಾರಿ ಸಹಿ ಹಾಕಿದ್ದಾರಾ? ಅನುಮಾನ ಇದೆ.
ಜೆಡಿಎಸ್ ಇದನ್ನು ಉಗ್ರವಾಗಿ ಖಂಡಿಸ್ತೇನೆ. ನೋಡ್ತೀನಿ ಅಂತಾರೆ. ಬೆಳಿಗ್ಗೇನೇ ಪ್ಯಾಕಪ್ ಆಗುತ್ತೆ. ಅಧಿಕಾರಿಗಳಿಗೆ ಶಕ್ತಿಕೊಡೋರು ಯಾರು? ಜಿಲ್ಲಾಮಂತ್ರಿಗಳು ನಿಷ್ಕ್ರಿಯಗೊಳಿಸ್ತೇನೆ ಅಂದಿದ್ದರು.
ಶುಕ್ರವಾರ ರಾಜ್ಯ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ, ಅಜಿತ್ ಅಪ್ಪಾಜಿಗೌಡರೂ ಸೇರಿದಂತೆ ಬಹಳ ಜನ ನಾಯಕರು ಭಾಗವಹಿಸಲಿದ್ದಾರೆ.
ಬಿಜೆಪಿ ಜೆಡಿಎಸ್ ಪಿತೂರಿ ಅಂತ ಶಾಸಕರು ಹೇಳಿಕೆ ನೀಡುತ್ತಿದ್ದಾರೆ. ನಿಜವಾದ ತನಿಖೆ ಆಗಲೇಬೇಕು. ಶಾಸಕ ಸಂಗಮೇಶ್ ಹೊಣೆಹೊತ್ತು ರಾಜಿನಾಮೆ ನೀಡಬೇಕು. ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕು. ತನಿಖೆ ಮಾಡಬೇಕು. ದೂರಿಲ್ಲದೆಯೂ ಇಲಾಖೆ ದೂರು ದಾಖಲಿಸಿಕೊಂಡು ಶಿಕ್ಷೆ ಕೊಡಿಸಿದೆ.
ಶಾಸಕ ಸಂಗಮೇಶ್ ರಾಜಿನಾಮೆ ಕೊಡಬೇಕು. ಸೂಕ್ತ ಹೊಣೆ ಹೊರಬೇಕು. ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು.

ಶಾರದಾ ಅಪ್ಪಾಜಿ; ಜೆಡಿಎಸ್ ಮುಖಂಡರು

ಭದ್ರಾವತಿಯಲ್ಲಿ ಫಾರೆಸ್ಟ್, ಮರಳು, ಇಸ್ಪೀಟ್, ಗಾಂಜಾ ಮಾಫಿಯಾ ಇದೆ. ಎಲ್ಲದೂ ಶಾಸಕರ ವ್ಯಾಪ್ತಿಯಲ್ಲಿರುವವರೇ. ದೂರು ಒಯ್ದರೆ ಬಸವೇಶ್ ಹತ್ರ ಹೋಗ್ಬನ್ನಿ, ಶಾಸಕರ ಮನೆಗೆ ಹೋಗ್ಬನ್ನಿ ಅನ್ನೋ ಮಾತು ಪೊಲೀಸರಿಂದ ಬರುತ್ತಿದೆ.
ಮಹಿಳಾ ಅಧಿಕಾರಿಗಳಿಗೆ ಧಮಕಿ ಸಿಗ್ತಿವೆ. ಭದ್ರಾವತಿಯಲ್ಲಿ ಎಂ ಎಲ್ ಎ ಎಲ್ಲಿದಾರೆ? ಏನೇ ಕಾರ್ಯಕ್ರಮವಿದ್ರೂ ಅಣ್ಣತಮ್ಮಂದಿರು, ಮಕ್ಜಳೇ ಮಾಡ್ತಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ಕೆಲಸ ಮಾಡುವಂತಿಲ್ಲ…ಎಂ ಎಲ್ ಎ ಮನೆಗೇ ಕುಳಿತು ಕೆಲಸ.

ನಾನೇ ಎಷ್ಟೇ ದೂರು ಕೊಟ್ಟರೂ ಪ್ರಯೋಜನ ಆಗ್ತಿಲ್ಲ. ಬೆಳಿಗ್ಗೆ ಎದ್ದರೆ ಫೋನ್ ಕಾಲ್ ಗಳು ಬರುತ್ತವೆ. ಭದ್ರಾವತಿಯ ವಿಷಯದಲ್ಲಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಎರಡು ವರ್ಷಗಳಿಂದ ಅಭಿವೃದ್ಧಿ ಕೆಲಸಗಳಾಗಿಲ್ಲ.
ದೊಡ್ಡೇರಿ ಭಾಗದಲ್ಲಿ 15 ಎಕರೆ ಮರ ಕಡ್ದಿದ್ದಾರೆ. ವಾಚರ್ ಗೆ ಕೂಡಿ ಹಲ್ಲೆ ಮಾಡಿದ್ದಾರೆ. ಭದ್ರಾವತಿ ಅಡವಿಡೋ ಕೆಲಸ ಮಾಡಲಾಗುತ್ತಿದೆ. ಹೆಣ್ಣುಮಕ್ಕಳು ತಲೆ ಎತ್ತಿ ನಡೆಯುವಂತಿಲ್ಲ.

12 ಕಡೆ ಇಸ್ಪೀಟ್ ಆಡಿಸ್ತಾರೆ. ಶಿಫ್ಟ್ ವೈಸ್ ಇಸ್ಪೀಟ್ ಆಡಿಸ್ತಿದ್ದಾರೆ. ಯಾವ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಅಟ್ರಾಸಿಟಿ, ಕೊಲೆ ಕೇಸುಗಳನ್ನು ಹಾಕಿಸ್ತಾರೆಂಬ ಭಯದಲ್ಲಿ ಜನ.

ಶುಕ್ರವಾರ ಫೆ.14ರ ಬೆಳಿಗ್ಗೆ 10.30 ರಿಂದ ದೊಡ್ಡ ಪ್ರತಿಭಟನೆ…ಮಾಧವಾಚಾರ್ ಸರ್ಕಲ್ ನಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ.

ಮಧುಕುಮಾರ್, ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷರು.

ಭದ್ರಾವತಿಯಲ್ಲಿ ಪೂರ್ತಿ ಇಸ್ಪೀಟ್ ದಂಧೆ ನಡೆಸ್ತಿರೋದು ಶಾಸಕರ ಪುತ್ರ ಬಸವೇಶ್, ಗಣೇಶ್. ರಾಜ್ಯದ ಬೇರೆ ಬೇರೆ ಕಡೆಯಿಂದ ಇಸ್ಪೀಟ್ ಆಡೋಕೆ ಭದ್ರಾವತಿಗೆ ಬರ್ತಿದ್ದಾರೆ. ಭದ್ರಾವತಿಯಲ್ಲಿ ಗೋವಾದಲ್ಲಿರೋ ರೀತಿ ಕ್ಯಾಸಿನೋ ಮಾಡಿಬಿಡಲಿ…
ಪ್ರಶ್ನಿಸಿದರೆ ಅಟ್ರಾಸಿಟಿ ಕೇಸ್. ಅಟ್ರಾಸಿಟಿ ಹಣ ಪಡೆಯುವಲ್ಲೂ ಯೋಜನೆ. ಭದ್ರಾವತಿ ಮಾಫಿಯಾಕ್ಕೆ ಕಡಿವಾಣ ಹಾಕಿಲ್ಲ ಅಂದ್ರೆ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಅನಿವಾರ್ಯವಾಗುತ್ತೆ.

ದೀಪಕ್ ಸಿಂಗ್, ರಾಕೇಶ್ ಡಿಸೋಜಾ, ಗೀತಾ, ನಿಖಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.