ಬೆಂಕಿ ಉಪಯೋಗಿಸದೇ ಅಡುಗೆ ತಯಾರಿಸೋ ಸ್ಪರ್ಧೆ

ಬೆಂಕಿ ಉಪಯೋಗಿಸದೇ ಅಡುಗೆ ತಯಾರಿಸೋ ಸ್ಪರ್ಧೆ

ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪನಕೊಪ್ಪ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನು ಭವ ಕಾರ್ಯಕ್ರಮದ ಅಡಿಯಲ್ಲಿ ಹೊಸ ವರ್ಷದ ಪ್ರಯುಕ್ತ ಮಹಿಳೆಯರಿಗಾಗಿ ಬೆಂಕಿ ಬಳಸದೆ ಅಡುಗೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಿದ್ದರು.

ಈ ಸ್ಪರ್ಧೆಯಿಂದ ಬೆಂಕಿಯನ್ನು ಉಪಯೋಗಿಸದೆ ವಿಧವಿಧವಾದ ಅಡುಗೆಯನ್ನು ಹೇಗೆ ತಯಾರಿಸಬಹುದೆಂದು ಗ್ರಾಮಸ್ಥರೆಲ್ಲರೂ ತಿಳಿದುಕೊಂಡರು. ಮಸಾಲೆ ಮಂಡಕ್ಕಿ , ಚಿಪ್ಸ್ ಮಸಾಲೆ, ಹುಣಸೆ ಹಣ್ಣಿನ ಪಾನೀಯ, ಬಾಳೆಹಣ್ಣಿನ ಮಿಲ್ಕ್ ಶೇಕ್, ಬ್ರೆಡ್ ಚಮ್ ಚಮ್ ಮತ್ತಿತರ ಅಡುಗೆಗಳನ್ನು ತಯಾರಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಸಹ ಇಡಲಾಗಿತ್ತು.

ದಿನನಿತ್ಯ ಮನೆ ಕೆಲಸದಲ್ಲಿ ತೊಡಗಿರುವ ಗೃಹಿಣಿಯರು ಮೊದಲ ಬಾರಿಗೆ ಈ ತರಹದ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ತಮಗೆ ಮನೋಲ್ಲಾಸ ತಂದಿತು ಎಂದು ಹೇಳಿಕೊಂಡರು. ಗ್ರಾಮಸ್ಥರೆಲ್ಲರೂ ಬಹಳ ಕುತೂಹಲದಿಂದ ಸ್ಪರ್ಧೆಯನ್ನು ವೀಕ್ಷಿಸಲು ಬಂದಿದ್ದರು.