ಡಾ. ಶ್ವೇತಾ ಜಿ.ಎನ್. ಆಚಾರ್ಯರಿಗೆ ಯುವ ಚೈತ‌ನ್ಯ ಅವಾರ್ಡ್ ಹಾಗೂ ಬ್ರಿಟೀಷ್ ಎಮರ್ಜೆನ್ ಟ್ಯಾಲೆಂಟ್ ಮಹಿಳಾ ವಿಭಾಗದ ಗೌರವ ಪ್ರಶಸ್ತಿ*

*ಡಾ. ಶ್ವೇತಾ ಜಿ.ಎನ್. ಆಚಾರ್ಯರಿಗೆ ಯುವ ಚೈತ‌ನ್ಯ ಅವಾರ್ಡ್ ಹಾಗೂ ಬ್ರಿಟೀಷ್ ಎಮರ್ಜೆನ್ ಟ್ಯಾಲೆಂಟ್ ಮಹಿಳಾ ವಿಭಾಗದ ಗೌರವ ಪ್ರಶಸ್ತಿ*

ಹೊಲಿಗೆ ತರಬೇತಿ ತಜ್ಞೆ, ಮೇಕಪ್ ಆರ್ಟಿಸ್ಟ್, ವಸ್ತ್ರ ವಿನ್ಯಾಸಕಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಉದ್ಯಮಿ ಡಾ.ಶ್ವೇತಾ ಜಿ.ಎನ್.ಆಚಾರ್ಯ ರವರಿಗೆ ಏಷ್ಯನ್ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ‌ ನೀಡುವ ಮಹಿಳಾ ವಿಭಾಗದ ಬ್ರಿಟೀಷ್ ಎಮರ್ಜೆನ್ ಟ್ಯಾಲೆಂಟ್ ಗೌರವ ಪ್ರಶಸ್ತಿ ಲಭಿಸಿದೆ.

ಹಲವು ವರ್ಷಗಳಿಂದ ಹಲವಾರು ಜನಸೇವಾ, ಸಮಾಜಮುಖಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಶಸ್ತಿ ನೀಡಲಾಗಿದೆ.

ಶಿವಮೊಗ್ಗ ಸಮೀಪದ ರಿಪ್ಪನ್ ಪೇಟೆಯಲ್ಲಿ ನೊಂದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ, ಅವರೊಳಗೆ ಚೈತನ್ಯ ತುಂಬುತ್ತಿರುವ ಹಾಗೂ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಶ್ವೇತಾ, ವಿದ್ಯಾರ್ಥಿನಿಯರಿಗೂ ವಿಶೇಷವಾಗಿ ಹಾಗೂ ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿನಿಯರು ಸ್ವಂತ ಆರ್ಥಿಕ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದ್ದಾರೆ.

ಶ್ರೀಮತಿ ಶ್ವೇತಾರವರ ಸಾಧನೆ ಗುರುತಿಸಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಮೇಕಪ್ ಡಿಸೈನ್ ಟೆಕ್ನಾಲಜಿ ಸಂಸ್ಥೆಯು ಶ್ರೀಮತಿ ಶ್ವೇತಾರವರಿಗೆ ಯುವ ಚೈತನ್ಯ ಗೌರವ ನೀಡಿ ಸನ್ಮಾನಿಸಿದೆ.