ಶಿವಮೊಗ್ಗದ ಮೂರು ಭೀಕರ ಕೊಲೆಗಳು ಪ್ರಮುಖ ಆರೋಪಿ ಆದಿಲ್ ಅಂದರ್

ಶಿವಮೊಗ್ಗದ ಮೂರು ಭೀಕರ ಕೊಲೆಗಳು

ಪ್ರಮುಖ ಆರೋಪಿ ಆದಿಲ್ ಅಂದರ್

ಎರಡು ಭೀಕರ ಕೊಲೆಗೆ ಮುನ್ನ ಕೊಲೆಯಾದವರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಜನತಾ ಮಟನ್ ಸ್ಟಾಲ್ ಮಾಲೀಕ, ರೌಡಿ ಶೀಟರ್ ಯಾಸೀನ್ ಖುರೇಷಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನಿನ್ನೆ ರಾತ್ರಿಯಿಂದ ಚಿಕಿತ್ಸೆ ಮುಂದುವರೆದಿತ್ತು. ಇದೀಗ ಬಂದ ಮಾಹಿತಿಯ ಪ್ರಕಾರ ಆತ ಸಾವು ಕಂಡಿದ್ದಾನೆ. ಆತನ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ರವಾನಿಸಲಾಗಿದೆ ತಿಳಿದು ಬಂದಿದೆ.

ನಿನ್ನೆ ಸಂಜೆ ನಡೆದ ರೌಡಿಗಳ ತಂಡವೊಂದು ಲಷ್ಕರ್ ಮೊಹಲ್ಲಾದ ಜನತಾ ಮಟನ್ ಸ್ಟಾಲ್ ಗೆ ನುಗ್ಗಿ ಯಾಸೀನ್ ಖುರೇಷಿ ಮೇಲೆ ಮಚ್ಚುಗಳನ್ನು ಬೀಸಿದ್ದರ ಪರಿಣಾಮ ಖುರೇಷಿಯ ತಲೆಚಿಪ್ಪು ಹಾರಿತ್ತು. ಆತ ಗಂಭೀರವಾಗಿ ಗಾಯಗೊಂಡಿದ್ದ.

ಇದನ್ನು ಕಂಡ ಯಾಸೀನ್ ಖುರೇಷಿ ಕಡೆಯ ಹುಡುಗರು ಕೂಡಲೇ ಈ ಹಲ್ಲೆಕೋರ ಗ್ಯಾಂಗ್ ನ ಮೇಲೆ ಮುಗಿಬಿದ್ದು, ಇಬ್ಬರನ್ನು ಕೆಡವಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಲ್ಲದೇ ಸೈಜುಗಲ್ಲು, ಚಪ್ಪಡಿಕಲ್ಲುಗಳನ್ನು ತಲೆ ಮೇಲೆ ಹೊತ್ತುಹಾಕಿ ಭೀಕರವಾಗಿ ಕೊಂದಿದ್ದರು. ಈ ಸಂದರ್ಭದಲ್ಲಿ ಶೇಬು @ ಶೋಯಬ್, ಗೌಸ್ ಮೃತಪಟ್ಟಿದ್ದರು.

ತೀವ್ರ ಹಲ್ಲೆಗೊಳಗಾದ ಯಾಸೀನ್ ಖುರೇಷಿಯನ್ನು ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವು ಕಂಡಿರೋ ಮಾಹಿತಿ ಇದೀಗ ಹೊರಬಿದ್ದಿದೆ.

ಕ್ರಿಕೆಟ್ ವಿಚಾರದಲ್ಲಿ ಕಿರಿಕ್ಕಾಗಿದ್ದರಿಂದ ಆದಿಲ್ ಗ್ಯಾಂಗಿನ ಹುಡುಗನನ್ನು ಕರೆದು ಇದೇ ಯಾಸೀನ್ ಖುರೇಷಿ ಧಮಕಿ ಹಾಕಿ ಕಳಿಸಿದ್ದ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಎರಡೂ ಗ್ಯಾಂಗ್ ಗಳ ನಡುವೆ ಜಗಳಗಳು ನಡೆಯುತ್ತಲೇ ಇದ್ದವು.ಸಣ್ಣದೊಂದು ಕಾರಣಕ್ಕಾಗಿ ಮೂರು ಕೊಲೆಗಳು ನಡೆದಿರುವುದು ಇಡೀ ಶಿವಮೊಗ್ಗವನ್ನೇ ನಡುಗಿಸಿವೆ.