*ದೇಶ್ ನೀಟ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್.ಪತ್ರಿಕಾಗೋಷ್ಠಿ* *Neet 2025 ಪರೀಕ್ಷೆ ಫಲಿತಾಂಶ: ಚೊಚ್ಚಲ ಪ್ರಯತ್ನದಲ್ಲಿಯೇ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅದ್ಭುತ ಸಾಧನೆ* *ಶೈಕ್ಷಣಿಕ ವರ್ಷ 2026-27 ಪ್ರವೇಶ ಪ್ರಕ್ರಿಯೆ ಆರಂಭ*

*ದೇಶ್ ನೀಟ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್.ಪತ್ರಿಕಾಗೋಷ್ಠಿ*

*Neet 2025 ಪರೀಕ್ಷೆ ಫಲಿತಾಂಶ: ಚೊಚ್ಚಲ ಪ್ರಯತ್ನದಲ್ಲಿಯೇ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅದ್ಭುತ ಸಾಧನೆ*

*ಶೈಕ್ಷಣಿಕ ವರ್ಷ 2026-27 ಪ್ರವೇಶ ಪ್ರಕ್ರಿಯೆ ಆರಂಭ*

2025ನೇ ಸಾಲಿನ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವೈದ್ಯಕೀಯ ಪ್ರವೇಶ ಸಿದ್ಧತೆಗಾಗಿ ಮೀಸಲಾದ ಮಲೆನಾಡಿನ ಪ್ರಪ್ರಥಮ ರೆಸಿಡೆನ್ಸಿಯಲ್ ಸಂಸ್ಥೆಯಾದ ದೇಶ್ ನೀಟ್ ಅಕಾಡೆಮಿ ಮೊದಲ ಬ್ಯಾಚ್ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದೆ. ಮಲೆನಾಡಿನ ಜನರಿಗೆ ನೀಡಿದ ಭಾಷೆಯನ್ನು ಈ ಮೂಲಕ ಈಡೇರಿಸಿದ್ದೇನೆ. ಇದೊಂದು ಐತಿಹಾಸಿಕ ಸಾಧನೆ ಎಂದು ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಬೆಂಗಳೂರು, ಹೈದ್ರಾಬಾದಿಗೆ ಕಳಿಸುವ ಬದಲು ಶಿವಮೊಗ್ಗದಲ್ಲೇ ಆ ವ್ಯವಸ್ಥೆ ಕಲ್ಪಿಸಿ ಸಫಲಗೊಂಡಿದ್ದೇನೆ ಎಂದರು.

ಈ ಬಾರಿಯ ನೀಟ್ 2025 ಫಲಿತಾಂಶದಲ್ಲಿ ದೇಶ್ ಅಕಾಡೆಮಿಯು ದಾಖಲಾತಿ ಪಡೆದ 120 ವಿದ್ಯಾರ್ಥಿಗಳಲ್ಲಿ 60 ಮಕ್ಕಳು ವೈದ್ಯಕೀಯ ಕ್ಷೇತ್ರಕ್ಕೆ ಆಯ್ಕೆಯಾಗಿ ವಿವಿಧ ಕೋರ್ಸ್ ಗಳಿಗೆ ಹೊರಹಮ್ಮಿದ್ದಾರೆ. ಮಲೆನಾಡು ಭಾಗದ ಶಿವಮೊಗ್ಗದ ಮೊದಲ ವಸತಿಯುತ ಕೋಚಿಂಗ್ ಸೆಂಟರ್ ಎಂದು ಹೆಸರಾಗಿರುವ ದೇಶ್ ಅಕಾಡೆಮಿಯು ಮೊದಲ ಪ್ರಯತ್ನದಲ್ಲಿಯೇ ಅತ್ಯುತ್ತಮ ಸಾಧನೆಯನ್ನು ಮಾಡಿದೆ ಎಂದರು.

ಎಂಬಿಬಿಎಸ್ 39,ಬಿಡಿಎಸ್-10, ಬಿಎಎಂಎಸ್-17,ವೆಟರ್ನರಿ-03, ಹೀಗೆ ಒಟ್ಟು69 ಮೆಡಿಕಲ್ ಸೀಟುಗಳು ದಕ್ಕಿವೆ.

ಒಟ್ಟು 69 ಮಕ್ಕಳನ್ನು ವೈದ್ಯಕೀಯ ಕ್ಷೇತ್ರಕ್ಕೆ ನೀಡಿರುವ ಹೆಮ್ಮೆ ನಮ್ಮ ದೇಶ್ ನೀಟ್ ಅಕಾಡೆಮಿಯದ್ದು.

41% ರಷ್ಟು ಫಲಿತಾಂಶವನ್ನು ಮುಡಿಗೇರಿಸಿಕೊಂಡಿರುವ ದೇಶ್ ನೀಟ್ ಅಕಾಡೆಮಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಫಲಿತಾಂಶವನ್ನು ಕೊಡುವುದರ ಬಗ್ಗೆ ಗುರಿಯನ್ನು ಹೊಂದಿದ್ದೇವೆ ಎಂದರು.

ಈ ರೀತಿಯ ಉನ್ನತ ಮಟ್ಟದ ಶೈಕ್ಷಣಿಕ ಸಾಧನೆಯಿಂದ ಅಕಾಡೆಮಿಗೆ ಕೀರ್ತಿಯನ್ನು ತಂದು ಕೊಟ್ಟಿರುವ ಹಾಗೂ ವೈದ್ಯಕೀಯ ಕನಸು ಕಂಡು ಶ್ರಮಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಗೆ ದೇಶ್ ನೀಟ್ ಅಕಾಡೆಮಿಯ ಅಡಳಿತ ಮಂಡಳಿ ಮ್ಯಾನೇಜಿಂಗ್ ಡೈರೆಕ್ಟರ್ ಅವಿನಾಶ್ ಎ.ಆರ್ ರವರು ಹಾಗೂ ಬೋಧಕ — ಬೋಧಕೇತರ ಸಿಬ್ಬಂದಿಯ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದರು.

2026-27 ನೇ ಸಾಲಿನ ಶೈಕ್ಷಣಿಕ ತೃತೀಯ ವರ್ಷದ crash course ಮತ್ತು long term ತರಬೇತಿಗೆ ಪ್ರವೇಶ ಪ್ರಾರಂಭವಾಗಿದ್ದು, ಅಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು. ದೇಶಾದ್ಯಂತ ನೀಟ್ ತರಬೇತಿಯಲ್ಲಿ ಪ್ರಮುಖ ಹೆಸರಾಗಲು ನಾವು ಶ್ರಮಿಸುತ್ತಿರುವಾಗ ಈ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಲು ಮುಂಬರುವ ಪೋಷಕರು, ವಿದ್ಯಾರ್ಥಿಗಳು ಮತ್ತು ಮಾಧ್ಯಮ ಹಾಗೂ ಮಾಧ್ಯಮ ಮಿತ್ರರು ದೇಶ್ ನೀಟ್ ಅಕಾಡೆಮಿಯನ್ನು ಪ್ರೋತ್ಸಾಹಿಸಲು ಕೋರುತ್ತೇವೆ ಎಂದರು.

ಉಪಸ್ಥಿತರು:
ಪ್ರದೀಜ್.ಎಸ್ (ಪ್ರಧಾನ ವ್ಯವಸ್ಥಾಪಕರು)

ನಾಗರಾಜ್ ಆಚಾರ್, (ಮಾರ್ಕೆಟಿಂಗ್ ಮ್ಯಾನೇಜರ್)

ಬ್ರಹ್ಮ ಗಾಯಕ್ ವಾಡ್ ಶೈಕ್ಷಣಿಕ ಮುಖ್ಯಸ್ಥರು (ರಸಾಯನ ಶಾಸ್ತ್ರ ವಿಭಾಗ)

ದಾಮೋದರ ರೆಡ್ಡಿ ಉಪನ್ಯಾಸಕರು( ಪ್ರಾಣಿಶಾಸ್ತ್ರ ವಿಭಾಗ)

ಗೋವರ್ಧನ,ಉಪನ್ಯಾಸಕರು (ಸಸ್ಯ ಶಾಸ್ತ್ರ ವಿಭಾಗ)

ಯುಗಂದರ್, ಉಪನ್ಯಾಸಕರು (ಭೌತ ಶಾಸ್ತ್ರ ವಿಭಾಗ)

ವಿಜಯ್ ಕುಮಾರ್, (ಕ್ಯಾಂಪಸ್ ಕೋ-ಆರ್ಡಿನೇಟರ್)