SIR ವಿಚಾರದಲ್ಲಿ ಜನರ ಮದ್ಯೆ ಇರಬೇಕಾದ ರಾಜಕೀಯ ಪಕ್ಷಗಳು ಕಾಣೆಯಾಗಿವೆ; ಎಸ್.ಮುಜಿಬುಲ್ಲ ಆಕ್ರೋಶ

 SIR ವಿಚಾರದಲ್ಲಿ ಜನರ ಮದ್ಯೆ ಇರಬೇಕಾದ ರಾಜಕೀಯ ಪಕ್ಷಗಳು ಕಾಣೆಯಾಗಿವೆ; ಎಸ್.ಮುಜಿಬುಲ್ಲ ಆಕ್ರೋಶ

ರಾಜ್ಯದ ಎಲ್ಲಾ ಕಡೆ ಚುನಾವಣಾ ಆಯೋಗದ ವತಿಯಿಂದ SIR ಮ್ಯಾಪಿಂಗ್ ನಡೆಯುತ್ತಿದೆ. ಈ ಪ್ರಕ್ರಿಯೆಯನ್ನು BLO ಗಳು ಮಾಡುತ್ತಿದ್ದಾರೆ. ಕೆಲವು ಕಡೆ BLO ಗಳ ಅಸಹಕಾರದ ಕಾರಣ ಮತ್ತು SIR ಬಗ್ಗೆ ಸರಿಯಾಗಿ ಮಾಹಿತಿಲ್ಲದವರು ಹಾಗೂ ಬಹಳಷ್ಟು ಅನಕ್ಷತ್ರಸ್ಥರು ತಮ್ಮ ದಾಖಲಾತಿಗಳನ್ನು ಸಂಗ್ರಹಿಸಲು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಮಹಾನಗರ ಪಾಲಿಕೆ, ತಾಲ್ಲೂಕು ಕಚೇರಿ ಗಳಿಗೆ ಅಲೆದಾಡುವಂತಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸೈಯದ್ ಮುಜೀಬುಲ್ಲಾ ಆರೋಪಿಸಿದ್ದಾರೆ.

ಜಿಲ್ಲೆಯ ಹಲವಾರು ಕಡೆ BLO ಗಳು ಮ್ಯಾಪಿಂಗ್ ಪ್ರಕ್ರಿಯೆ ಇನ್ನೂ ಪ್ರಾರಂಭಮಾಡಿರುವುದಿಲ್ಲ. ಇವೆಲ್ಲವುಗಳಿಂದಾಗಿ ಎಲ್ಲಾ ವರ್ಗದ ಜನರಿಗೆ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಜನರ ಮದ್ಯೆ ಇದ್ದು SIR ವಿಚಾರವಾಗಿ ಜನರಿಗೆ ಸಹಕರಿಸಬೇಕಾದ ರಾಜಕೀಯ ಪಕ್ಷಗಳು ಮತ್ತು ಹಲವಾರು ದಶಕಗಳಿಂದ ಅಲ್ಪಸಂಖ್ಯಾತರ ಮತಗಳನ್ನು ಪಡೆದು ಅಧಿಕಾರ ಅನುಭವಿಸುತ್ತಿರುವ ಮತ್ತು ಚುನಾವಣೆ ಸಂಧರ್ಭದಲ್ಲಿ ಮತಗಳಿಗಾಗಿ ಮನೆಗಳ ಬಾಗಿಲಿಗೆ ಬಂದು ಕೈಕಾಲು ಹಿಡಿದು ಮತಭಿಕ್ಷೆ ಬೇಡುವ ರಾಜಕೀಯ ಮುಖಂಡರುಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಾಣೆಯಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಇದೆಲ್ಲವನ್ನು ಗಮನಿಸಿದರೆ, ಇವರುಗಳಿಗೆ ಜನರಸಮಸ್ಯೆ ಬಗೆಹರಿಸುವ ಇಚ್ಚಾಶಕ್ತಿ ಕೊರತೆ ಇರುವುದು ಸ್ಪಷ್ಟವಾಗುತ್ತದೆ ಎಂದು ಕ. ರಾ. ಅಲ್ಪಸಂಖ್ಯಾತರ ವೇದಿಕೆ ಜಿಲ್ಲಾಧ್ಯಕ್ಷ ಸಯ್ಯದ್ ಮುಜಿಬುಲ್ಲ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.