*ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಪ್ರಕರಣ…* *ಇಬ್ಬರು ಸಹೋದರಾದ ಮನುಕುಮಾರ್- ಮಧು ಕುಮಾರ್ ಗೆ 2 ವರ್ಷ ಜೈಲು- ದಂಡ ವಿಧಿಸಿದ ಕೋರ್ಟ್*

*ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಪ್ರಕರಣ…*

*ಇಬ್ಬರು ಸಹೋದರಾದ ಮನುಕುಮಾರ್- ಮಧು ಕುಮಾರ್ ಗೆ 2 ವರ್ಷ ಜೈಲು- ದಂಡ ವಿಧಿಸಿದ ಕೋರ್ಟ್*

ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲೆತ್ನಿಸಿದ್ದ ಸಹೋದರರಿಬ್ಬರಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡು ವರ್ಷ ಜೈಲು, 17,500₹ ತಲಾ ದಂಡ ವಿಧಿಸಿ ಹಲ್ಲೆಗೊಳಗಾಗಿದ್ದ ಪಿಎಸ್ ಐಗೆ 20 ಸಾವಿರ ರೂ., ಪರಿಹಾರ ನೀಡಲು ಆದೇಶಿಸಿದೆ.

*ಏನಿದು ಪ್ರಕರಣ? ಪೊಲೀಸ್ ಪ್ರಕಟಣೆ ಏನು ಹೇಳುತ್ತೆ?*

ಪಿರ್ಯಾದುದಾರರಾದ ನವೀನ್ ಮಠಪತಿ ಪಿಎಸ್ಐ ಹಾಗೂ ಕುಂಸಿ ಠಾಣೆಯ ಸಿಬ್ಬಂದಿಯವರು ಗುನ್ನೆ ನಂ: 163/2020ರಲ್ಲಿ *ಗಾಂಜಾವನ್ನು ಅಮಾನತ್ತು ಪಡಿಸಿಕೊಳ್ಳಲು ಆರೋಪಿತರ ಮನೆಗೆ ಹೋಗಿದ್ದು,* ಪೊಲೀಸರು ಮಧುಕುಮಾರ್ ನ್ನು ತನಿಖೆಯ ಸಂಬಂಧ ಕರೆದುಕೊಂಡು ಹೋಗುತ್ತಿರುವಾಗ, ತಮ್ಮನಾದ *ಮನು ಕುಮಾರ್ ದೊಣ್ಣೆಯಿಂದ ಕೊಲೆ ಮಾಡುವ ಉದ್ದೇಶದಿಂದ ಪಿಎಸ್ಐ ರವರಿಗೆ ಹೊಡೆದಿದ್ದು,* ನಂತರ *ಮಧುಕುಮಾರ್ ಪೊಲೀಸರಿಂದ ತಪ್ಪಿಸಿಕೊಂಡು ಮನುಕುಮಾರ್ ಹತ್ತಿರವಿದ್ದ ದೊಣ್ಣೆಯನ್ನು ತೆಗೆದುಕೊಂಡು ಪೊಲೀಸ್ ಸಿಬ್ಬಂದಿಗೆ ಹೊಡೆದು,* ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿ ತಪ್ಪಿಸಿಕೊಂಡು ಓಡಿಹೋಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿ ಹಲ್ಲೆ ಮಾಡಿದವರ ವಿರುದ್ಧ ಪಿಎಸ್ಐ ರವರು ನೀಡಿದ ದೂರಿನ ಮೇರೆಗೆ ಕುಂಸಿ ಪೊಲೀಸ್ ಠಾಣೆ *ಗುನ್ನೆ ನಂ 164/2020 ಕಲಂ 324, 504, 307, 353, 332, 186, 323, 506 ಸಹಿತ 34 ಐಪಿಸಿ ರಿತ್ಯಾ* ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಸಂಜೀವ್ ಕುಮಾರ್ ಡಿವೈಎಸ್ಪಿ* ಶಿವಮೊಗ್ಗ ಉಪವಿಭಾಗ ರವರು ಪ್ರಕರಣದ ತನಿಖೆ ಪೂರೈಸಿ, *ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು* ಸಲ್ಲಿಸಿರುತ್ತಾರೆ.

*ಘನನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀ ಶಾಂತರಾಜ್ ಸರ್ಕಾರಿ ಅಭಿಯೋಜಕರವರು* ವಾದ ಮಂಡಿಸಿದ್ದು *3 ನೇ ಹೆಚ್ಚುವರಿ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ* ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಯಶವಂತ ಕುಮಾರ್ ರವರು ದಿನಾಂಕ:06-02-2026 ರಂದು *ಎ1 ಮನುಕುಮಾರ್ @ ಮನು,* 23 ವರ್ಷ, ವಾಸ ನಗರ ರಸ್ತೆ ಮಂಡಗಟ್ಟ ಶಿವಮೊಗ್ಗ (ತಾ) ಮತ್ತು *ಎ2 ಮಧುಕುಮಾರ್ @ ಮಧು,* 24 ವರ್ಷ, ವಾಸ ನಗರ ರಸ್ತೆ ಮಂಡಗಟ್ಟ ಶಿವಮೊಗ್ಗ (ತಾ) *ಕಲಂ 332, 353 ಸಹಿತ 34 ಐಪಿಸಿ ಕಾಯಿದೆಗೆ 2 ವರ್ಷ ಕಾರಾವಾಸ ಮತ್ತು ಪ್ರತಿಯೊಬ್ಬರಿಗೂ 17,500 ರೂ ದಂಡವನ್ನು ವಿಧಿಸಿದ್ದು, ಪಿರ್ಯಾದುದಾರರಾದ ನವೀನ್ ಮಠಪತಿ ಪಿಎಸ್ಐ ರವರಿಗೆ 20,000/- ರೂ ಪರಿಹಾರವನ್ನು, ಸಾಕ್ಷಿದಾರರಾದ ಬಸವಂತಪ್ಪರವರಿಗೆ 10,000/- ರೂ ಪರಿಹಾರವನ್ನು ನೀಡಲು* ಆದೇಶಿಸಿರುತ್ತದೆ.